ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬಗೆಯ ಒಳ ಉಡುಪು

Last Updated 22 ಜನವರಿ 2016, 19:47 IST
ಅಕ್ಷರ ಗಾತ್ರ

ಹೊಸ ವರ್ಷದಲ್ಲಿ ಹೊಸದೇನಿರುತ್ತದೊ ಬಿಡುತ್ತದೊ, ಆದರೆ ಫ್ಯಾಷನ್‌ ಜಗತ್ತಿನಲ್ಲಿ ಖಂಡಿತ ಹೊಸ ನೋಟವೊಂದು ಕಾಣಸಿಗುತ್ತದೆ. ಫ್ಯಾಷನ್‌ ಪರಿಣತರು ಕಿನ್ನರರ ಕತೆಗಳಿಂದ ಪ್ರಭಾವಿತರಾದರೊ, 1980 ಫ್ಯಾಷನ್‌ನತ್ತ ಹೊರಳಿ ನೋಡಿದರೊ ಅಂತೂ ಅಂತಹ ಶೈಲಿಯ ಲಾಂಜರೆ(lingerie)ಗಳು ಮೆರೆಯಲಿವೆ. Clovia.comನ ಸ್ಥಾಪಕಿ ನೇಹಾ ಕಾಂತ್‌, 2016ರ ಲಾಂಜರೆ (ಒಳ ಉಡುಪು)ಗಳ ಟ್ರೆಂಡ್‌ಗಳ ಮಾಹಿತಿ ಹಂಚಿಕೊಳ್ಳುತ್ತಾರೆ.

ಕಿನ್ನರ ಕತೆ ಒಳ ಉಡುಪು: ಸಿಂಡರೆಲಾ, ರಾಪುಂಜೆಲ್‌ಗಳಂತಹ ಡಿಸ್ನಿ ರಾಜಕುಮಾರಿಯರ ಕತೆಗಳಿಂದ ಪ್ರೇರಿತರಾಗಿ ಕಿನ್ನರ ಕತೆ ಶೈಲಿಗಳಿಗೆ ಈಗ ಸೆಕ್ಸಿ ತಿರುವು ಒದಗಿದಂತಾಗಿದೆ. ಈ ಪಾತ್ರಗಳ ಕೆಲವು ನಾಜೂಕುತನವನ್ನು ಪಡೆದು, ಸ್ವಲ್ಪ ಪ್ಲೇಫುಲ್‌ನೆಸ್‌ ಸೇರಿಸಿದ್ದಾರೆ. ಸೂಕ್ಷ್ಮ ವಿವರಗಳು ಮತ್ತು ರೇಷ್ಮೆ, ಸ್ಯಾಟಿನ್‌ನಂತಹ ಮೃದುವಾದ ಬಟ್ಟೆ ಹಾಗೂ ನಿರಿಗೆಗಳಿಂದ ಮೇಲುಸ್ತರದ ಒಳ ಉಡುಪುಗಳು ಸಿದ್ಧವಾಗಿವೆ.

ವಿಂಟಾಜ್‌ ಸಂಗ್ರಹ: 1980ರ ದಶಕದ ಹೈ ಕಟ್‌ ಬಾಟಮ್‌ಗಳು ಮತ್ತು 1990ರ ದಶಕದ ಕನಿಷ್ಠ ಸೌಂದರ್ಯ ಮಾನದಂಡಗಳು ಕ್ರಮೇಣ ಮರಳುತ್ತಿವೆ. ಕ್ಯೂಬಾ ಹೀಲ್‌ ಸ್ಟಾಕಿಂಗ್‌ಗಳು,  ಸ್ಟೈಲಿಶ್‌ ನಡು ಸಿಂಚರ್‌ಗಳು(ನಡುವನ್ನು ಬಿಗಿಯಾಗಿ ಅಪ್ಪಿಕೊಳ್ಳುವ ವಿನ್ಯಾಸದ ಸಿಂಚರ್‌ಗಳು ಲೆಗಿನ್‌ಗಳ ಮುಂದುವರಿದ ರೂಪದಂತೆ ಇರುತ್ತವೆ) ಸುಂದರವಾಗಿ ಎದ್ದು ಕಾಣುವಂತೆ ವಿವಿಧ ವಿನ್ಯಾಸಕಾರರು ಪುನರ್‌ ವಿನ್ಯಾಸಗೊಳಿಸಿದ್ದಾರೆ.

ಸಾವಯವ ಒಳ ಉಡುಪು: ಬ್ರಾ ಮತ್ತು ಪ್ಯಾಂಟಿ ಸೆಟ್‌ಗಳಿಂದ ಹಿಡಿದು ಹೈ ವೇಸ್ಟೆಡ್‌ ಪ್ಯಾಂಟಿಗಳ ಜತೆ ಸ್ಪೋರ್ಟಿ ಟೇಪ್‌ ಬ್ರಾಗಳಂತಹ ಅತ್ಯಾಧುನಿಕ ಒಳ ಉಡುಪುಗಳು ಸಾವಯವ ಹತ್ತಿಯಿಂದ ತಯಾರಾಗಿದ್ದು ತ್ವಚೆಯ ಉಸಿರಾಟಕ್ಕೆ ಸಹಾಯಕವಾಗಿವೆ. ಹಾಗಾಗಿ ಆತ್ಮೀಯ ಉಡುಗೆಯನ್ನು ಆರಾಮದಾಯಕವಾಗಿಸಿವೆ. ರಾಸಾಯನಿಕ ಅಂಶರಹಿತ ಸಾವಯವ ಸಂಗ್ರಹಗಳು ನಿತ್ಯದ ಬಳಕೆಗೆಂದೇ ತಯಾರಾಗಿದ್ದು ವಿವಿಧ ವರ್ಣಗಳು, ಕಟ್‌ಗಳು, ಅಳತೆಗಳಲ್ಲಿವೆ.

ಪಾಪ್‌ ವರ್ಣಗಳು: ಕ್ಯಾಂಡಿ ವರ್ಣಗಳು, ದಿಗ್ಭ್ರಮೆ ಹುಟ್ಟಿಸುವ ಗುಲಾಬಿ ಬಣ್ಣಗಳು ಮತ್ತು ಎಲೆಕ್ಟ್ರಿಕಲ್‌ ಬ್ಲೂ ತುಂಬ ಪ್ರಚೋದನಕಾರಿ ಎಂದೇ ಪರಿಗಣಿತ. ಈ ಉಜ್ವಲ ವರ್ಣಗಳ ಒಳ ಉಡುಪುಗಳ ಜತೆ ಬಿಳಿಯ ಟ್ಯಾಂಕ್‌ ಟಾಪ್‌ ಇಲ್ಲವೇ ಪಾರದರ್ಶಕ ಟಾಪ್‌ ಧರಿಸಿ ನೋಡಿ.

ಹಾರ್ನೆಸ್‌ ಬ್ರಾಗಳು: ಈ ಸ್ಟ್ರಾ್ಯಪಿ ಬ್ರಾಗಳನ್ನು ಕೇವಲ ಅವನ್ನಷ್ಟೆ ಕೂಡ ಧರಿಸಬಹುದು, ಇಲ್ಲವೇ ಸಡಿಲವಾದ ಟ್ಯಾಂಕ್‌ ಟಾಪ್‌ಗಳು ಅಥವಾ ಬೆನ್ನು ಕಾಣುವಂತಿರುವ ಟಾಪ್‌ಗಳೊಂದಿಗೆ ಧರಿಸಬಹುದು. ಘನತೆಯೇ ಮೈವೆತ್ತ ಕಪ್ಪು ಪೀಸ್‌ನಲ್ಲಿ ಮೃದುವಾದ ಜರ್ಸಿ ಕಪ್‌ಗಳಿರಲಿ ಇಲ್ಲವೇ ಬಣ್ಣ ಬಣ್ಣದ ಬಹುಪಟ್ಟಿಯ ವಿನ್ಯಾಸವಿರಲಿ ಬ್ಲೌಸ್‌ ಅಥವಾ ಪಾರದರ್ಶಕ ಟಾಪ್‌ಗಳು, ಆಧುನಿಕ ಕ್ಯಾಮಿಸೋಲ್‌ಗಳಿಗೆ ಅತ್ಯಾಂತಿಕ ಪರ್ಯಾಯಗಳೆಂದರೆ ಈ ಹಾರ್ನೆಸ್‌ ಬ್ರಾಗಳು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT