ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟೆಲ್‌ ವೃತ್ತಾಂತ

ತಂತ್ರೋಪನಿಷತ್ತು
Last Updated 11 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಇಂಟೆಲ್‌ ಹೆಸರು Intelligence ಎಂಬ ಪದದ ಮೊದಲ ಐದು ಅಕ್ಷರಗಳಿಂದ ಹುಟ್ಟಿದ್ದು ಎಂಬ ವಾದವಿದೆ. ಆದರೆ ನಿಜವಾಗಿಯೂ ಈ ಹೆಸರು ಹುಟ್ಟಿಕೊಂಡಿದ್ದು, Integrated Electronics ಎಂಬ ಪದಗಳಿಂದ. Integrated ಪದದ INT ಮತ್ತು Eletronics ಪದದ EL ಎಂಬ ಅಕ್ಷರಗಳನ್ನೇ ಜೋಡಿಸಿ ಇಂಟೆಲ್‌ ಎಂದು ಹೆಸರಿಡಲಾಯಿತು.

1968ರಲ್ಲಿ ಜೋರ್ಡನ್‌ ಮೂರೆ ಮತ್ತು ರಾಬರ್ಟ್‌ ನೈಸ್‌ ಈ ಕಂಪೆನಿ ಸ್ಥಾಪಿಸಿದರು. ತಮ್ಮ ಹೆಸರನ್ನೇ ಕಂಪೆನಿಗೆ ಇಡಲು ನಿರ್ಧರಿಸಿ­ದರಾದರೂ, ‘ಮೂರೆ ನೈಸ್’ ಹೆಸರು ಉಚ್ಚರಿಸುವಾಗ ‘ಮೋರ್‌ ನಾಯ್ಸ್‌’ ಎಂದು ಕೇಳಿಸಿದ್ದರಿಂದ ಹೊಸ ಹೆಸರಿನ ಹುಡುಕಾಟ ಆರಂಭಿಸಿದರು. ಆಗ ಅವರಿಗೆ ಹೊಳೆದಿದ್ದೇ  Integrated Electronics ಪದಗಳಿಂದ INTEL ಹೆಕ್ಕಿ ತೆಗೆಯುವುದು. ಆದರೆ, ಹೊಟೇಲ್‌ ಸಮೂಹ­ವೊಂದರ ಹೆಸರೂ Intel ಎಂದಿದ್ದರಿಂದ 15 ಸಾವಿರ ಡಾಲರ್‌ ನೀಡಿ ಹೆಸರು ಬಳಕೆಗೆ ಅನುಮತಿ ಪಡೆದುಕೊಂಡರು.

1991ರಲ್ಲಿ Intel Inside ಹೆಸರಿಟ್ಟ ಬಳಿಕ ಕಂಪೆನಿ ಜನಪ್ರಿಯತೆ ಇನ್ನಷ್ಟು ಹೆಚ್ಚಿತು. ಸೆಮಿಕಂಡಕ್ಟರ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಕಂಪೆನಿಯನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನೂ ಪಡೆದು­ಕೊಂಡಿತು. 2009ರಲ್ಲಿ ಜಗತ್ತಿನ ಬಲಿಷ್ಠ ಬ್ರ್ಯಾಂಡ್‌ಗಳಲ್ಲಿ ಇಂಟೆಲ್‌ಗೆ 23ನೇ ಸ್ಥಾನ ದೊರೆಯಿತು.

ಐಬಿಎಂ ಕಂಪೆನಿ ದೊಡ್ಡ ಪ್ರಮಾಣದಲ್ಲಿ ಕಂಪ್ಯೂಟರ್ ತಯಾರಿಸುವ ಸ್ಪರ್ಧೆಗಿಳಿ­ಯಿ­ತಾದರೂ ಮೊದಲ ಪೀಳಿಗೆಯ ಮೈಕ್ರೋಪ್ರೊಸೆಸರ್ ಸೃಷ್ಟಿಸು­ವಲ್ಲಿ ಮುಂದಡಿಯಿಟ್ಟಿದ್ದು ಮಾತ್ರ ಇಂಟೆಲ್ ಕಂಪೆನಿ.

1971ರಲ್ಲಿ ‘4004’ ಹೆಸರಿನ 4 ಬಿಟ್‌ ಸೆಂಟ್ರಲ್‌ ಪ್ರೊಸೆಸಿಂಗ್ ಯುನಿಟ್‌ (ಸಿಪಿಯು) ಮೊದಲಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಅಲ್ಲಿಂದ ಆರಂಭವಾದ ಇಂಟೆಲ್‌ ಪ್ರಯಾಣ ಕಂಪ್ಯೂಟರ್‌ ಲೋಕದಲ್ಲಿ ಇದೀಗ 47ನೇ ವರ್ಷಕ್ಕೆ ಕಾಲಿಟ್ಟಿದೆ. ಮೈಕ್ರೋಪ್ರೊಸೆಸರ್‌, ಮದರ್‌ಬೋರ್ಡ್‌, ಚಿಪ್‌ಸೆಟ್‌,  ಇಂಟಿಗ್ರೇಟೆಡ್‌ ಸರ್ಕೀಟ್‌, ಫ್ಲಾಷ್‌ ಮೆಮೊರಿ, ಗ್ರಾಫಿಕ್‌ ಚಿಪ್ಸ್‌... ಹೀಗೆ ಇಂಟೆಲ್‌ ಕಂಪೆನಿ ತಯಾರಿಸುವ ಸಾಧನಗಳ ಪಟ್ಟಿ ಬೆಳೆಯುತ್ತಲೇ ಹೋಗು­ತ್ತದೆ.

ಕಂಪ್ಯೂಟರ್‌ ತಂತ್ರಜ್ಞಾನದಲ್ಲಿ ಬದಲಾವಣೆ ಘಟಿಸುತ್ತಿದ್ದಂತೆಯೇ ಅದರ ಗಾತ್ರ, ಸಾಮರ್ಥ್ಯಕ್ಕೆ ಅನುಗುಣ­ವಾಗಿ ಮೈಕ್ರೋಪ್ರೊಸೆಸರ್‌ ಕೂಡ ಹೊಸತನ ಪಡೆದು­ಕೊಳ್ಳತೊಡಗಿತು. 1972ರಲ್ಲಿ  ಮೊದಲ 8–ಬಿಟ್‌ ಪ್ರೊಸೆಸರ್‌ ‘ಇಂಟೆಲ್‌ 8008’ ಬಂತು. ಈ ಹೊತ್ತಿಗೆ ಬೇರೆ ಕಂಪೆನಿಗಳಿಗೂ ಮೈಕ್ರೋ ಪ್ರೊಸೆಸರ್‌ ತಯಾರಿಸುವತ್ತ ಆಕರ್ಷಿತ­ರಾದವು. ಹೀಗಾಗಿ 16ಬಿಟ್ ಮತ್ತು 32 ಬಿಟ್ ಮೈಕ್ರೋ ಪ್ರೊಸೆಸರ್‌ಗಳು ಬಹಳ ಕಡಿಮೆ ಅಂತರದಲ್ಲಿಯೇ ಮಾರುಕಟ್ಟೆ ಪ್ರವೇಶಿಸುವಂತಾಯಿತು. 1978ರಲ್ಲಿ  ಇಂಟೆಲ್‌ 8086, ನಂತರ 32 ಬಿಟ್ Intel iAPX-4 ಪ್ರೊಸೆಸರ್ ಬಳಕೆಗೆ ಬಂತು. ಈ ಹೊತ್ತಿಗೆ ಮೋಟೊರೋಲಾ ಕಂಪೆನಿ 32ಬಿಟ್ ಮೈಕ್ರೋಪ್ರೊಸೆಸರ್ ಆವಿಷ್ಕರಿ­ಸಿತು.

1992ರಿಂದ 64 ಬಿಟ್ ಮೈಕ್ರೋ ಪ್ರೊಸೆಸರ್ ತಯಾರಿ­ಸಲು ಇಂಟೆಲ್ ಜತೆ ‘ಎಎಂಡಿ’ ಕಂಪೆನಿ ಪೈಪೋಟಿಗಿಳಿಯಿತು. ಆದರೆ ಇಂದಿಗೂ ಹೆಚ್ಚು ಬೇಡಿಕೆ ಇರುವುದು ಮಾತ್ರ ಇಂಟೆಲ್‌ ಕಂಪೆನಿಯ ಮೈಕ್ರೋ ಪ್ರೊಸೆಸರ್‌ಗೆ. 2010ರ ನಂತರ ಐ3 ಪ್ರೊಸೆಸರ್ ಮಾರುಟ್ಟೆಗೆ ಬಂತು. ಇದೀಗ ಐದನೇ ಪೀಳಿಗೆಯ (ಐ7) ಪ್ರೊಸೆಸರ್ ಬಳಕೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT