ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲಿಗೆ ಕನ್ನಡ ತಂತ್ರಾಂಶಗಳು

ತಂತ್ರೋಪನಿಷತ್ತು
Last Updated 25 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಇಂದಿನ ಬಹುತೇಕ ಎಲ್ಲಾ ಮೊಬೈಲ್‌ಗಳಲ್ಲೂ ಕನ್ನಡ ಬೆಂಬಲವಿದೆ. ಹೀಗಾಗಿ ಕನ್ನಡ ಓದುವುದು ಕಷ್ಟವೇನಲ್ಲ. ಕನ್ನಡದಲ್ಲಿ ಬರೆದು ಬೇರೆಯವರಿಗೆ ಕಳುಹಿಸಲೂ ಸಾಕಷ್ಟು ತಂತ್ರಾಂಶಗಳಿವೆ. ಆಂಡ್ರಾಯಿಡ್ ಫೋನಿಗೆ, ಪದ ಕನ್ನಡ, ಪಾಣಿನಿ, ಸ್ಪರ್ಶ, ಎನಿಸಾಫ್ಟ್, ಜಸ್ಟ್ ಕನ್ನಡ, ಸ್ವರಚಕ್ರ ಕನ್ನಡ... ಹೀಗೆ ಇನ್ನೂ ಅನೇಕ ತಂತ್ರಾಂಶಗಳಿವೆ. ಆದರೆ ಹೊಸದಾಗಿ ಕನ್ನಡ ತಂತ್ರಾಂಶ ಬಳಸುವವರಿಗೆ ಸ್ವಲ್ಪ ಗೊಂದಲ. ಇದನ್ನು ಬಗೆಹರಿಸಲು ಕೆಲವು ತಂತ್ರಾಂಶಗಳ ಕುರಿತ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಜಸ್ಟ್‌ ಕನ್ನಡ: ಸದ್ಯ ಕನ್ನಡ ಬಳಕೆಗೆ ಇರುವ ಎಲ್ಲಾ ತಂತ್ರಾಂಶಗಳಿಗಿಂತಲೂ ಹೆಚ್ಚು ಉಪಯುಕ್ತ­. ನುಡಿ ತಂತ್ರಾಂಶದಲ್ಲಿರುವಂತೆಯೇ ಕೀಲಿಮಣೆ  ವಿನ್ಯಾಸ ಹೊಂದಿದೆ. 

ಎನಿ ಸಾಫ್ಟ್‌ (AnySoft Keyboard): ಜಸ್ಟ್‌ ಕನ್ನಡಕ್ಕಿಂತಲೂ ಮೊದಲು ವಿನ್ಯಾಸ ಗೊಂಡ ಕೀಬೋರ್ಡ್‌ ಇದು. ಇದು ಕೆಲಸ ಮಾಡಲು AnySoft Keyboard ಮತ್ತು Kannada for AnySoft ಎರಡನ್ನೂ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಕ.ಗ.ಪ.(ನುಡಿ) ಹಾಗೂ ಇನ್‌ಸ್ಕ್ರಿಪ್ಟ್ ವಿನ್ಯಾಸಗಳ ಆಯ್ಕೆ ಇದರಲ್ಲಿದೆ.

ಸ್ವರಚಕ್ರ (Swarachakra Kannada Keyboard): ಇತ್ತೀಚೆಗೆ ಪರಿಚಯವಾಗಿರುವ ಇದರ ಕೀಬೋರ್ಡ್ ವಿನ್ಯಾಸ ತುಸು ವಿಭಿನ್ನ. ವ್ಯಂಜನಗಳನ್ನು ಕೊಡಲಾಗಿದ್ದು, ಒಂದು ವ್ಯಂಜನಾಕ್ಷರವನ್ನು ಮುಟ್ಟಿದಾಗ ಅದರ ಸುತ್ತಲೂ ಚಕ್ರಾಕಾರವಾಗಿ ಸಂಬಂಧಿಸಿದ ಗುಣಿತಾಕ್ಷರಗಳು ಕಾಣುತ್ತವೆ. 
ಉದಾ: ‘ತ’ ಅಕ್ಷರವಿರುವ ಗುಂಡಿ ಒತ್ತಿಹಿಡಿದರೆ, ಅದಕ್ಕೆ ಸಂಬಂಧಿಸಿದ ಗುಣಿತಾಕ್ಷರಗಳು ‘ತು’, ತಿ, ತೆ ಹೀಗೆ ಕಾಣಿಸುತ್ತವೆ. ಅದರಲ್ಲಿ ಬೇಕಾದ್ದನ್ನು ಮುಟ್ಟಿದರೆ ಆ ಅಕ್ಷರ ಮೂಡುತ್ತದೆ. ಜಸ್ಟ್‌ ಕನ್ನಡ ಮತ್ತು ಎನಿಸಾಫ್ಟ್‌ಗೆ ಹೋಲಿಸಿದರೆ ಗುಣಿತಾಕ್ಷರಗಳನ್ನು ಆಯ್ಕೆ ಮಾಡಲು ಸಮಯ ತೆಗೆದುಕೊಳ್ಳುವುದರಿಂದ ವೇಗವಾಗಿ ಬರೆಯಲು ಅನುಕೂಲವಾಗಿಲ್ಲ. ಆಂಡ್ರಾಯಿಡ್‌ಗೆ ಬೆಂಬಲಿಸುವ ಈ ಮೇಲಿನ ಎಲ್ಲಾ ತಂತ್ರಾಂಶಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಡೌನ್‌­ಲೋಡ್‌ ಮಾಡಿಕೊಳ್ಳಬಹುದು.

ವಿಂಡೋಸ್‌: ವಿಂಡೋಸ್ 8 ಆವೃತ್ತಿಯ ಫೋನುಗಳಲ್ಲಿ ಕನ್ನಡಕ್ಕೆ ಬೆಂಬಲವಿದೆ. ಕನ್ನಡ ಟೈಪ್ ಮಾಡಲು ‘ಟೈಪ್ ಕನ್ನಡ’ (Type Kannada) ಎನ್ನುವ ಒಂದು ತಂತ್ರಾಂಶವಿದೆ.

ಐಫೋನ್‌: ಐಫೋನಿನಲ್ಲಿ iOS-4ರ ನಂತರದ ಆವೃತ್ತಿಗಳಲ್ಲಿ ಕನ್ನಡಕ್ಕೆ ಬೆಂಬಲ ನೀಡಲಾಗಿದೆ. ಆದರೆ ಇದರಲ್ಲೂ ಆಂಡ್ರಾಯಿಡ್‌ನಂತೆ ನೇರವಾಗಿ ಕನ್ನಡ ಬರೆಯುವ ಕೀಬೋರ್ಡ್ ಸೌಲಭ್ಯ ಇನ್ನೂ ಲಭ್ಯವಿಲ್ಲ. ಆಪಲ್ ಸ್ಟೋರ್‌ನಲ್ಲಿ Kannada Editor ತಂತ್ರಾಂಶ ಡೌನ್‌ಲೋಡ್‌ ಮಾಡಿ ಅಳವಡಿಸಿಕೊಂಡು ಕನ್ನಡವನ್ನು ಬರೆಯಬಹುದು.

iTransliterate ಎನ್ನುವ ಮತ್ತೊಂದು ತಂತ್ರಾಂಶದ ಮೂಲಕವೂ ಕನ್ನಡ ಬರೆಯಬಹುದು. (ಬರಹ ತಂತ್ರಾಂಶದಂತೆ ಪ್ರಾದೇಶಿಕ ಭಾಷೆಗಳ ಬಳಕೆ ಸಾಧ್ಯ) ಅಳವಡಿಸಿ­ಕೊಂಡ ನಂತರ ಇದನ್ನು ತೆರೆದು ಇದರಲ್ಲಿ ಕನ್ನಡದಲ್ಲಿ ಟೈಪ್ ಮಾಡಿ ಇಲ್ಲಿಂದ ಕಾಪಿ ಮಾಡಿ ಬೇಕಾದ ಕಡೆಯಲ್ಲಿ ಪೇಸ್ಟ್ ಮಾಡಬೇಕಾಗುತ್ತದೆ. ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಶೇರ್‌ ಕೂಡ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT