ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಆರ್‌ಎಲ್‌ ಕಿರಿದಾಗಿಸಲು...

ತಂತ್ರೋಪನಿಷತ್ತು
Last Updated 25 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಆನ್‌ಲೈನ್‌ನಲ್ಲಿ ಯಾವುದಾದರೂ ಉಪಯುಕ್ತ ಮಾಹಿತಿ ಸಿಕ್ಕಿತು ಎಂದುಕೊಳ್ಳೋಣ. ಆದರೆ ಅದು ಡೌನ್‌ಲೋಡ್ ಮಾಡಲಾಗುವುದಿಲ್ಲ. ಅದನ್ನು ಸ್ನೇಹಿತರಿಗೂ ಓದಿಸಬೇಕು ಎಂದಾದರೆ ಆ ಪುಟದ ಯುಆರ್‌ಎಲ್ (ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್) ಕಾಪಿ ಮಾಡಿ, ಇ-ಮೇಲ್, ಫೇಸ್‌ ಬುಕ್, ವಾಟ್ಸ್ ಆ್ಯಪ್‌ನಲ್ಲಿ ಪೇಸ್ಟ್ ಮಾಡಿ ಕಳುಹಿಸುತ್ತೇವೆ.

ಆದರೆ ಎಲ್ಲಾ ಯುಆರ್‌ಎಲ್ ಒಂದೇ ರೀತಿ ಇರುವುದಿಲ್ಲ. ಕೆಲವು ಉದ್ದವಾಗಿರುತ್ತವೆ. ಇಂಥವನ್ನು ಕಾಪಿ ಮಾಡುವಾಗ ಸ್ವಲ್ಪ ಯಡವಟ್ಟಾದರೂ ಅದು ಪ್ರಯೋಜನಕ್ಕೆ ಬರುವುದಿಲ್ಲ. ಬಹಳಷ್ಟು ಉದ್ದವಿರುವುದರಿಂದ ನೆನಪಿಟ್ಟುಕೊಳ್ಳಲೂ ಕಷ್ಟವಾಗುತ್ತದೆ. ವಿಶ್ವವ್ಯಾಪಿ ಜಾಲದಲ್ಲಿ ಇರುವ ಅಸಂಖ್ಯಾತ ಜಾಲತಾಣಗಳನ್ನು ಪ್ರತ್ಯೇಕವಾಗಿ ಗುರುತಿಸಲು ನೆರವಾಗುವ ವಿಳಾಸಕ್ಕೆ ಯುಆರ್‌ಎಲ್ ಎಂದು ಹೆಸರು. ಪ್ರತಿಯೊಂದು ಜಾಲತಾಣಕ್ಕೂ ತನ್ನದೇ ಆದ ಯುಆರ್‌ಎಲ್ ಇರುತ್ತದೆ. ಅದು ಆ ಜಾಲತಾಣದ ವಿಳಾಸ ಆಗಿರುತ್ತದೆ.

www.prajavani.net/ಯುಆರ್‌ಎಲ್‌ನಿಂದ   ಪ್ರಜಾವಾಣಿ ಆನ್‌ಲೈನ್‌ ಜಾಲತಾಣಕ್ಕೆ  ಪ್ರವೇಶಿಸಬಹುದು.
ಬಹಳಷ್ಟು ಉದ್ದವಿರುವ ಯುಆರ್‌ಎಲ್‌ ಅನ್ನು ಗೂಗಲ್‌ ಶಾರ್ಟ್‌ನರ್‌ನಲ್ಲಿ ಕಾಪಿ ಪೇಸ್ಟ್‌ ಮಾಡಿದರೆ, http://goo.gl/KTJk2a ಈ ರೀತಿ ಚಿಕ್ಕದಾಗುತ್ತದೆ.  ಬಳಸಲೂ ಸುಲಭ. ಹೀಗೆ ಯುಆರ್ ಎಲ್ ಚಿಕ್ಕದಿದ್ದಷ್ಟೂ ಒಳ್ಳೆಯದು. ಉದ್ದವಾಗಿರುವ ಯುಆರ್‌ಎಲ್‌ಗಳನ್ನು ಚುಟುಕು ಮಾಡಲೆಂದೇ ಹಲವು ಯುಆರ್‌ಎಲ್‌ ಶಾರ್ಟ್‌ನರ್‌ಗಳಿವೆ.

ನಮಗೆ ಬೇಕಾದ ಯುಆರ್‌ಎಲ್‌ ಕಾಪಿ ಮಾಡಿ ಯುಆರ್‌ಎಲ್‌ ಶಾರ್ಟ್‌ನರ್‌ ಸೇವೆ ಒದಗಿಸುವ ತಾಣಗಳಿಗೆ ಹೋಗಿ ಪೇಸ್ಟ್ ಮಾಡಿ ಚಿಕ್ಕದಾಗಿಸಬಹುದು. ಹೀಗೆ ಚಿಕ್ಕದಾದ ಯುಆರ್ಎಲ್ ಅನ್ನು ಕಾಪಿ ಮಾಡಿ, ವಾಟ್ಸ್ ಆ್ಯಪ್, ಫೇಸ್‌ಬುಕ್‌ನಲ್ಲಿ ಪೇಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಳ್ಳಬಹುದು.

ಕೆಲವು ಯುಆರ್ಎಲ್ ಶಾರ್ಟ್‌ನರ್‌ ತಾಣಗಳೆಂದರೆ: goo.gl, bit.ly.com, budurl.pro, is.gd, ow.ly. ವಿಳಾಸ ಚಿಕ್ಕದಾಗಿಸುವ ಇಂತಹ ಜಾಲತಾಣಕ್ಕೆ ಹೋಗಿ ಉದ್ದವಿರುವ ಯಾವುದೇ ವಿಳಾಸವನ್ನು (ಯುಆರ್ಎಲ್) ಬೇಕಿದ್ದರೂ ಚಿಕ್ಕದಾಗಿಸಬಹುದು. ಪುಟ್ಟ ವಿಳಾಸದ ಮೇಲೆ ಕ್ಲಿಕ್ಕಿಸಿದಾಗ ಅದು ಮೂಲ ವಿಳಾಸಕ್ಕೆ ಕರೆದೊಯ್ಯುತ್ತದೆ.
ಈಗಂತೂ ಗೂಗಲ್‌ ಬಳಕೆ ಸಾಮಾನ್ಯವಾಗಿರುವುದರಿಂದ ಗೂಗಲ್‌ ಶಾರ್ಟ್‌ನರ್‌ ಬಳಸಿ ಸುಲಭವಾಗಿ ಯುಆರ್‌ಎಲ್‌ ಚಿಕ್ಕದಾಗಿಸಿಕೊಳ್ಳಬಹುದು.

2001ರಲ್ಲಿಯೇ Make A Shorter Link ಎಂಬ ಜಾಲತಾಣ ಯುಆರ್ಎಲ್ ಚಿಕ್ಕದಾಗಿಸುವ ಕೆಲಸ ಮಾಡುತ್ತಿತ್ತು. 2006 ಪರಿಚಯವಾದ ಟ್ವಿಟರ್‌ನಿಂದಾಗಿ ಚಿಕ್ಕ ವಿಳಾಸಗಳಿಗೆ ಜನಪ್ರಿಯತೆ ಹೆಚ್ಚಾಯಿತು. ಟ್ವಿಟರ್‌ನಲ್ಲಿ bit.ly ಎಂಬ ಯುಆರ್ಎಲ್ ಶಾರ್ಟನಿಂಗ್ ಸೇವೆ ವ್ಯಾಪಕವಾಗಿ ಬಳಕೆ ಯಲ್ಲಿದೆ. ಹೀಗಿದ್ದರೂ, ಈ ಚಿಕ್ಕ ಯುಆರ್ಎಲ್‌ಗಳಿಂದ ತುಸು ಜಾಗರೂಕರಾಗಿರುವುದು ಒಳಿತು.

ಇವುಗಳ ಮೂಲಕವೂ ವೈರಸ್ ಹರಡುವ ಅಥವಾ ಹ್ಯಾಕ್ ನಡೆಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆದಷ್ಟೂ ಅಪರಿಚಿತ ಯುಆರ್ಎಲ್‌ಗಳನ್ನು ತೆರೆಯದಿರುವುದೇ ಇದಕ್ಕೆ ಪ್ರಾಥಮಿಕ ಪರಿಹಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT