ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಸೂಪರ್ ಕಿಂಗ್ಸ್‌ಗೆ ‘ಕಿಂಗ್ಸ್‌’ ಸವಾಲು ಇಂದು

ಋತುರಾಜ್ ಗಾಯಕವಾಡ ಬಳಗಕ್ಕೆ ಮತ್ತೊಂದು ಗೆಲುವಿನ ತವಕ
Published 30 ಏಪ್ರಿಲ್ 2024, 23:30 IST
Last Updated 30 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಚೆನ್ನೈ: ಮಹೇಂದ್ರಸಿಂಗ್ ಧೋನಿಯ ಮಾರ್ಗದರ್ಶನದಲ್ಲಿ ಪಳಗುತ್ತಿರುವ ಋತುರಾಜ್ ಗಾಯಕವಾಡ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬುಧವಾರ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. 

ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಚೆನ್ಣೈ ತಂಡಕ್ಕೆ ಅಗ್ರ ನಾಲ್ಕರಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳುವ ಛಲ ಇದೆ. ಅದೇ ಎಂಟನೇ ಸ್ಥಾನದಲ್ಲಿರುವ ಪಂಜಾಬ್ ತಂಡವು ತನ್ನ ಪಾಲಿನಲ್ಲಿ ಉಳಿದಿರುವ ಐದು ಪಂದ್ಯಗಳನ್ನೂ ಗೆದ್ದು ಪ್ಲೇ ಆಫ್‌ ಅವಕಾಶ ಗಿಟ್ಟಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.  ಆದರೆ ಚೆನ್ನೈ ತಂಡವು ತನ್ನ ನೆಲದಲ್ಲಿ ಅಷ್ಟು ಸುಲಭವಾಗಿ ಶರಣಾಗುವ ತಂಡವಲ್ಲ. 

ತನ್ನ ಕಳೆದ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆ ಇರುವ ಸನ್‌ರೈಸರ್ಸ್ ಹೈದರಾಬಾದ್ ಎದುರು ಗೆದ್ದ ರೀತಿಯೇ ಇದಕ್ಕೆ ಸಾಕ್ಷಿ. ಟೂರ್ನಿಯಲ್ಲಿ ದೊಡ್ಡ ದೊಡ್ಡ ಮೊತ್ತಗಳನ್ನು ಕಲೆಹಾಕಿದ್ದ ಸನ್‌ರೈಸರ್ಸ್ ತಂಡಕ್ಕೆ ಚೆಪಾಕ್‌ ಪಂದ್ಯದಲ್ಲಿ ಅಬ್ಬರಿಸಲು ಸಾಧ್ಯವಾಗಲಿಲ್ಲ.  ಮಧ್ಯಮವೇಗಿ ತುಷಾರ್ ದೇಶಪಾಂಡೆ, ಮಥೀಷ ಪಥಿರಾಣ ಹಾಗೂ ಮುಸ್ತಫಿಜುರ್ ರೆಹಮಾನ್ ಅವರ ಬೌಲಿಂಗ್ ಮುಂದೆ ಹೈದರಾಬಾದ್‌ ಆಟಗಾರರು ಶರಣಾಗಿದ್ದರು. 

ಪಂಜಾಬ್ ತಂಡದಲ್ಲಿ ಕಳೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಜಾನಿ ಬೇಸ್ಟೊ ಲಯಕ್ಕೆ ಮರಳಿ, ಶತಕ ಗಳಿಸಿದ್ದರು.  ಚೇಸಿಂಗ್‌ನಲ್ಲಿ (262 ರನ್) ವಿಶ್ವ ದಾಖಲೆಯನ್ನೂ ಮಾಡಿತ್ತು.  ಅ ಪಂದ್ಯದಲ್ಲಿ ಪ್ರಭಸಿಮ್ರನ್ ಸಿಂಗ್, ಶಶಾಂಕ್ ಸಿಂಗ್ ಕೂಡ ಅಬ್ಬರಿಸಿದ್ದರು. ತಂಡದ ಆಶುತೋಷ್ ಶರ್ಮಾ ಕೂಡ ಉತ್ತಮ ಲಯದಲ್ಲಿದ್ಧಾರೆ. ಇವರೆಲ್ಲರನ್ನು ಕಟ್ಟಿಹಾಕುವ ಸವಾಲು ಚೆನ್ನೈ ಬೌಲಿಂಗ್ ಪಡೆಗೆ ಇದೆ. 

ಶಿಖರ್ ಧವನ್ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸುತ್ತಿರುವ ಸ್ಯಾಮ ಕರನ್, ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿರುವ ಅರ್ಷದೀಪ್ ಸಿಂಗ್,  ಹರ್ಷಲ್ ಪಟೇಲ್ ಹಾಗೂ ಕಗಿಸೊ ರಬಾಡ ಅವರು ಪಂಜಾಬ್ ತಂಡದ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಉತ್ತಮ ಲಯದಲ್ಲಿರುವ ಚೆನ್ನೈನ ಋತುರಾಜ್, ಡ್ಯಾರಿಲ್ ಮಿಚೆಲ್, ಶಿವಂ ದುಬೆ ಹಾಗೂ ರವೀಂದ್ರ ಜಡೇಜ ಅವರನ್ನು ಕಟ್ಟಿಹಾಕುವ ಸವಾಲು ಇದೆ. ಅಜಿಂಕ್ಯ ರಹಾನೆ ಹಾಗೂ ಮೋಯಿನ್ ಅಲಿ ಅವರು ಲಯಕ್ಕೆ ಮರಳಿದರೆ ಚೆನ್ನೈ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗಲಿದೆ. ಕೊನೆಯ ಓವರ್‌ನಲ್ಲಿ ಸಿಕ್ಸರ್, ಬೌಂಡರಿ ಸಿಡಿಸುವ ಧೋನಿಯ ಆಟಕ್ಕೂ ತಡೆಯೊಡ್ಡುವ ಸವಾಲು ಬೌಲರ್‌ಗಳಿಗೆ ಇದೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಫೋರ್ಟ್ಸ್‌ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

ಶಶಾಂಕ್ ಸಿಂಗ್  
ಶಶಾಂಕ್ ಸಿಂಗ್  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT