ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಗೆ 26 ಸದಸ್ಯರ ಸಂಭಾವ್ಯ ಪಟ್ಟಿ

ಐ–ಲೀಗ್‌ನ ನಾಲ್ವರು ಆಟಗಾರರಿಗೆ ಅವಕಾಶ
Published 4 ಮೇ 2024, 23:30 IST
Last Updated 4 ಮೇ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಕುವೈತ್ ಮತ್ತು ಕತಾರ್ ವಿರುದ್ಧದ ಫಿಫಾ ವಿಶ್ವಕಪ್ ಪೂರ್ವಭಾವಿ ಅರ್ಹತಾ ಸುತ್ತಿನ ಎರಡು ಪಂದ್ಯಗಳಿಗೆ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಇಗೊರ್ ಸ್ಟಿಮಾಚ್‌ ಶನಿವಾರ ಪ್ರಕಟಿಸಿದ 26 ಮಂದಿ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಐ-ಲೀಗ್ ನ ನಾಲ್ವರು ಆಟಗಾರರು ಸೇರಿದ್ದಾರೆ.

ಐ-ಲೀಗ್‌ನಲ್ಲಿ ಮೊಹಮ್ಮದನ್ ಸ್ಪೋರ್ಟಿಂಗ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಿಜೋರಾಂನ ಫಾರ್ವರ್ಡ್ ಆಟಗಾರ ಡೇವಿಡ್ ಲಾಲ್ಹನ್ಸಂಗಾ, ಐಜ್ವಾಲ್ ಎಫ್‌ಸಿ ತಂಡದ ಲಾಲ್ರಿನ್ಜುವಾಲಾ ಲಾಲ್ಬಿಯಾಕ್ನಿಯಾ, ರಿಯಲ್ ಕಾಶ್ಮೀರ ಕ್ಲಬ್‌ನ ಡಿಫೆಂಡರ್ ಮುಹಮ್ಮದ್ ಹಮ್ಮದ್ ಮತ್ತು ಇಂಟರ್ ಕಾಶಿ ಎಫ್‌ಸಿ ಮಿಡ್ ಫೀಲ್ಡರ್ ಎಡ್ಮಂಡ್ ಲಾಲ್ರಿಂಡಿಕಾ ಅವರೊಂದಿಗೆ ಸ್ಥಾನ ಪಡೆದಿದ್ದಾರೆ.

ಮೋಹನ್ ಬಾಗನ್ ಮತ್ತು ಮುಂಬೈ ಸಿಟಿ ಫುಟ್‌ಬಾಲ್ ಕ್ಲಬ್‌ ನಡುವೆ ಐಎಸ್‌ಎಲ್ ಫೈನಲ್ ಪಂದ್ಯ ಶನಿವಾರ ಇದ್ದ ಕಾರಣ, ಕೆಲವೇ ದಿನಗಳಲ್ಲಿ ಘೋಷಿಸಲಾಗುವ ಸಂಭಾವ್ಯರ ಎರಡನೇ ಪಟ್ಟಿಯಲ್ಲಿ ಈ ಎರಡು ತಂಡಗಳ ಪ್ರಮುಖ ಆಟಗಾರರನ್ನು ಹೆಸರಿಸುವ ನಿರೀಕ್ಷೆಯಿದೆ ಎಂದು ಎಐಎಫ್ಎಫ್ ತಿಳಿಸಿದೆ.

ಭಾರತ ತಂಡ ಮೇ 10ರಿಂದ ಭುವನೇಶ್ವರದಲ್ಲಿ ತರಬೇತಿ ಶಿಬಿರ ಆರಂಭಿಸಲಿದೆ. ‘ಬ್ಲೂ ಟೈಗರ್ಸ್’ (ಭಾರತ) ತಂಡ ಜೂನ್ 6ರಂದು ಕೋಲ್ಕತ್ತದಲ್ಲಿ ಕುವೈತ್ ವಿರುದ್ಧ ಸೆಣಸಲಿದ್ದು, ಜೂನ್ 11ರಂದು ದೋಹಾದಲ್ಲಿ ಕತಾರ್ ವಿರುದ್ಧ ಸೆಣಸಲಿದೆ.

ಆಡಿರುವ ನಾಲ್ಕು ಅಂಕಗಳೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 

ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೆ ಅರ್ಹತೆ ಪಡೆಯಲಿವೆ ಮತ್ತು 2027ರ ಎಎಫ್‌ಸಿ ಏಷ್ಯನ್ ಕಪ್‌ಗೆ ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಳ್ಳಲಿವೆ.

ಸಂಭಾವ್ಯ ತಂಡ: 

ಗೋಲ್ ಕೀಪರ್‌ಗಳು: ಅಮರಿಂದರ್ ಸಿಂಗ್, ಗುರ್‌ಪ್ರೀತ್‌ ಸಿಂಗ್ ಸಂಧು.

ಡಿಫೆಂಡರ್ಸ್: ಅಮೇಯ ಗಣೇಶ್ ರಣವಾಡೆ, ಜಯ್‌ ಗುಪ್ತಾ, ಲಾಲ್‌ಚುಂಗ್ನುಂಗಾ, ಮೊಹಮ್ಮದ್ ಹಮ್ಮದ್, ನರೇಂದರ್, ನಿಖಿಲ್ ಪೂಜಾರಿ, ರೋಷನ್ ಸಿಂಗ್ ನೌರೆಮ್.

ಮಿಡ್ ಫೀಲ್ಡರ್ಸ್: ಬ್ರೆಂಡನ್ ಫರ್ನಾಂಡಿಸ್, ಎಡ್ಮಂಡ್ ಲಾಲ್ರಿಂಡಿಕಾ, ಇಮ್ರಾನ್ ಖಾನ್, ಇಸಾಕ್ ವನ್ಲಾಲ್ರುವಾಟ್ಫೆಲ್ಲಾ, ಜೀಕ್ಸನ್ ಸಿಂಗ್, ಮಹೇಶ್ ಸಿಂಗ್ ನೌರೆಮ್, ಮೊಹಮ್ಮದ್ ಯಾಸಿರ್, ನಂದಕುಮಾರ್ ಶೇಕರ್, ರಾಹುಲ್ ಕನೋಲಿ ಪ್ರವೀಣ್, ಸುರೇಶ್ ಸಿಂಗ್ ವಾಂಗ್ಜಾಮ್, ವಿಬಿನ್ ಮೋಹನನ್.

ಫಾರ್ವರ್ಡ್ಸ್: ಡೇವಿಡ್ ಲಾ‌ಲ್ಹನ್ಸಂಗಾ, ಜಿತಿನ್ ಮಡತಿಲ್ ಸುಬ್ರಾನ್, ಲಾಲ್ರಿನ್ಜುವಾಲಾ ಲಾಲ್ಬಿಯಾಕ್‌ನಿಯಾ, ಪಾರ್ಥಿಬ್ ಗೊಗೊಯ್, ರಹಿಮ್ ಅಲಿ, ಸುನಿಲ್ ಚೆಟ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT