ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬರಹಗಾರ ಮ್ಯಾರಥಾನ್‌ ಓಟಗಾರ !

Last Updated 27 ಸೆಪ್ಟೆಂಬರ್ 2015, 19:42 IST
ಅಕ್ಷರ ಗಾತ್ರ

ಅಮೆರಿಕದ ಪ್ರಖ್ಯಾತ ಮ್ಯಾರಥಾನ್‌ ಓಟಗಾರ  ಸ್ಕಾಟ್‌ ಜೂರೆಟ್‌ ಅವರ ಅನುಭವಗಳನ್ನು ಕೇಳುವ ಜತೆಗೆ ಅವರಿಂದ ಓಡುವ ತಂತ್ರಗಳನ್ನು ಕಲಿಯುವ ಅವಕಾಶ ಭಾರತದ ಮೂರು ನಗರಗಳಿಗೆ ಸಿಕ್ಕಿದೆ.

ಶುಕ್ರವಾರ ಬೆಂಗಳೂರಿಗೆ ಬಂದಿದ್ದ ಸ್ಕಾಟ್ ಜೂರೆಟ್‌ ಇಲ್ಲಿನ ಮ್ಯಾರಥಾನ್‌ ಓಟಗಾರರೊಂದಿಗೆ ಬೆರೆತು ತಾವು ನಡೆದು ಬಂದ ದಾರಿ ಹಾಗೂ ತಮ್ಮ ಕನಸುಗಳನ್ನು ಹಂಚಿಕೊಂಡರು.

‘20 ವರ್ಷ ವಯಸ್ಸಿನಲ್ಲೇ ಓಡಲು ಪ್ರಾರಂಭಿಸಿದೆ. ಮೊದಲ ಬಾರಿಗೆ 80ಕಿ.ಮೀ. ದೂರದ ಓಟದ ಸ್ವರ್ಧೆಯೊಂದರಲ್ಲಿ  ಓಡಿ ಗೆಲುವಿನ ಸಂಭ್ರಮ ಆಚರಿಸಿದೆ. ಇದು ನನ್ನ ವೃತ್ತಿ ಜೀವನದ ಪ್ರಮುಖ ಹೆಜ್ಜೆ. ಅಲ್ಲಿಂದ ನಾನು ಹಿಂತಿರುಗಿ ನೋಡಿಲ್ಲ. ಓಡುವುದು ಮನಸ್ಸಿನ ಖುಷಿಗಾಗಿ’ ಎನ್ನುವುದು ಸ್ಕಾಟ್ ಮಾತು.

‘ಇವತ್ತು ದೊಡ್ಡ ಮ್ಯಾರಾಥಾನ್‌ ಓಟಗಾರ ಆಗಿರಬಹುದು. ಆದರೆ ತೆರೆದ ಮನಸ್ಸು ಮತ್ತು ಸರಳತೆ ಇಲ್ಲದಿದ್ದರೆ ಬದುಕಿನ ಹಾದಿಯಲ್ಲಿ ಯಶಸ್ಸು ಸಿಗುವುದು ಕಷ್ಟ. ಓಡುವುದರ ಜತೆ ಬರೆಯುವುದು ಮತ್ತು ಅಡುಗೆ ಮಾಡುವುದು ನನ್ನ ಪ್ರಮುಖ ಹವ್ಯಾಸ. ಅದರಲ್ಲೂ ದಕ್ಷಿಣ ಭಾರತದ ತಿನಿಸುಗಳು ನನಗೆ ಪ್ರಿಯ. ನಾನು ಸಸ್ಯಹಾರಿ. ಇಲ್ಲಿ ಕೈಯಲ್ಲಿ ಊಟ ಮಾಡುವ ಸಂಸ್ಕೃತಿ ನನಗೆ ತುಂಬಾ ಹಿಡಿಸಿತು’ಎಂದು ಸ್ಕಾಟ್‌ ಹೇಳಿದರು.

‘ಭಾರತದಲ್ಲೂ ಅಪ್ರತಿಮ ಪ್ರತಿಭಾವಂತರು ಇದ್ದಾರೆ. ಅವರಿಗೆ ಉತ್ತೇಜನ ಸಿಕ್ಕರೆ ಖಂಡಿತಾ ದೊಡ್ಡ ಸಾಧನೆ ಮಾಡುತ್ತಾರೆ. ನನಗೆ ತುಂಬಾ ವೇಗವಾಗಿ ಓಡಲು ಆಗುವುದಿಲ್ಲ ಎಂಬುದರ ಅರಿವಾದಾಗ ನಾನು ಮ್ಯಾರಥಾನ್‌ ಆಯ್ದುಕೊಂಡೆ’ ಎಂದರು. ಶನಿವಾರ ಸ್ಕಾಟ್‌ ಅವರು ಬೆಂಗಳೂರಿನ ಯುವ ಅಥ್ಲೀಟ್‌ಗಳೊಂದಿಗೆ 10ಕಿ.ಮೀ. ದೂರ ಓಡಿದರು. ಪ್ರೋಟಾನ್ಸ್‌ ಸ್ಪೋರ್ಟ್ಸ್‌ ಸಂಸ್ಥೆ ಬೆಂಗಳೂರಿನ ಅಥ್ಲೀಟ್‌ಗಳಿಗೆ ಸ್ಕಾಟ್  ಜೂರೆಟ್‌ ಅವರನ್ನು ಪರಿಚಯಿಸಿದೆ. ಅವರು ನವದೆಹಲಿ ಹಾಗೂ ಮುಂಬೈ ನಗರಗಳಲ್ಲಿಯೂ ಕಾರ್ಯಕ್ರಮ  ನೀಡಲಿದ್ದಾರೆ.

ಸ್ಕಾಟ್‌ ಯಾರು?
ಅಮೆರಿಕದ ಸ್ಕಾಟ್‌ ಜೂರೆಕ್  
2010ರಲ್ಲಿ ದಿನದ 24 ಗಂಟೆ  ಸುಮಾರು 265 ಕಿ.ಮೀ ಓಡುವ ಮೂಲಕ ಅಮೆರಿಕದ ‘ದಿನದ ಅಥ್ಲೀಟ್‌ ’ ಗೌರವಕ್ಕೆ ಪಾತ್ರರಾಗಿದ್ದರು.  ಅಥೆನ್ಸ್‌ನಿಂದ ಸ್ಪಾರ್ತಾ ದಾರಿಯಲ್ಲಿ 245 ಕಿ.ಮೀ ಸ್ಪಾರ್ಟಥ್ಲಾನ್‌ ರೇಸ್‌ನಲ್ಲಿ ಓಡಿ ಮೂರು ಬಾರಿ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದ್ದಾರೆ. ಇವರ ‘ಈಟ್‌ ಎಂಡ್‌ ರನ್‌’ ಆತ್ಮ ಚರಿತ್ರೆ ವಿಶ್ವವಿಖ್ಯಾತಿ ಗಳಿಸಿದೆ. ‘ವೇಗನಿಸಂ’ ಪ್ರತಿಪಾದಕರಾದ ಅವರು ಸಸ್ಯಜನ್ಯ ತತ್ವದ ಆಹಾರ  ಸಂಸ್ಕೃತಿ ಪಾಲಿಸುತ್ತಾರೆ. ಮೀನು, ಮಾಂಸ ತಿಂದರೆ ಮಾತ್ರ ಗಟ್ಟಿಮುಟ್ಟಾದ ದೇಹ ಹೊಂದಲು ಸಾಧ್ಯ ಎಂಬುದನ್ನು  ನಿರಾಕರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT