ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ ಯಾಕೆ ಹೋಗುತ್ತದೆ?

ಸರಣಿ-14
Last Updated 19 ಮೇ 2013, 19:59 IST
ಅಕ್ಷರ ಗಾತ್ರ

ಸಾಮಗ್ರಿಗಳು: 3 ಬಲೂನುಗಳು, ದಾರ, ಸ್ಕೇಲ್.
ವಿಧಾನ:

1. ಒಂದೇ ಅಳತೆಯ ಮೂರು ಬಲೂನುಗಳನ್ನು ತೆಗೆದುಕೊಳ್ಳಿ. ಅವುಗಳಿಗೆ `ಅ' `ಬ' ಮತ್ತು  `ಕ' ಎಂದು ಹೆಸರಿಸಿ.
2. `ಅ' ಬಲೂನನ್ನು ಕಾಲು ಭಾಗದಷ್ಟು, `ಬ'ವನ್ನು ಅರ್ಧದಷ್ಟು, `ಕ'ವನ್ನು ಪೂರ್ಣ ಉಬ್ಬಿಸಿ. ಎಲ್ಲ ಬಲೂನುಗಳ ಬಾಯಿಗೆ ಬಿಗಿಯಾಗಿ ದಾರ ಕಟ್ಟಿ ಜೋತು ಬಿಡಿ.
3. ಒಂದು ದಾರದ ಸಹಾಯದಿಂದ ಬಲೂನುಗಳ ಮಧ್ಯದಲ್ಲಿ ಅವುಗಳ ವ್ಯಾಸವನ್ನು ಅಳೆದು, ಸ್ಕೇಲ್‌ನ ಸಹಾಯದಿಂದ ಅದನ್ನು ನಮೂದಿಸಿಕೊಳ್ಳಿ.

4. 24 ಗಂಟೆಗಳ ನಂತರ ಎಲ್ಲ ಬಲೂನುಗಳ ವ್ಯಾಸವನ್ನೂ ಅಳೆಯಿರಿ.

ಪ್ರಶ್ನೆ
1. ಬಲೂನುಗಳ ಆಕಾರದಲ್ಲಿ ಬದಲಾವಣೆ ಏನಾದರೂ ಆಗಿದೆಯೇ? ಯಾಕೆ?
2. ಎರಡು ದಿವಸಗಳ ನಂತರ ಬಲೂನುಗಳಲ್ಲಾದ ಮಾರ್ಪಾಡೇನು?

3. ನಿತ್ಯ ಜೀವನದಲ್ಲಿ ಈ    ವಿಷಯದ ಬಗ್ಗೆ ನಿಮಗೆ ತಿಳಿದಿದೆಯೇ?

ಉತ್ತರ
1. `ಕ' ಬಲೂನು ಅತಿ ಹೆಚ್ಚು ಹಾಗೂ `ಅ' ಬಲೂನು ಅತಿ ಕಡಿಮೆ ಪ್ರಮಾಣದಲ್ಲಿ ಸುಕ್ಕುಗಟ್ಟಿರುತ್ತವೆ. ಯಾಕೆಂದರೆ ಗಾಳಿಯ ಅಣುಗಳು ಬಲೂನಿನ ಪರೆಯ ಮುಖಾಂತರ ಹೊರ ಹೋಗುತ್ತವೆ. `ಕ' ಬಲೂನಿನಲ್ಲಿ ಬಹಳ ಗಾಳಿ ಇದೆ. ಅಂದರೆ ಒತ್ತಡ ಬಹಳ ಇದೆ ಎಂದರ್ಥ. ಹೀಗಾಗಿ ಅದು ಹೆಚ್ಚು ಸುಕ್ಕುಗಟ್ಟಿರುತ್ತದೆ.
2. ಎರಡನೆಯ ದಿನವೂ ಬಲೂನುಗಳು ಸುಕ್ಕುಗಟ್ಟುತ್ತವೆ.
3. ಬಹಳ ದಿವಸಗಳವರೆಗೆ ಓಡಿಸದೇ ಇರುವ ಕಾರುಗಳ ಗಾಲಿಯಲ್ಲಿಯ ಗಾಳಿ ಕಡಿಮೆಯಾಗುವುದು ಈ ತತ್ವದಿಂದಲೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT