ಉತ್ತರ:
ಧನಿಯಾ ಪುಡಿಯಲ್ಲಿ ಯಾವ ಬದಲಾವಣೆಗಳು ಕಾಣುವುದಿಲ್ಲ. ನೀರಿನ ಮೇಲ್ಮೈ ಸೆಳೆತ (Surface tension) ದ ಕಾರಣದಿಂದ, ಧನಿಯಾ ಪುಡಿಯು ನೀರಿನ ಮೇಲೆ ಎಲ್ಲ ಕಡೆ ಹರಡಿ ತೇಲುತ್ತಿರುತ್ತದೆ. ಸಾಬೂನಿನ ದ್ರಾವಣವು ನೀರಿನ ಮೇಲ್ಮೈ ಸೆಳೆತವನ್ನು ತಗ್ಗಿಸುತ್ತದೆ. ನೀವು ಸಾಬೂನಿನ ದ್ರಾವಣದಲ್ಲಿ ಅದ್ದಿದ ತುದಿಬೆರಳನ್ನು ಪಾತ್ರೆಯ ಮಧ್ಯದಲ್ಲಿ ಅದ್ದಿದಾಗ ನೀರಿನ ಮೇಲ್ಮೈ ಸೆಳೆಯ ಕುಗ್ಗಿ, ಹರಡಿದ ಧನಿಯಾ ಪುಡಿ ಅಂಚಿನ ಕಡೆಗೆ ಸರಿಯುತ್ತದೆ. ಒಂದು ಲೋಟದ ಬಾಯಿಗೆ ರಬ್ಬರ್ ಪರೆಯನ್ನು ಜಗ್ಗಿ ಹಾಕಿ, ಅನಂತರ ರಬ್ಬರನ್ನು ಮಧ್ಯದಲ್ಲಿ ಕತ್ತರಿಸಿದಾಗ, ಅದು ಲೋಟದ ಅಂಚಿನ ಕಡೆಗೆ ಹೋಗುವಂತೆ ತೇಲುವ ಪುಡಿ ಸರಿಯುತ್ತದೆ.