ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಳು ಕತ್ತರಿಸುವ ನೀರು

ಮಾಡಿ ನಲಿ ಸರಣಿ–91
Last Updated 7 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೇಕಾಗುವ ಸಲಕರಣೆ ಒಂದು ಪಾರದರ್ಶಕ ಗಾಜಿನ ಗ್ಲಾಸು/ಬೀಕರ್, ನೀರು, ಪೆನ್.
ವಿಧಾನ: ಒಂದು ಬೀಕರಿನಲ್ಲಿ ಮುಕ್ಕಾಲು ಭಾಗ ನೀರು ತೆಗೆದುಕೊಳ್ಳಿ. ನೀರಿನಲ್ಲಿ ಒಂದು ಪೆನ್ ಇಡಿ. ಪೆನ್ ಹೊರ ತೆಗೆದು ನಿಮ್ಮ ಒಂದು ಬೆರಳನ್ನು ನೀರಿನಲ್ಲಿ ಅದ್ದಿರಿ.

ಪ್ರಶ್ನೆ: ನೀರಿನಲ್ಲಿ ಮುಳುಗಿರುವ ಹಾಗೂ ನೀರಿನ ಹೊರಗಿರುವ ಪೆನ್ ಹೇಗೆ ಕಾಣುತ್ತದೆ? ನಮ್ಮ ಇಡೀ ಬೆರಳು ಹೇಗೆ ಕಾಣುತ್ತದೆ? ಯಾಕೆ?
ಉತ್ತರ: 1) ಬೆರಳು ಕತ್ತರಿಸಿದಂತೆ ಕಾಣುತ್ತದೆ. ಯಾಕೆಂದರೆ ಬೆರಳಿನ ಕೆಳಭಾಗ (ತುದಿ) ದಿಂದ ಬರುವ ಕಿರಣಗಳು ತ್ರಿಜ್ಯೀಯ ರೇಖೆ ಮೂಲಕ ಬಂದು ನಮ್ಮ ಕಣ್ಣುಗಳನ್ನು ಸೇರುವುದಿಲ್ಲ. ಕಿರಣಗಳು ಕೋನವನ್ನು ಮಾಡುವುದರಿಂದ ಹಾಗೂ ಅವು ವಾತಾವರಣವನ್ನು ಪ್ರವೇಶಿಸುವುದರಿಂದ ಕತ್ತರಿಸಿದಂತೆ ಭಾಸವಾಗುತ್ತದೆ. ಯಾವುದೇ ವಸ್ತುವಿನಿಂದ ಬರುವ ಕಿರಣಗಳು ದಟ್ಟ ಮಾಧ್ಯಮದಿಂದ ಕಡಿಮೆ ದಟ್ಟ ಮಾಧ್ಯಮದ ಕಡೆಗೆ ಅಥವಾ ಕಡಿಮೆ ದಟ್ಟ ಮಾಧ್ಯಮದಿಂದ ಹೆಚ್ಚು ದಟ್ಟ ಮಾಧ್ಯಮದ ಕಡೆಗೆ ಚಲಿಸಿದಾಗ ಅವು ಬಾಗುತ್ತವೆ.
2) ನೀರಿನಲ್ಲಿ ಒಂದು ಪೆನ್/ಪೆನ್ಸಿಲ್ ಇಳಿ ಬಿಟ್ಟು ನೋಡಿ ಅದೂ ಕತ್ತರಿಸಿದಂತೆ ಗೋಚರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT