ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಮಾಡುವ ’ರೀಲ್ಸ್‌‘

Last Updated 9 ಜುಲೈ 2020, 7:58 IST
ಅಕ್ಷರ ಗಾತ್ರ

ಜನಪ್ರಿಯ ಆ್ಯಪ್ಟಿಕ್‌ಟಾಕ್‌ ನಿಷೇಧದ ನಂತರ ಇನ್‌ಸ್ಟಾಗ್ರಾಂ 'ರೀಲ್ಸ್'‘ ಎಂಬ ಹೊಸ ಫೀಚರ್‌ ಅನ್ನು ಪರಿಚಯಿಸಿದೆ.ಬ್ರೆಜಿಲ್, ಜರ್ಮನಿ ಮತ್ತು ಫ್ರಾನ್ಸ್‌ ನಂತರ ಭಾರತದಲ್ಲಿ ಈ ಹೊಸ ಸ್ವರೂಪದ ಫೀಚರ್‌ ಬಿಡುಗಡೆಯಾಗಿದೆ. ಈಗಾಗಲೇ ಇದರ ಬಳಕೆ ಆರಂಭವಾಗಿದ್ದು #instagramreels ಹ್ಯಾಶ್‌ಟ್ಯಾಗ್‌ನಲ್ಲಿ ಹಲವು ವಿಡಿಯೊಗಳು ಟ್ರೆಂಡ್‌ ಆಗುತ್ತಿವೆ.

ಇನ್‌ಸ್ಟಾಗ್ರಾಂನಲ್ಲಿ ಇರುವ ಬೂಮರಾಂಗ್, ಲೈವ್‌, ಫೋಟೊ ಫ್ರೇಮ್‌ ಆಯ್ಕೆ ಸ್ವರೂಪಗಳ ಜತೆಗೆ ಈಗ ’ರೀಲ್ಸ್‌‘ಹೊಸ ಸೇರ್ಪಡೆ. ಈ ಹೊಸ ಫೀಚರ್‌ನಲ್ಲಿಇನ್‌ಸ್ಟಾಗ್ರಾಂನಲ್ಲೇ ಕಿರು ವಿಡಿಯೊಗಳನ್ನು ತಯಾರಿಸಲು ಮತ್ತು ಹಂಚಿಕೊಳ್ಳಲು ಅವಕಾಶವಿದೆ. ಬಳಕೆದಾರರು ಆಡಿಯೊ ಎಫೆಕ್ಟ್‌ಗಳೊಂದಿಗೆ 15 ಸೆಕೆಂಡ್‌ನ ಮಲ್ಟಿ-ಕ್ಲಿಪ್ ವಿಡಿಯೊಗಳನ್ನು ರೆಕಾರ್ಡ್ ಮಾಡಬಹುದು ಮತ್ತು ಆ ವಿಡಿಯೊಗಳನ್ನು ಎಡಿಟ್ ‌ಕೂಡ ಮಾಡಬಹುದು.ಈ ರೀಲ್ಸ್‌ ಟೂಲ್‌ ಬಳಸಿ ಮಾಡಿದ ವಿಡಿಯೊವನ್ನು ಇನ್‌ಸ್ಟಾಗ್ರಾಂ ಫೀಡ್‌ನಲ್ಲೂ ನೇರವಾಗಿ ಹಂಚಿಕೊಳ್ಳಬಹುದು.

ಎಕ್ಸ್‌ಪ್ಲೋರ್ ವಿಭಾಗದ ಮೂಲಕ ಪಬ್ಲಿಕ್‌ ಆಗಿಯೂ ರೀಲ್‌ಗಳನ್ನು ಹಂಚಿಕೊಳ್ಳಬಹುದು. ಇದರಿಂದಸ್ನೇಹಿತರು ಸೇರಿಹೆಚ್ಚಿನ ಪ್ರೇಕ್ಷಕರಿಗೆ ವಿಡಿಯೊಲಭ್ಯವಾಗುತ್ತದೆ. ರೀಲ್ಸ್‌ನಲ್ಲಿ ಸಿನಿಮಾ ಹಾಡುಗಳು, ಡೈಲಾಗ್‌ ಮತ್ತು ಸಂಗೀತದ ಕ್ಲಿಪ್‌ಗಳ ವಿಶಾಲ ಗ್ರಂಥಾಲಯವೂ ಇದೆ. ಹಲವುಫಿಲ್ಟರ್ ಹಾಗೂಸ್ಪಾರ್ಕ್ AR ಎಫೆಕ್ಟ್‌ನಲ್ಲಿ ವಿಡಿಯೊ ರಚನೆಗೆ ಅನುವು ಮಾಡಿಕೊಟ್ಟಿದೆ.

ರೀಲ್ಸ್‌ ವಿಡಿಯೊ ಮಾಡುವುದು ಹೇಗೆ

ಬೂಮರಾಂಗ್, ಲೈವ್‌ ಫೋಟೊ ಫೀಚರ್‌ ಆಯ್ಕೆ ಮಾಡಿಕೊಳ್ಳುತ್ತಿದ್ದ ಜಾಗದಲ್ಲೇ ರೀಲ್ಸ್‌ ಆಯ್ಕೆ ಇದೆ. ರೀಲ್ಸ್‌ ಆಯ್ದುಕೊಂಡರೆ, ಅಲ್ಲಿ ಆಡಿಯೊ, ಎಆರ್ ಎಫೆಕ್ಟ್‌ಗಳು, ಟೈಮರ್ ಮತ್ತು ಕೌಂಟ್‌ಡೌನ್, ಜೋಡಣೆ ಮತ್ತು ಕ್ಲಿಪ್‌ನ ವೇಗ ಸೇರಿದಂತೆ ಎಡಭಾಗದಲ್ಲಿ ವಿವಿಧ ಎಡಿಟ್‌ ಸಾಧನಗಳು ಲಭ್ಯವಿದೆ. (ಈ ಆಯ್ಕೆ ಸಿಗುತ್ತಿಲ್ಲವೆಂದರೆ ಇನ್‌ಸ್ಟಾಗ್ರಾಂ ಆ್ಯಪ್‌ಅನ್ನು ಅಪ್‌ಡೇಟ್‌ ಮಾಡಿ).

ಟಿಕ್‌ಟಾಕ್‌ನಲ್ಲಿ ಮಾಡುತ್ತಿದ್ದಂತೆ ಜನಪ್ರಿಯ ಹಾಡುಗಳು, ಟ್ರೆಂಡ್‌ ಡೈಲಾಗ್‌, ಚಾಲೆಂಜ್‌ ಸ್ವಾಗ್‌ ವಿಡಿಯೊಗಳನ್ನು ಮಾಡಬಹುದು. ಮಾಡಿದ ವಿಡಿಯೊ ಅಳಿಸಲು, ಮರು ಚಿತ್ರೀಕರಣ ಮಾಡಲು ಅವಕಾಶವಿದೆ.

ಹೆಚ್ಚುವರಿಯಾಗಿ ಫೀಡ್ ಅಥವಾ ಎಕ್ಸ್‌ಪ್ಲೋರ್‌ಗೆ ಪೋಸ್ಟ್‌ ಮಾಡುವಾಗವಿಡಿಯೊದಲ್ಲಿ ಪ್ರೊಫೈಲ್ ಹೆಸರು ಬರುತ್ತದೆ. ಸ್ಟೋರಿಯಲ್ಲಿ ಹಂಚಿಕೊಂಡರೆವಿಡಿಯೊ 24 ಗಂಟೆಗಳವರೆಗೆ ಇರುತ್ತದೆ.

ಜುಲೈ 8ರ ಬುಧವಾರ ಸಂಜೆ 7.30 ರಿಂದ ಪ್ರಾರಂಭವಾಗಿರುವ ಈ ಆಯ್ಕೆಪರೀಕ್ಷಾ ಹಂತದಲ್ಲಿದೆ. ಜನರ ಬಳಕೆಯನ್ನು ಆಧರಿಸಿ ಮತ್ತಷ್ಟು ಬದಲಾವಣೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT