ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದದ ಪಾದಕೆ ಚೆಂದದ ಆರೈಕೆ

Last Updated 26 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಉಗುರು ಬೆಚ್ಚಗಿನ ನೀರಿನಲ್ಲಿ ಕಾಲಿಟ್ಟು ಪ್ರಪಂಚವನ್ನೇ ಮರೆಯುವ ಸುಖ ಯಾರಿಗೆ ಬೇಕಿಲ್ಲ ಹೇಳಿ? ಸ್ವಲ್ಪ ಮಾಯಿಶ್ಚರೈಸರ್ ತೆಗೆದುಕೊಂಡು ಪಳಗಿದ ಕೈಗಳು ಹಿಮ್ಮಡಿ, ಕಾಲಿನ ಬೆರಳಿಗೆ ಹಿತವಾದ ಮಸಾಜ್ ಮಾಡುತ್ತಾ ಇದ್ದರೆ ಮನಸ್ಸಿಗೆ ಎಷ್ಟೋ ರಿಲ್ಯಾಕ್ಸ್ ಅನಿಸುತ್ತದೆ.

ಮುಖ ಸ್ವಲ್ಪ ಕಳೆಗುಂದಿದರೆ ಕಂಗೆಡುವ ಮನಸ್ಸು ಪಾದದ ಕಾಳಜಿಗೆ ಅಷ್ಟೇನೂ ತಲೆಕೆಡಿಸಿಕೊಳ್ಳುವುದಿಲ್ಲ. ಕಾಲು ತಾನೆ..? ಅದನ್ನು ಯಾರು ನೋಡುತ್ತಾರೆ ಎಂಬ ಕಾರಣ ಕೊಟ್ಟು ಸುಮ್ಮನಾಗುತ್ತೇವೆ.
ದೇಹದ ಭಾರವನ್ನೆಲ್ಲಾ ಹೊರುವ ಪಾದಕ್ಕೂ ಆರೈಕೆ ಬೇಕಿದೆ. ಇಂದು ಪಾರ್ಲರ್‌ನಲ್ಲಿ ಬಗೆಬಗೆಯ ಪೆಡಿಕ್ಯೂರ್‌ಗಳು ಬಂದಿವೆ. ಒಂದಷ್ಟು ಸಮಯ ಮೀಸಲಿಟ್ಟರೆ ನೀವು ಸುಂದರ ಪಾದದ ಒಡತಿ ಯಾಗ ಬಹುದು.

ಪಾದಗಳ ಆರೋಗ್ಯದೆಡೆಗೆ ಆರೈಕೆ ಮಾಡದೇ ಇದ್ದರೆ ಒಡೆದ ಹಿಮ್ಮಡಿ,  ಉಗುರಿನ ಎಡೆಗಳಲ್ಲಿ ಸೇರಿರುವ ಮಣ್ಣು ಪಾದದ ಸೌಂದರ್ಯ ಕೆಡಿಸುತ್ತದೆ. ಮಧುಮೇಹಿಗಳಂತೂ ಸದಾ ಕಾಲವೂ ಪಾದಗಳ ಸಂರಕ್ಷಣೆ ಮಾಡಿಕೊಳ್ಳಲೇಬೇಕು. ಅದು ಸೌಂದರ್ಯಕ್ಕೆ ಮಾತ್ರವಲ್ಲ, ಸ್ವಾಸ್ಥ್ಯಕ್ಕಾಗಿಯೂ.

ಪೆಡಿಕ್ಯೂರ್‌ನ ಉಪಯೋಗ

* ನಿಯಮಿತವಾಗಿ ಪೆಡಿಕ್ಯೂರ್ ಮಾಡಿಕೊಳ್ಳುವುದರಿಂದ ಪಾದ ನುಣುಪಾಗುವುದಲ್ಲದೇ, ಉಗುರು ಸುತ್ತು, ಹಿಮ್ಮಡಿ ಒಡೆತ ಕಾಣಿಸಿ ಕೊಳ್ಳುವುದು ಕಡಿಮೆಯಾಗುತ್ತದೆ.
* ಹೈಹಿಲ್ಡ್ ಚಪ್ಪಲಿ ಹಾಕಿಕೊಳ್ಳುವವರ ಪಾದ ಸ್ವಲ್ಪ ಗಟ್ಟಿಯಾಗಿರುತ್ತದೆ.   ಪೆಡಿಕ್ಯೂರ್‌ನಿಂದ ಗಡುಸು ಕಡಿಮೆಯಾಗುತ್ತದೆ ಜತೆಗೆ ಒಣ ಚರ್ಮಗಳನ್ನು ನಿವಾರಿಸುತ್ತದೆ.
* ಮನೆಯಲ್ಲಿ ನಾವು ಮಾಡಿಕೊಳ್ಳುವ ಆರೈಕೆಗಿಂತ ಪಾರ್ಲರ್‌ನಲ್ಲಿ ಮಾಡುವ ಪಾದದ ಮಸಾಜ್‌ನಿಂದ ದೇಹಕ್ಕೂ ಆರಾಮ ಅನಿಸುತ್ತದೆ.
* ರಕ್ತ ಸಂಚಲನಕ್ಕೆ ಇದು ಸಹಾಯವಾಗುತ್ತದೆ.

ಏನೇನಿದೆ?
ಪೆಡಿಕ್ಯೂರ್‌ನಲ್ಲಿ ಸಾಕಷ್ಟು ಬಗೆಗಳಿವೆ. ರೆಗ್ಯೂಲರ್ ಪೆಡಿಕ್ಯೂರ್, ಸ್ಪಾ ಪೆಡಿಕ್ಯೂರ್, ಪ್ಯಾರಫಿನ್, ಸ್ಟೋನ್ ಪೆಡಿಕ್ಯೂರ್, ಫ್ರೆಂಚ್ ಪೆಡಿಕ್ಯೂರ್, ಅಥ್ಲಿಟಿಕ್ ಪೆಡಿಕ್ಯೂರ್, ಚಾಕೋಲೇಟ್ ಪೆಡಿಕ್ಯೂರ್, ಐಸ್‌ಕ್ರೀಮ್ ಪೆಡಿಕ್ಯೂರ್, ಮಾರ್ಗರಿಟಾ ಪೆಡಿಕ್ಯೂರ್, ವೈನ್ ಪೆಡಿಕ್ಯೂರ್‌ಗಳಿವೆ.

ಇತ್ತೀಚೆಗೆ ಟ್ರೆಂಡ್‌ನಲ್ಲಿ ಜೆಲ್ ಪೆಡಿಕ್ಯೂರ್, ಅರ್ಥ್ ಸ್ಪಾ ಪಡಿಕ್ಯೂರ್, ಲಕ್ಸುರಿ ಪೆಡಿಕ್ಯೂರ್‌ಗಳಿವೆ.
ಫೂಟ್‌ಲಾಜಿಕ್ಸ್ ಪೆಡಿಕ್ಯೂರ್ ಮಧುಮೇಹಿಗಳಿಗೆ ತುಂಬ ಒಳ್ಳೆಯದು. ಒಣ ಚರ್ಮದವರು ಚಾಕೋಲೇಟ್ ಪೆಡಿಕ್ಯೂರ್ ಮಾಡಿಸಿ­ಕೊಳ್ಳಬಹುದು. ಇನ್ನು ಎಣ್ಣೆ ಚರ್ಮದವರಿಗೆ ಗ್ರೀನ್ ಟೀ ಪೆಡಿಕ್ಯೂರ್ ಒಳ್ಳೆಯದು. ಪಾರಾಫಿನ್ ಪೆಡಿಕ್ಯೂರ್ ತುಂಬ ಮಾಯಿಶ್ಚರೈಸರ್ ನೀಡುವಂತದ್ದು ಇದು ತುಂಬ ಒಣ ಚರ್ಮದ ಪಾದದವರಿಗೆ ಹಿತವಾದ ಅನುಭವ ನೀಡುತ್ತದೆ.

ತಜ್ಞರ ಮಾತೇನು?
‘ತಿಂಗಳಿಗೆ ಎರಡು ಬಾರಿ ಪೆಡಿಕ್ಯೂರ್ ಮಾಡಿಸಿಕೊಳ್ಳಿ. ಉಗುರಿನ ಸಂಧಿಯಲ್ಲಿ ಸೇರಿರುವ ಕೊಳೆ ತೆಗೆಯುವುದಲ್ಲದೇ ಪಾದದ ಸ್ವಾಸ್ಥ್ಯವನ್ನು ಇದು ಕಾಪಾಡುತ್ತದೆ. ಇನ್ನು ಮಧುಮೇಹಿಗಳು ಹೆಚ್ಚು ಮಸಾಜ್‌ ಇರುವ ಪೆಡಿಕ್ಯೂರ್ ಬಳಸದೇ ಇರುವುದು ಒಳ್ಳೆಯದು. ಹಿತವಾದ ಮಸಾಜ್ ಮಾಡಿಸಿಕೊಳ್ಳಬೇಕು’  ಎನ್ನುತ್ತಾರೆ ಲೈಮ್ ಲೈಟ್ ಸಲೂನ್‌ನ ಬ್ಯೂಟಿ ತಜ್ಞೆ ನಂದಿನಿ.

ಸುಸ್ತಿಗೆ ಮದ್ದು ಪೆಡಿಕ್ಯೂರ್

‘ಪಾದದ ಆರೈಕೆ ಬಗ್ಗೆ ನಾನು ತುಂಬ ಕಾಳಜಿ ವಹಿಸುತ್ತೇನೆ. ಹೊರಗಡೆ ಶೂಟಿಂಗ್ ಹೋದಾಗ, ತುಂಬ ಸುಸ್ತಾದಾಗ ನಾನು ಪೆಡಿಕ್ಯೂರ್ ಮೊರೆ ಹೋಗುತ್ತೇನೆ. ಹದಿನೈದು ದಿನಕ್ಕೊಮ್ಮೆ ಪೆಡಿಕ್ಯೂರ್ ಮಾಡಿಸಿಕೊಳ್ಳುವುದರಿಂದ ಪಾದದ ಆರೈಕೆಯ ಜತೆಗೆ ಮನಸ್ಸಿಗೂ ನೆಮ್ಮದಿ ಸಿಗುತ್ತದೆ. ಹೆಚ್ಚು ನೃತ್ಯದ ಅಭ್ಯಾಸ ಮಾಡಿದಾಗ ಪಾದದ ಸಮಸ್ಯೆ ಕಾಡುತ್ತದೆ. ಹಾಗಾಗಿ ನಾನು ಚಾಕೋಲೆಟ್ ಪೆಡಿಕ್ಯೂರ್ ಮಾಡಿಸಿಕೊಳ್ಳುತ್ತೇನೆ. ಇದು ಚರ್ಮ ಕಳೆಗಟವಂತೆ ಮಾಡುತ್ತದೆ. ಪಾದವನ್ನು ನುಣುಪಾಗಿಸುತ್ತದೆ’ ಎನ್ನುತ್ತಾರೆ ನಟಿ ಎಸ್ತರ್ ನರೋನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT