ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧರ ರಂಗಿನ ಗುಂಗು

ಬೆಡಗು –ಬೆರಗು
Last Updated 7 ನವೆಂಬರ್ 2014, 19:30 IST
ಅಕ್ಷರ ಗಾತ್ರ

ತುಟಿಯಂಚಿನಲ್ಲಿ ತಡೆ ಹಿಡಿದ ಮಾತುಗಳು ನೂರಿದ್ದರೂ ನಸುನಗುವ ತುಟಿ ಎಲ್ಲವನ್ನೂ ಎದುರಿನವರಿಗೆ ದಾಟಿಸುತ್ತದೆ. ಆಪ್ತ ಭಾವವಿರಬಹುದು, ಆತ್ಮೀಯ ನಗುವಿರಬಹುದು. ವ್ಯಂಗ್ಯ, ಟೀಕೆ, ಸಿಟ್ಟು, ದುಃಖ ಏನಾದರೂ ಸರಿ, ತುಟಿಯಂಚಿನಲ್ಲಿಯೇ ಒಂದಿನಿತು ಇಣುಕುವುದನಂತೂ ಖಂಡಿತ.

ಭಾವಾಭಿವ್ಯಕ್ತಿಯ ಪ್ರಬಲ ಮಾಧ್ಯಮವಾಗಿರುವ ತುಟಿಯ ಆರೋಗ್ಯವೂ ಅಷ್ಟೇ ಮುಖ್ಯ. ತುಟಿ ನಯವಾಗಿರಿಸಲು ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳು, ನೀವು ಹಲ್ಲುಜ್ಜುವ ಬ್ರಷ್‌ನಿಂದ ಮೆದುವಾಗಿ ವೃತ್ತಾಕಾರವಾಗಿ ನಿಮ್ಮ ತುಟಿಯ ಮೇಲೆ ಉಜ್ಜಿ. ಇದರಿಂದ ತುಟಿಯ ಮೇಲ್ಮೈಯಲ್ಲಿನ ಒಣಗಿದ ಚರ್ಮ ಮಾಯವಾಗುತ್ತದೆ. ನಂತರ ತುಟಿ ತೊಳೆದು ಲಿಪ್‌ಬಾಮ್‌ ತುಟಿಗೆ ಸವರುವುದು ಮರೆಯದಿರಿ. 

ಹೆಚ್ಚು ಕಾಫಿ, ಟೀ ಕುಡಿಯುವುದ­ರಿಂದ ಹಾಗೂ ಸಿಗರೇಟು ಸೇದುವುದ­ರಿಂದ ತುಟಿ ಬಣ್ಣ ಕಪ್ಪಾಗು­ತ್ತದೆ. ಹಾಗಾಗಿ ಧೂಮಪಾನದಿಂದ ದೂರ ಇರಿ. 
* ನೈಸರ್ಗಿಕವಾಗಿ ನಿಮ್ಮ ತುಟಿಯನ್ನು ಗುಲಾಬಿಯಾಗಿರಲು ಆರೋಗ್ಯವನ್ನು ಕಾಪಾಡಿಕೊಳ್ಳೂವುದು ಅತ್ಯಗತ್ಯ. ಹೆಚ್ಚು ನೀರನ್ನು ಕುಡಿಯಿರಿ. ತುಟಿ ಒಣಗದಂತೆ ತಡೆಯಬಹುದು. ಸೀಳದಂತೆಯೂ ತಡೆಯಬಹುದು. ಲಿಪ್‌ ಬಾಮ್‌ ಬಳಸಿ. ಅದಾಗದಿದ್ದರೆ ಮಲಗುವ ಮುನ್ನ ಬೆಣ್ಣೆ, ತುಪ್ಪ ಅಥವಾ ಕೆನೆಯನ್ನೂ ತುಟಿಗೆ ಸವರಬಹುದು.
* ರೋಸ್‌ ವಾಟರ್‌ ಹಾಗೂ ಸಕ್ಕರೆ ಸೇರಿಸಿ ತುಟಿಗೆ ಪ್ರತಿದಿನವೂ ಮಸಾಜ್‌ ಮಾಡಿ. ಇದು ನಿಮ್ಮ ತುಟಿಯನ್ನು ಗುಲಾಬಿ ದಳದಷ್ಟೇ ಮೃದು, ನಯ ಹಾಗೂ ಹೊಳೆಯುವಂತೆ ಮಾಡುತ್ತದೆ.
* ಹೆಚ್ಚು ಹೆಚ್ಚು ಹಸಿರು ತರಕಾರಿ, ಹಣ್ಣು ಹಂಪಲು ತಿನ್ನಿ. ಸಲಾಡ್‌, ಹಣ್ಣುಗಳ ಜ್ಯೂಸ್‌ ಸೇವಿಸುತ್ತಾ ಇರಿ. ಇದು ನಿಮ್ಮ ತುಟಿಯನ್ನು ತಾಜಾ ಆಗಿರಿಸುತ್ತದೆ. 
* ಹೆಚ್ಚು ಕ್ಯಾರೆಟ್‌ ಹಾಗೂ ಹಸಿ ಸೌತೆಕಾಯಿ ತಿನ್ನಿ. 
* ಗುಲಾಬಿ ದಳಗಳನ್ನು ಚೆನ್ನಾಗಿ ಅರೆದು ತುಟಿಗಳಿಗೆ ಲೇಪಿಸಿದರೆ ತುಟಿ­ಗಳು ಪಿಂಕ್‌ ಆಗಿ ಉಳಿಯುತ್ತದೆ. ನಿಂಬೆಹಣ್ಣಿನ ರಸದಿಂದ ಆಗಾಗ ಮಸಾಜ್‌ ಮಾಡುತ್ತಿದ್ದರೆ ತುಟಿ ಕಪ್ಪಾಗುವುದನ್ನು ತಡೆಯಬಹುದು.
* ನೈಸರ್ಗಿಕವಾಗಿ ಪಿಂಕ್‌ ಆಗಿರುವ ತುಟಿಯನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಬೀಟ್‌ರೂಟ್‌ ಲೇಪಿಸಿ ಮಲಗಿ.
ಚಳಿಗಾಲದಲ್ಲಿ ಚರ್ಮದ ತೇವಾಂಶ ಕಡಿಮೆ ಇರುವುದರಿಂದ ಆಗಾಗ ಲಿಪ್‌ ಬಾಮ್‌ ಸವರುವುದು ಅವಶ್ಯ.

ಲಿಪ್‌ಸ್ಟಿಕ್‌ ಟಿಪ್ಸ್: ಮೊದಲು ತುಟಿಯ ಮೇಲೆ ಲಿಪ್‌ ಬಾಮ್‌ ಅನ್ನು ಹಚ್ಚಿ, ನಂತರ ಅದರ ಮೇಲೆ

ಲಿಪ್‌ಸ್ಟಿಕ್‌ ಹಚ್ಚಿ. ಹೀಗೆ ಮಾಡುವುದರಿಂದ ನಿಮ್ಮ ಲಿಪ್‌ಸ್ಟಿಕ್‌ ದಿನವಿಡೀ ಫ್ರೆಶ್‌ ಆಗಿ ಕಾಣಿಸುತ್ತದೆ. ಜೊತೆಗೆ ತುಟಿಗೆ ನೇರ ಹಾನಿಯಾಗುವುದೂ ತಪ್ಪುತ್ತದೆ.

ಮೊದಲು ಲಿಪ್‌ ಬಾಮ್‌ ಬಳಸಿ ಅದರ ಮೇಲೆ ಮೃದುವಾಗಿ ತೆಳುವಾಗಿ ಲಿಪ್‌ಸ್ಟಿಕ್‌ ಹಚ್ಚಿ. ನಂತರ ಲಿಪ್‌ ಲೈನರ್‌ ತೆಗೆದುಕೊಂಡು ತುಟಿಯ ಔಟ್‌ಲೈನ್‌ಗೆ ಪೂರ್ತಿಯಾಗಿ ಗೆರೆ ಎಳೆಯಿರಿ. ಈಗ ನಿಮ್ಮ ತುಟಿ ಸಂಪೂರ್ಣವಾಗಿ ಕಾಣುತ್ತದೆ. ಈ ಕ್ರಮ ಅನುಸರಿಸುವ ಮೊದಲು ಇನ್ನೊಂದು ಕ್ರಮವನ್ನೂ ಅನುಸರಿಸಬಹುದು. ಅದು, ಲಿಪ್‌ ಬಾಮ್‌ ಹಚ್ಚಿದ ಮೇಲೆ ಲಿಪ್‌ ಲೈನರ್‌ನಿಂದ ನಿಮ್ಮ ತುಟಿಯ ಔಟ್‌ಲೈನ್‌ಗೆ ಸರಿಯಾಗಿ ಗೆರೆ ಎಳೆದು ಆಮೇಲೆ ಲಿಪ್‌ಸ್ಟಿಕ್‌ ಹಚ್ಚಿ. ಈ ಕ್ರಮದಿಂದ ನಿಮ್ಮ ಲಿಪ್‌ಸ್ಟಿಕ್‌ ಹೆಚ್ಚು ಕಾಲ ಉಳಿಯುತ್ತದೆ.

ಕೆಲವರಿಗೆ ಕಡು (ಡಾರ್ಕ್‌) ಬಣ್ಣಗಳ ಲಿಪ್‌ಸ್ಟಿಕ್‌ ಇಷ್ಟವಿರುದಿಲ್ಲ ಹಾಗೂ ಲಿಪ್‌ಸ್ಟಿಕ್ ಹೆಚ್ಚು ಢಾಳಾಗಿ ಕಾಣಿಸಲು ಇಷ್ಟಪಡುವುದಿಲ್ಲ. ಅಂಥವರು ಮೊದಲು ಲಿಪ್‌ಲೈನರ್ ಬಳಸಿ ನಂತರ ಲಿಪ್‌ಸ್ಟಿಕ್ ಹಚ್ಚುವುದು ಒಳ್ಳೆಯದು. ಇದು ತುಟಿಯಲ್ಲಿ ಅಷ್ಟಾಗಿ ಎದ್ದು ಕಾಣುವುದಿಲ್ಲ. ಹಾಗೂ ಕಡು ಬಣ್ಣದ ಲಿಪ್‌ಸ್ಟಿಕ್‌ ಬಳಸುವಾಗ ಮುಖದ ಮೇಕಪ್‌ ಸ್ವಲ್ಪ ಕಡಿಮೇ ಇದ್ದರೆ ಒಳಿತು. ಲಿಪ್‌ ಸ್ಟಿಕ್ ಹಚ್ಚಿದ ಮೇಲೆ ಟಿಶ್ಯೂ ಪೇಪರನ್ನು ಮೆದುವಾಗಿ ತುಟಿಯಿಂದ ಪ್ರೆಸ್ ಮಾಡಿ. ಆಗ ಹೆಚ್ಚುವರಿ ಲಿಪ್‌ಸ್ಟಿಕ್ ಪೇಪರಿಗೆ ಅಂಟಿಕೊಳ್ಳುತ್ತದೆ.

ಇನ್ನು ಲಿಪ್‌ಸ್ಟಿಕ್ ಆಯ್ಕೆಯ ಗೊಂದಲ ಹಲವರಲ್ಲಿರುತ್ತದೆ. ಹಾಗಾಗಿ ತಮಗೆ ಹೊಂದದ ಲಿಪ್‌ಸ್ಟಿಕ್ ಕೊಂಡು ಆಮೇಲೆ ಪೇಚಾಟ ಅನುಭವಿಸುವವರು ಹೆಚ್ಚು. ತೆಳು ಪಿಂಕ್ ಬಣ್ಣದ ಮುಖ ನಿಮ್ಮದಾಗಿದ್ದರೆ ಅಂಥವರು ಚೆರ್ರಿ ರೆಡ್ ಬಣ್ಣದ ಲಿಪ್‌ಸ್ಟಿಕ್ ಆರಿಸಬಹುದು. ಬೆಳ್ಳಗಿನ ಮೈಬಣ್ಣ ನಿಮ್ಮದಾಗಿದ್ದರೆ, ನೀವು ತೆಳು ಪಿಂಕ್, ತೆಳು ಹವಳದ ಬಣ್ಣ ಅಥವಾ ಆಪ್ರಿಕಾಟ್ ಬಣ್ಣದ ಲಿಪ್‌ಸ್ಟಿಕ್ ಆರಿಸಿ. ಗೋಧಿ ಬಣ್ಣದವರು ನೀವಾಗಿದ್ದರೆ ಸ್ವಲ್ಪ ಡಾರ್ಕ್ ಕಲರ್‌ಗಳ ಮೊರೆ ಹೋಗಬೇಕು. ನಿಮಗೆ, ರೆಡ್ ಬಣ್ಣದ ಲಿಪ್‌ಸ್ಟಿಕ್ ಅಥವಾ, ರೋಸ್ ರೆಡ್, ಬೆರ್ರಿ ಕಲರ್‌ಗಳನ್ನು ಆರಿಸಬಹುದು. ಕಪ್ಪು ಬಣ್ಣದ ಚರ್ಮ ನಿಮ್ಮದಾಗಿದ್ದರೆ ಅಂಥವರು ಡೀಪ್ ರೆಡ್ ಬಣ್ಣದ ಅಥವಾ ಚಾಕೋಲೇಟ್ ಬಣ್ಣ, ಕಂದು ಕೆಂಪು ಬಣ್ಣವಿರುವ ಲಿಪ್ ಸ್ಟಿಕ್ ಆರಿಸಿ. ಕಪ್ಪು ಮೈಬಣ್ಣ ನಿಮ್ಮದಾಗಿದ್ದರೆ, ನೀವು ನಿಮ್ಮ ಅಂಗಿಯ ಬಣ್ಣಕ್ಕೆ ಲಿಪ್‌ಸ್ಟಿಕ್ ಮ್ಯಾಚ್ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT