ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಗೆ ಬಗೆಬಗೆ ಜ್ಯೂಸ್‌

ನಮ್ಮೂರ ಊಟ
Last Updated 13 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸ್ಲಿಮ್‌ ಜ್ಯೂಸ್
ಸಾಮಗ್ರಿ: ಕಾಮಕಸ್ತೂರಿ ಒಂದು ಹಿಡಿ, ಪುದೀನ ಅರ್ಧ ಹಿಡಿ, ಕಿತ್ತಳೆ ಅಥವಾ ಕಲ್ಲಂಗಡಿ ರಸ ಒಂದು ಲೋಟ, ಸಕ್ಕರೆ ಕಾಲು ಲೋಟ,

ವಿಧಾನ: ಮಿಕ್ಸಿಯಲ್ಲಿ ತೊಳೆದಿರುವ ಕಾಮಕಸ್ತೂರಿ ಮತ್ತು ಪುದೀನಾವನ್ನು ಸಣ್ಣದಾಗಿ ರುಬ್ಬಿಕೊಳ್ಳಿ. ಇದಕ್ಕೆ ಕಲ್ಲಂಗಡಿ ರಸ, ಸಕ್ಕರೆ ಪುಡಿ, ಐಸ್‌ಕ್ಯೂಬ್‌ ಸೇರಿಸಿ ಕುಡಿಯಲು ಸಿದ್ಧವಾಗುತ್ತದೆ.

ಮಿಲೆಟ್ ಮ್ಯಾಜಿಕ್‌ ಡ್ರಿಂಕ್‌
ಸಾಮಗ್ರಿ:
ಮೊಳಕೆಕಟ್ಟಿ ಹುರಿದ ರಾಗಿ ಇಟ್ಟು, ಎರಡು ಟೇಬಲ್‌ ಚಮಚ, ಹುರಿದ ನವಣೆ ಹಿಟ್ಟು, ಹುರಿದ ಸಾವೆ ಹಿಟ್ಟು, ಹುರಿದ ಹಾರಕದ ಹಿಟ್ಟು ಎರಡು ಟೇಬಲ್‌ ಚಮಚ, ಮಸಾಲಾ ಪೇಸ್ಟ್‌ (ಹಸಿ ಮೆಣಸು ನಾಲ್ಕು, ಪುದೀನಾ ಸ್ವಲ್ಪ, ಕರಿಬೇವು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಕಾಳು ಮೆಣಸಿನ ಪುಡಿ ಅರ್ಧ ಟೀ ಚಮಚ, ಜೀರಿಗೆ ಪುಡಿ ಅರ್ಧ ಟೀ ಚಮಚ, ಶುಂಠಿ ಅರ್ಧ ಹಿಂಚು–ಎಲ್ಲವನ್ನೂ ರುಬ್ಬಿಕೊಳ್ಳಬೇಕು).

ವಿಧಾನ: ಒಂದು ದೊಡ್ಡ ಲೋಟ ನೀರನ್ನು ಕಾಯಿಸಿ, ಮೇಲೆ ತಿಳಿಸಿದ ಎಲ್ಲಾ ಹಿಟ್ಟುಗಳನ್ನು ಸೇರಿಸಿ ಎರಡು ನಿಮಿಷ ಕುದಿಸಿ. ನಂತರ ತಣ್ಣಗಾದ ಮೇಲೆ ಗಟ್ಟಿ ಮಜ್ಜಿಗೆಯನ್ನು ಬೆರೆಸಿ 1:1. ಇದಕ್ಕೆ ಮಸಾಲಾ ಪೇಸ್ಟ್‌ ಅನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕುಡಿಯಿರಿ. ಬೇಸಿಗೆಯಲ್ಲಿ ಈ ಜ್ಯೂಸ್‌ ದೇಹಕ್ಕೆ ಹೆಚ್ಚು ತಂಪಾಗಿರುತ್ತದೆ.

ಸನ್‌ಸೆಟ್‌  ಜ್ಯೂಸ್
ಸಾಮಗ್ರಿ:
ಒಂದು ಲೋಟ ಕಿತ್ತಳೆ ರಸ, ಒಂದು ಲೋಟ ದಾಳಿಂಬೆ ರಸ, ಅರ್ಧಕಪ್‌/ ರುಚಿಗೆ ತಕ್ಕಷ್ಟು ಸಕ್ಕರೆ ಪುಡಿ, ಐಸ್‌ಕ್ಯೂಬ್‌ 4.

ವಿಧಾನ: ಕಿತ್ತಳೆಹಣ್ಣಿನ ತೊಳೆ ತೆಗೆದು ಬೀಜ ಇಲ್ಲದೆ ರಸವನ್ನು ಹಿಂಡಿಕೊಳ್ಳಿ. ದಾಳಿಂಬೆ ಹಣ್ಣನ್ನು ಮಿಕ್ಸಿಮಾಡಿ ರಸವನ್ನು ಸೋಸಿಕೊಳ್ಳಿ. ಮೊದಲು ಕಿತ್ತಳೆ ರಸವನ್ನು ಲೋಟದೊಳಗೆ ಹಾಕಿ ನಂತರ ಸಕ್ಕರೆ ಪುಡಿ ಮತ್ತು ಐಸ್ ಕ್ಯೂಬ್‌ಅನ್ನು ಬೆರೆಸಿ ಕೊನೆಯದಾಗಿ ದಾಳಿಂಬೆ ರಸವನ್ನು ನಿಧಾನವಾಗಿ ಲೋಟದೊಳಗೆ ಹಾಕಿ. ಇದು ನೋಡಲು ಸೂರ್ಯಸ್ತದ ಬಣ್ಣವನ್ನು ಹೊಂದುತ್ತದೆ.

ಸೂಚನೆ: ಕಿತ್ತಳೆ ರಸವನ್ನು ತಯಾರಿಸುವಾಗ ಸಿಪ್ಪೆ ಭಾಗವನ್ನು ಹೆಚ್ಚಾಗಿ ಹಿಂಡಿ ತಯಾರಿಸಬಾರದು, ಇದರಿಂದ ಕಹಿಯಾಗುತ್ತದೆ.

ಪಾಲಕ್‌ ಫ್ರೆಶ್
ಸಾಮಗ್ರಿ:
ಪಾಲಕ್‌ ಎರಡು ಹಿಡಿ, ಶುಂಠಿ ಅರ್ಧ ಹಿಂಚು, ಮಾವಿನಕಾಯಿ ಪುಡಿ ಅಥವಾ ಆಮ್‌ಶ್ಯೂರ್‌ ಪೌಡರ್‌ ಒಂದು ಟೀ ಚಮಚ, ಕಪ್ಪು ಉಪ್ಪು ಕಾಲು ಟೀ ಚಮಚ, ಐಸ್‌ಟ್ಯೂಬ್‌, ಅವಶ್ಯಕತೆ ಇದ್ದಲ್ಲಿ ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಪಾಲಕ್‌ ಸೊಪ್ಪನ್ನು ತೊಳೆದು 2 ನಿಮಿಷ ತೆಳು ಬಟ್ಟೆಯಲ್ಲಿ ಹಾಕಿ ಎರಡು ನಿಮಿಷ ಬಿಸಿನೀರಿನಲ್ಲಿ ಕುದಿಸಿ ತೆಗೆಯಬೇಕು. ನಂತರ ಇದಕ್ಕೆ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ರುಬ್ಬಿ ಉಪಯೋಗಿಸುವುದು.

ಮಾವಿನಕಾಯಿ ರಿಫ್ರೆಷ್‌ ಜ್ಯೂಸ್‌
ಸಾಮಗ್ರಿ:
ತುರಿದ ಮಾವಿನ ಕಾಯಿ ಒಂದು ಬಟ್ಟಲು, ಶುಂಠಿ ಒಂದು ಇಂಚು, ಜೀರಿಗೆ ಪುಡಿ ಒಂದು ಟೀ ಚಮಚ, ಉಪ್ಪು ಅಥವಾ ಸಕ್ಕರೆ ರುಚಿಗೆ ತಕ್ಕಷ್ಟು, ಐಸ್ ಕ್ಯೂಬ್‌ ಸ್ವಲ್ಪ.

ವಿಧಾನ: ಮಾವಿನ ಕಾಯಿಯನ್ನು ತೊಳೆದು, ತುರಿದು, ಎಲ್ಲಾ ಸಾಮಗ್ರಿಗಳೊಂದಿಗೆ ರುಬ್ಬಿ, ಸೋಸಿ ಉಪಯೋಗಿಸಿ.

ನೆಲ್ಲಿಕಾಯಿ ಜ್ಯೂಸ್
ಸಾಮಗ್ರಿ:
ನೆಲ್ಲಿಕಾಯಿ ತಿರುಳು ಒಂದು ಲೋಟ, ಸಕ್ಕರೆ ಎರಡು ಲೋಟ, ನಿಂಬೆ ಉಪ್ಪು ಒಂದು ಚಿಟಿಕೆ, ಬೇಕಿದ್ದಲ್ಲಿ ಚಿಟಿಕೆ ಹಳದಿ ಬಣ್ಣ,

ವಿಧಾನ: ನೆಲ್ಲಿಕಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆದು ನಂತರ ಇವುಗಳನ್ನು ಐದರಿಂದ ಹತ್ತುನಿಮಿಷ ಕುದಿಸಬೇಕು. ತಣ್ಣಗಾದ ಮೇಲೆ ಬೀಜತೆಗೆದು ತಿರುಳನ್ನುರುಬ್ಬಿ. ನಾಲ್ಕು ಕಪ್‌ ನೀರಿಗೆ ಸಕ್ಕರೆ ಸೇರಿಸಿ ಕುದಿಸಿ, ತಣ್ಣಗಾದ ಮೇಲೆ ನಿಂಬೆ ಉಪ್ಪು ಮತ್ತು ನೆಲ್ಲಿಕಾಯಿ ತಿರುಳನ್ನು ಸೇರಿಸಿ ಉಪಯೋಗಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT