ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಟಿ. ಶ್ರೀನಿವಾಸ್‌ ಬಳಿ ಸ್ವಂತ ಆಸ್ತಿಯೇ ಇಲ್ಲ!

Published 13 ಮೇ 2024, 18:27 IST
Last Updated 13 ಮೇ 2024, 18:27 IST
ಅಕ್ಷರ ಗಾತ್ರ

ಬೆಂಗಳೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್‌ ಬಳಿ ಸ್ವಂತ ಹೆಸರಿನಲ್ಲಿ ಆಸ್ತಿಯೇ ಇಲ್ಲ!

ಸೋಮವಾರ ಸಲ್ಲಿಸಿರುವ ನಾಮಪತ್ರದ ಜತೆಗೆ ಲಗತ್ತಿಸಿರುವ ಪ್ರಮಾಣಪತ್ರದಲ್ಲಿ ಅವರು ಈ ಮಾಹಿತಿ ಒದಗಿಸಿದ್ದಾರೆ. ಆದರೆ, ಅವರ ಪತ್ನಿ, ಮಕ್ಕಳು ಮತ್ತು ಅವಿಭಜಿತ ಕುಟುಂಬದ ಹೆಸರಿನಲ್ಲಿ ಆಸ್ತಿಗಳಿವೆ.

ಪತ್ನಿ ಪೂರ್ಣಿಮಾ ಬಳಿ ₹ 20.65 ಕೋಟಿ, ಅವಿಭಜಿತ ಕುಟುಂಬದ ಹೆಸರಿನಲ್ಲಿ ₹ 4.57 ಕೋಟಿ, ಮಗನ ಹೆಸರಿನಲ್ಲಿ ₹ 1.11 ಕೋಟಿ ಮತ್ತು ಮಗಳ ಹೆಸರಿನಲ್ಲಿ ₹ 10.76 ಲಕ್ಷ ಮೌಲ್ಯದ ಚರಾಸ್ತಿಗಳಿವೆ.

ಪೂರ್ಣಿಮಾ ಹೆಸರಿನಲ್ಲಿ ₹ 58.76 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದರೆ, ಕುಟುಂಬದ ಹೆಸರಿನಲ್ಲಿ ₹ 19.44 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಪೂರ್ಣಿಮಾ ₹ 8.31 ಕೋಟಿ ಸಾಲ ಹೊಂದಿದ್ದರೆ, ಒಟ್ಟು ಕುಟುಂಬದ ಸಾಲ ₹ 11.43 ಕೋಟಿ ಇದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT