ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ಮಾರಿಕಾಂಬಾ ದೇವಿ ರಥೋತ್ಸವ, ಸಿಡಿ ಉತ್ಸವ

Published 3 ಮೇ 2024, 15:54 IST
Last Updated 3 ಮೇ 2024, 15:54 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಸಮೀಪದ ಮುತ್ತುಗದೂರು ಗ್ರಾಮ ದೇವತೆ ಮಾರಿಕಾಂಬಾ ದೇವಿ ರಥೋತ್ಸವ ಹಾಗೂ ಸಿಡಿ ಉತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.

ಸಿಡಿ ಹಾಗೂ ರಥೋತ್ಸವದ ಅಂಗವಾಗಿ ಮುಂಜಾನೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಮಾರಿಕಾಂಬಾ ದೇವಿಯ ಜತೆ, ಮೇಗಳಹಳ್ಳಿ ಮೈಲೆ ಮಾರಮ್ಮ ಹಾಗೂ ಟಿ. ಎಮ್ಮಿಗನೂರು ಗ್ರಾಮದ ಕರಿಯಮ್ಮ ದೇವಿಯರ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ವಾದ್ಯಗಳ ಮೇಳದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಉತ್ಸವದ ಪ್ರಯುಕ್ತ ಪ್ರತಿಯೊಂದು ಮನೆಗಳ ಮುಂದೆ ಆಕರ್ಷಕ ರಂಗೋಲಿಗಳನ್ನು ಬಿಡಿಸಿದ್ದುದು ಆಕರ್ಷಕವಾಗಿತ್ತು. ಉತ್ಸವ ಮೂರ್ತಿಗಳಿಗೆ ಮಹಿಳೆಯರು, ಮಕ್ಕಳು ಆರತಿ ಬೆಳಗಿದರು. ನಂತರ ಉತ್ಸವ ಮೂರ್ತಿಗಳಿಗೆ ಹೊಳೆ ಪೂಜೆ ನಡೆಸಿ, ದೇವಾಲಯಕ್ಕೆ ಕೆರೆತರಲಾಯಿತು. ಗ್ರಾಮದ ಕೆಲವು ಮಹಿಳೆಯರು ದೇವಿಯರಿಗೆ ಉಡಿ ತುಂಬಿದರು.

ಸಿಡಿ ಉತ್ಸವ: ದೇವಸ್ಥಾನದಲ್ಲಿ ಮಾರಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸಂಜೆ ದೇವಸ್ಥಾನದ ಮುಂಭಾಗದಲ್ಲಿ ಅಲಂಕಾರ ಮಾಡಿದ ಸಿಡಿ ಕಂಬದ ಬಳಿಗೆ ಹರಕೆ ಹೊತ್ತಿದ್ದ ಭಕ್ತರನ್ನು ಕರೆತರಲಾಯಿತು. ಭಕ್ತನನ್ನು ಸಿಡಿ ಕಂಬದಲ್ಲಿನ ಬಟ್ಟೆಗೆ ಕಟ್ಟಲಾಯಿತು. ಸಿಡಿ ಕಂಬವನ್ನು ಮೂರು ಸುತ್ತು ಸುತ್ತಿಸಲಾಯಿತು. ಈ ದೈವಿಕ ದೃಶ್ಯವನ್ನು ನೆರೆದಿದ್ದ ಸಾವಿರಾರು ಭಕ್ತರು ವೀಕ್ಷಿಸಿದರು. ಒಬ್ಬರ ನಂತರ, ಒಬ್ಬರಂತೆ ಭಕ್ತರನ್ನು ಸಿಡಿ ಕಂಬದ ಸೇವೆಯನ್ನು ಸಲ್ಲಿಸಿದರು.

ರಥೋತ್ಸವ: ಸಂಜೆ ಸೂರ್ಯಾಸ್ತ ಸಮಯವಾಗುತ್ತಿದ್ದಂತೆ ಮಾರಿಕಾಂಬಾ ದೇವಿ, ಮೈಲೆ ಮಾರಮ್ಮ ಹಾಗೂ ಕರಿಯಮ್ಮ ದೇವಿಯರ ಉತ್ಸವ ಮೂರ್ತಿಗಳನ್ನು ವಿವಿಧ ಹೂವು, ಬಟ್ಟೆ ಹಾಗೂ ವಿದ್ಯುತ್‌ ದೀಪಾಲಂಕಾರಗಳಿಂದ ಅಲಂಕಾರ ಮಾಡಿದ್ದ ರಥದಲ್ಲಿ ಕೂರಿಸಿ, ದೊಡ್ಡೆಡೆ ಸೇವೆಯನ್ನು ನಡೆಸಲಾಯಿತು. ಅರ್ಚಕರು ಉತ್ಸವ ಮೂರ್ತಿಗಳಿಗೆ ಮಹಾ ಮಂಗಳಾರತಿ ಮಾಡುತ್ತಿದ್ದಂತೆ ತೇರಿನ ಗಾಲಿಗಳಿಗೆ ನೂರಾರು ಭಕ್ತರು ತೆಂಗಿನ ಕಾಯಿ ಹೊಡೆದು ಭಕ್ತಿ ಸಮರ್ಪಿಸಿದರು. ನಂತರ ನೆರೆದಿದ್ದ ನೂರಾರು ಭಕ್ತರು ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು.

ಚಿಕ್ಕಜಾಜೂರು ಸಮೀಪದ ಮುತ್ತುಗದೂರು ಗ್ರಾಮ ದೇವತೆ ಮಾರಿಕಾಂಭ ದೇವಿಯ ಸಿಡಿ ಉತ್ಸವ ಶುಕ್ರವಾರ ಸಂಜೆ ನಡೆಯಿತು. ಭಕ್ತರೊಬ್ಬರನ್ನು ಸಿಡಿ ಕಂಬದಲ್ಲಿ ಕಟ್ಟಿರುವುದು.
ಚಿಕ್ಕಜಾಜೂರು ಸಮೀಪದ ಮುತ್ತುಗದೂರು ಗ್ರಾಮ ದೇವತೆ ಮಾರಿಕಾಂಭ ದೇವಿಯ ಸಿಡಿ ಉತ್ಸವ ಶುಕ್ರವಾರ ಸಂಜೆ ನಡೆಯಿತು. ಭಕ್ತರೊಬ್ಬರನ್ನು ಸಿಡಿ ಕಂಬದಲ್ಲಿ ಕಟ್ಟಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT