ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ | ಕುಡಿಯುವ ನೀರಿಗಾಗಿ ಜನರ ಪರದಾಟ

ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಭ್ಯತ್ ಮಂಗಲ ಗ್ರಾಮದ ಲೈನ್‌ಮನೆಗಳಲ್ಲಿ ಸಮಸ್ಯೆ
Published 8 ಮೇ 2024, 6:48 IST
Last Updated 8 ಮೇ 2024, 6:48 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್ ಮಂಗಲ ಗ್ರಾಮದಲ್ಲಿ 6 ತಿಂಗಳಿನಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದ್ದು,  ಬೇಸಿಗೆಯ ತೀವ್ರತೆ ಸಮಸ್ಯೆಯನ್ನು ಬಿಗಡಾಯಿಸಿದೆ.

ಗ್ರಾಮದ ಕಾಫಿ ತೋಟವೊಂದರಲ್ಲಿ  40 ವರ್ಷಗಳಿಂದ ನೆಲೆಸಿರುವ 6 ಕಾರ್ಮಿಕ ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಮಸ್ಯೆ ಬಿಗಡಾಯಿಸುತ್ತಿರುವಂತೆಯೇ ಇಲ್ಲಿಂದ ಒಂದೊಂದೇ ಕುಟುಂಬ ಬೇರೆ ಸ್ಥಳಕ್ಕೆ ತೆರಳಿದ್ದು, ಈಗ ಪರಿಶಿಷ್ಟ ಪಂಗಡದ 2 ಕುಟುಂಬಗಳು ಕುಡಿಯುವ ನೀರನ್ನು ಅರ್ಧ ಕಿ.ಮೀ. ದೂರದ ಬಾವಿಯಿಂದ ಹೊತ್ತು ತರಬೇಕಿದೆ.

ಕಾಡಾನೆಗಳ ಹಾವಳಿ ಇರುವ ಇಲ್ಲಿ ಸಂಜೆ ಕೆಲಸ ಮುಗಿಸಿಕೊಂಡು ಬರುವ ಕಾರ್ಮಿಕರು ನೀರಿಗಾಗಿ ಇಡೀ ಕುಟುಂಬ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ‌

ಈ ಬಗ್ಗೆ ಸ್ಥಳೀಯ ನಿವಾಸಿ ರವಿ ಮಾತನಾಡಿ, ‘ಗ್ರಾಮಕ್ಕೆ ಕಳೆದ 7 ತಿಂಗಳ ಹಿಂದೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ರಸ್ತೆ ಅಗೆಯಲಾಗಿತ್ತು. ಆಗ ನೀರು ಸರಬರಾಜು ಮಾಡುವ ಪೈಪ್ ತುಂಡಾಗಿ ನೀರು ಸರಬರಾಜು ಸ್ಥಗಿತಗೊಂಡಿತ್ತು. ಸರಿಪಡಿಸುವಂತೆ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರೂ  ಪ್ರಯೋಜನವಾಗಿಲ್ಲ. ಕಳೆದ ತಿಂಗಳು ನೀರು ಸರಬರಾಜು ಮಾಡುವವರು ಬಂದು ಪೈಪ್ ದುರಸ್ತಿಗೊಳಿಸಿ ತೆರಳಿದ್ದರು. ಆದರೂ ನೀರು ಬರುತ್ತಿಲ್ಲ. ಮನೆಯ ಬಳಿ ವಾಲ್ವ್ ಅಳವಡಿಸಬೇಕೆಂದು ಸಮಜಾಯಿಶಿ ನೀಡಿ ಹೋಗಿದ್ದಾರೆ. ಇಂದಿಗೂ ಬಂದು ಸರಿಪಡಿಸಿಲ್ಲ’ ಎಂದು ದೂರಿದರು.

ನೀರಿಗಾಗಿ ಒಂದು ಕಿ.ಮೀ. ದೂರದ ಖಾಸಗಿಯವರ ನೀರಿನ ಬಾವಿಯಿಂದ ಹೊತ್ತು ತರಬೇಕಾಗಿದೆ. ಮಕ್ಕಳು ಸೇರಿದಂತೆ ಎಲ್ಲರೂ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಅವರು ದೂರಿಕೊಂಡರು.

ಇಲ್ಲಿನ ಸಮಸ್ಯೆ ಬಗ್ಗೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಸೋಮವಾರಪೇಟೆ ತಾಲ್ಲೂಕಿನ ಅಭ್ಯತ್ ಮಂಗಲ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ನಲ್ಲಿಯಲ್ಲಿ ನೀರು ಬಾರದೆ 6 ತಿಂಗಳಾಗಿರುವುದು.
ಸೋಮವಾರಪೇಟೆ ತಾಲ್ಲೂಕಿನ ಅಭ್ಯತ್ ಮಂಗಲ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ನಲ್ಲಿಯಲ್ಲಿ ನೀರು ಬಾರದೆ 6 ತಿಂಗಳಾಗಿರುವುದು.
ಸೋಮವಾರಪೇಟೆ ತಾಲ್ಲೂಕಿನ ಅಭ್ಯತ್ ಮಂಗಲ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಸುಮಾರು ಖಾಸಗಿಯವರಿಗೆ ಸೇರಿದ ನೀರಿನ ಭಾವಿಯಿಂದ ಒಂದು ಕಿಲೋಮೀಟರ್ ದೂರದಿಂದ ಹೊತ್ತು ತರುತ್ತಿರುವುದು
ಸೋಮವಾರಪೇಟೆ ತಾಲ್ಲೂಕಿನ ಅಭ್ಯತ್ ಮಂಗಲ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಸುಮಾರು ಖಾಸಗಿಯವರಿಗೆ ಸೇರಿದ ನೀರಿನ ಭಾವಿಯಿಂದ ಒಂದು ಕಿಲೋಮೀಟರ್ ದೂರದಿಂದ ಹೊತ್ತು ತರುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT