ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಎಸ್ಇ ಫಲಿತಾಂಶ: ಎಸ್‌ಎಫ್‌ಎಸ್‌ ಉತ್ತಮ ಸಾಧನೆ

Published 8 ಮೇ 2024, 16:31 IST
Last Updated 8 ಮೇ 2024, 16:31 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಎಸ್‌ಎಫ್‌ಎಸ್‌ ಶಾಲೆಯ ವಿದ್ಯಾರ್ಥಿಗಳು ಐಸಿಎಸ್‌ಸಿ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದೆ.

ಇತ್ತೀಚೆಗೆ 2023-24 ನೇ ಸಾಲಿನ ಐಸಿಎಸ್‌ಸಿ ಮಂಡಳಿಯು ಫಲಿತಾಂಶ ಪ್ರಕಟಿಸಿದ್ದು, ಪರೀಕ್ಷೆ ಎದುರಿಸಿದ ಶಾಲೆಯ ಎಲ್ಲ 68 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಶಾಲೆ ಸತತ 11ನೇ ವರ್ಷ ಶೇ. 100ರಷ್ಟು ಫಲಿತಾಂಶ ಪಡೆದುಕೊಳ್ಳುತ್ತಿರುವುದು ವಿಶೇಷ.

56 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 12 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಗೌತಮಿ ಯತ್ನಟ್ಟಿ (ಶೇ. 98) ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾಳೆ. ದಿಶಾ ತಂಬ್ರಳ್ಳಿ (ಶೇ. 97.8) ಶಾಲೆಗೆ ದ್ವಿತೀಯ ಮತ್ತು ಆಶಿಶ್ ಜಿ ಚಂಡಕ್ (ಶೇ. 96.8) ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. 34 ವಿದ್ಯಾರ್ಥಿಗಳು ಶೇ. 90ಕ್ಕಿಂತಲೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ಫಾದರ್‌ ಜಬಮಲೈ ತಿಳಿಸಿದ್ದಾರೆ.

ದಿಶಾ ತಂಬ್ರಳ್ಳಿ
ದಿಶಾ ತಂಬ್ರಳ್ಳಿ
ಆಶಿಶ್ ಚಂಡಕ್
ಆಶಿಶ್ ಚಂಡಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT