ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಇಬ್ಬರ ಮತಕ್ಕಾಗಿ 107 ಕಿ.ಮೀ ತೆರಳಿದ ಚುನಾವಣಾ ಅಧಿಕಾರಿಗಳು

Published 12 ಏಪ್ರಿಲ್ 2024, 10:31 IST
Last Updated 12 ಏಪ್ರಿಲ್ 2024, 10:31 IST
ಅಕ್ಷರ ಗಾತ್ರ

ಗಡ್ಚಿರೋಲಿ (ಮಹಾರಾಷ್ಟ್ರ): ಮನೆಯಿಂದ ಮತದಾನ ಮಾಡಲಿರುವ ಇಬ್ಬರು ವೃದ್ಧರಿಗಾಗಿ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಗ್ರಾಮವೊಂದಕ್ಕೆ ಚುನಾವಣಾ ಅಧಿಕಾರಿಗಳು 107 ಕಿ.ಮೀ ದೂರ ತೆರಳಿದ್ದಾರೆ.

ಮತದಾನ ಮಾಡಲಿರುವ ವೃದ್ಧರು ಗಡ್ಚಿರೋಲಿ– ಚಿಮುರ್‌ ಲೋಕಸಭಾ ಕ್ಷೇತ್ರದ 100 ಮತ್ತು 86 ವರ್ಷದವರು. ಈ ಕ್ಷೇತ್ರದಲ್ಲಿ ಏ. 19ರಂದು ಮತದಾನ ನಡೆಯಲಿದೆ. 

ಈ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಮತ್ತು 40 ಪ್ರತಿಶತದಷ್ಟು ಅಂಗವಿಕಲರಾಗಿರುವವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಇದರಡಿಯಲ್ಲಿ ಚುನಾವಣಾ ಅಧಿಕಾರಿಗಳು 107 ಕಿ.ಮೀ ಸಾಗಿ 100 ವರ್ಷದ ಕ್ಷಿತಯ್ಯ ಮಡರ್ಬೋಯಿನಾ ಮತ್ತು 86 ವರ್ಷದ ಕ್ಷಿತಯ್ಯ ಕೊಮೆರಾ ಎನ್ನುವವರಿಂದ ಮತ ಚಲಾವಣೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ ಎಂದು ಗಡ್ಚಿರೋಲಿ ಜಿಲ್ಲಾ ಮಾಹಿತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT