ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ರಾಜ್‌ ಠಾಕ್ರೆ ಬೆಂಬಲ: ಎಂಎನ್‌ಎಸ್‌ ಪದಾಧಿಕಾರಿಗಳ ರಾಜೀನಾಮೆ

Published 11 ಏಪ್ರಿಲ್ 2024, 15:44 IST
Last Updated 11 ಏಪ್ರಿಲ್ 2024, 15:44 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನಾದ (ಎಂಎನ್ಎಸ್‌) ಹಲವು ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.‌

ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರದಲ್ಲಿನ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ಮಂಗಳವಾರ ಬೆಂಬಲ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಎಂಎನ್‌ಎಸ್‌ ಪ್ರಧಾನ ಕಾರ್ಯದರ್ಶಿ ಕೀರ್ತಿಕುಮಾರ್‌ ಶಿಂದೆ ಅವರೂ ಪಕ್ಷ ತೊರೆದಿದ್ದಾರೆ.

ಫೇಸ್‌ಬುಕ್‌ನಲ್ಲಿ ಈ ಕುರಿತು ಬುಧವಾರ ವಿವರಣೆ ನೀಡಿರುವ ಕೀರ್ತಿಕುಮಾರ್‌ ಅವರು, ‘2019ರಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಧೋರಣೆಗಳ ವಿರುದ್ಧ ನಿಲುವು ಹೊಂದಿದ್ದ ರಾಜ್‌ ಠಾಕ್ರೆ ಅವರು, ಇಂದಿನ ನಿರ್ಣಾಯಕ ಪರಿಸ್ಥಿತಿಯಲ್ಲಿ ಅವರು ತಮ್ಮ ರಾಜಕೀಯ ಪಾತ್ರದ ನಿಲುವು ಬದಲಾಯಿಸಿದ್ದಾರೆ. ರಾಜ್‌ ಅವರು ಎಷ್ಟು ಸರಿ ಅಥವಾ ಎಷ್ಟು ತಪ್ಪು ಎಂಬುದರ ಬಗ್ಗೆ ರಾಜಕೀಯ ವಿಶ್ಲೇಷಕರು ತಿಳಿಸುತ್ತಾರೆ’ ಎಂದಿದ್ದಾರೆ.

‘ಇಂದಿನ ದಿನಗಳಲ್ಲಿ ರಾಜಕೀಯ ನಾಯಕರು ಹೇಗೆ ಬೇಕೋ ಹಾಗೆ ಮತ್ತು ಯಾವಾಗ ಬೇಕೋ ಆವಾಗ ತಮ್ಮ ರಾಜಕೀಯ ಪಾತ್ರವನ್ನು ಬದಲಾಯಿಸುತ್ತಿದ್ದಾರೆ. ಆದರೆ, ಆ ನಾಯಕರ ಸಿದ್ಧಾಂತಗಳನ್ನು ನಂಬಿ ಹೋರಾಟ ಮಾಡುವವರು (ಎಂಎನ್‌ಎಸ್‌ ಪಕ್ಷದ ಕಾರ್ಯಕರ್ತರು) ನಲುಗಿಹೋಗುತ್ತಿದ್ದಾರೆ. ಮುಂದೆ ಅವರ ಪರಿಸ್ಥಿತಿ ಏನು?’ ಎಂದು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಅವರು ಕೇಳಿದ್ದಾರೆ.

ಡೋಂಬಿವಲಿಯ ಎಂಎನ್‌ಎಸ್‌ ವಿದ್ಯಾರ್ಥಿ ಕೋಶದ ಮಿಹಿರ್‌ ದಾವ್ಟೆ ಮತ್ತು ಪದಾಧಿಕಾರಿಗಳು ರಾಜ್‌ ಅವರ ಅಸಮಂಜಸ ನಿರ್ಧಾರಗಳನ್ನು ವಿರೋಧಿಸಿ ಪಕ್ಷ ತ್ಯಜಿಸಿದ್ದಾರೆ.

‘ರಾಜ್‌ ಸಾಹೇಬ್‌ ಅವರ ನಿರ್ಧಾರಗಳನ್ನು ಸಮರ್ಥವಾಗಿ ನಿಭಾಯಿಸಲು ನಮ್ಮಿಂದಾಗದು. ಅವರ ನಡೆ ಕುರಿತು ಪಕ್ಷದ ಕಾರ್ಯಕರ್ತರಲ್ಲಿ ಈಗಾಗಲೇ ಅಸಮಾಧಾನ ಎದ್ದಿದೆ. ಆ‌ದ್ದರಿಂದ ನಮ್ಮ ದಾರಿಯನ್ನು ಬದಲಾಯಿಸುವುದೇ ಒಳ್ಳೆಯದು’ ಎಂದು ಮಿಹಿರ್‌ ದಾವ್ಟೆ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT