ದುರ್ಗಾಪುರ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೆಲಿಕಾಪ್ಟರ್ ಹತ್ತುವ ವೇಳೆ ಕಾಲು ಜಾರಿ ಬಿದ್ದಿರುವ ಘಟನೆ ವರ್ಧಮಾನ್ನ ದುರ್ಗಾಪುರದಲ್ಲಿ ನಡೆದಿದೆ. ಈ ವಿಡಿಯೊವನ್ನು ಎಎನ್ಐ ಸುದ್ದಿಸಂಸ್ಥೆ ಎಕ್ಸ್ನಲ್ಲಿ ಹಂಚಿಕೊಂಡಿದೆ.
#WATCH | West Bengal CM Mamata Banerjee slipped and fell while taking a seat after boarding her helicopter in Durgapur, Paschim Bardhaman today. She reportedly suffered a minor injury and was helped by her security personnel. She continued with her onward travel to Asansol. pic.twitter.com/UCt3dBmpTQ
ದುರ್ಗಾಪುರದಲ್ಲಿ ಹೆಲಿಕಾಪ್ಟರ್ ಹತ್ತಿ ಸೀಟ್ನಲ್ಲಿ ಕುಳಿತುಕೊಳ್ಳಲು ಹೋದಾಗ ಅವರು ಕಾಲು ಜಾರಿ ಬಿದ್ದಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ತಕ್ಷಣ ರಕ್ಷಣಾ ಸಿಬ್ಬಂದಿ ಅವರ ಬಳಿ ಧಾವಿಸಿದ್ದಾರೆ. ಬಳಿಕ ಸಿಎಂ ಮಮತಾ ಬ್ಯಾನರ್ಜಿ ಅಸನ್ಸೋಲ್ಗೆ ಪ್ರಯಾಣ ಬೆಳೆಸಿದ್ದಾರೆ.