ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result 2024 | ಶೇ 73.40 ಫಲಿತಾಂಶ; ಉಡುಪಿ ಪ್ರಥಮ, ಯಾದಗಿರಿಗೆ ಕೊನೇ ಸ್ಥಾನ

Published 9 ಮೇ 2024, 6:00 IST
Last Updated 9 ಮೇ 2024, 6:00 IST
ಅಕ್ಷರ ಗಾತ್ರ

ಬೆಂಗಳೂರು: ಮಾರ್ಚ್ 25 ರಿಂದ ಏಪ್ರಿಲ್ 26ರವರೆಗೂ ನಡೆದ 2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇಂದು ಪ್ರಕಟಿಸಿದೆ.

ಪರೀಕ್ಷೆ ಬರೆದ ಒಟ್ಟು 4,36,138 ಬಾಲಕರಲ್ಲಿ 2,87,416 (ಶೇ 65.90) ಮಂದಿ ಉತ್ತೀರ್ಣರಾಗಿದ್ದಾರೆ. 4,23,829 ವಿದ್ಯಾರ್ಥಿನಿಯರ ಪೈಕಿ 3,41,778 (ಶೇ 81.11) ಮಂದಿ ತೇರ್ಗಡೆಯಾಗಿದ್ದಾರೆ.

ಪರೀಕ್ಷೆ ಬರೆದಿದ್ದ ನಗರ ಪ್ರದೇಶದ 4,93,900 ವಿದ್ಯಾರ್ಥಿಗಳಲ್ಲಿ 3,59,703 (ಶೇ 72.83) ಮಂದಿ ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದ ಒಟ್ಟು 3,66,067 ವಿದ್ಯಾರ್ಥಿಗಳಲ್ಲಿ 2,71,501 (ಶೇ 74.17) ಮಂದಿ ಉತ್ತೀರ್ಣರಾಗಿದ್ದಾರೆ.

625ಕ್ಕೆ 625

ಬಾಗಲಕೋಟೆ ಜಿಲ್ಲೆಯ ಮುರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪಾ ಕನ್ನೂರ ಅವರು 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ‌ ಸ್ಥಾನ ಪಡೆದಿದ್ದಾರೆ. 7 ವಿದ್ಯಾರ್ಥಿಗಳು 624 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ.

ಒಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿಗಳು: 8,59,967 ಲಕ್ಷ ವಿದ್ಯಾರ್ಥಿಗಳು

ತೇರ್ಗಡೆಯಾದ ವಿದ್ಯಾರ್ಥಿಗಳು: 6,31,204

ಲಿಂಗವಾರು ಒಟ್ಟಾರೆ ಫಲಿತಾಂಶ

ಬಾಲಕರು: 2,87,416 (ಶೇ 65.90)

ಬಾಲಕಿಯರು: 3,43,788 (ಶೇ 81.11)

ಪ್ರಥಮ ಸ್ಥಾನ

1) ಉಡುಪಿ ಪ್ರಥಮ ಸ್ಥಾನ (ಶೇ 94)

2) ದಕ್ಷಿಣ ಕನ್ನಡ (ಶೇ 92.12)

3) ಶಿವಮೊಗ್ಗ (ಶೇ 88.67)

ಕೊನೇ ಸ್ಥಾನ

‌1) ಯಾದಗಿರಿ (ಶೇ 50.59)

ಫಲಿತಾಂಶ ವೀಕ್ಷಣೆ ಹೇಗೆ?

ಫಲಿತಾಂಶವನ್ನು ಮಂಡಳಿಯ ಜಾಲತಾಣ https://karresults.nic.in ನಲ್ಲಿ ವೀಕ್ಷಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹೇಳಿದೆ.

ಇದೇ ಮೊದಲ ಬಾರಿ ಮೂರು ಪರೀಕ್ಷೆಗಳನ್ನು ಪರಿಚಯಿಸಲಾಗಿದ್ದು, ಮೇ ಮೂರನೇ ವಾರದಲ್ಲೇ ಎರಡನೇ ಪರೀಕ್ಷೆ ಆರಂಭವಾಗಲಿದೆ. ಉತ್ತೀರ್ಣರಾದ ವಿದ್ಯಾರ್ಥಿಗಳು ಸಹ ಉಳಿದ ಎರಡು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಯಾವ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬರುತ್ತವೆಯೋ ಅದರ ಅಂಕಪಟ್ಟಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT