ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಿಜೆಪಿಯ ಮೀಸಲಾತಿ ವಿಡಿಯೊ ತೆಗೆದು ಹಾಕಿದ ‘ಎಕ್ಸ್‌’

Published 8 ಮೇ 2024, 16:04 IST
Last Updated 8 ಮೇ 2024, 16:04 IST
ಅಕ್ಷರ ಗಾತ್ರ

ನವದೆಹಲಿ: ಮುಸ್ಲಿಂ ಮೀಸಲಾತಿ ಸಂಬಂಧ ಕರ್ನಾಟಕ ಬಿಜೆಪಿ ಘಟಕ ಹಂಚಿಕೊಂಡಿದ್ದ ಅನಿಮೇಟೆಡ್ ವಿಡಿಯೊವನ್ನು ‘ಎಕ್ಸ್’ ತೆಗೆದುಹಾಕಿದೆ.

ವಿಡಿಯೊವನ್ನು ತೆಗೆದುಹಾಕಿ ಎಂದು ಚುನಾವಣಾ ಆಯೋಗವು ಮಂಗಳವಾರವೇ ಎಕ್ಸ್‌ಗೆ ಸೂಚನೆ ನೀಡಿತ್ತು.

ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಟಿ ನಿಯಮ 2021ರ ಪ್ರಕಾರ ಆಕ್ಷೇಪಾರ್ಹ ಪೋಸ್ಟ್ ಅನ್ನು ತೆಗೆದುಹಾಕಲು ಮೇ 5 ರಂದು 'ಎಕ್ಸ್' ಗೆ ಪತ್ರವನ್ನು ಬರೆದಿತ್ತು. ಅದಾಗ್ಯೂ ಸಾಮಾಜಿಕ ಮಾಧ್ಯಮ ವೇದಿಕೆಯಿಂದ ಪೋಸ್ಟ್ ಅನ್ನು ತೆಗದುಹಾಕಿರಲಿಲ್ಲ. ಆ ಕಾರಣ ವಿಡಿಯೊವನ್ನು ತಕ್ಷಣ ತೆಗೆದುಹಾಕುವಂತೆ ಎಕ್ಸ್‌ಗೆ ಮಂಗಳವಾರ ಮತ್ತೊಮ್ಮೆ ಸೂಚನೆ ನೀಡಿತ್ತು.

ಏನಿದು ವಿವಾದ?

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳನ್ನು ಮೊಟ್ಟೆಗಳೆಂದು ಬಿಂಬಿಸಿ, ಆ ಮೊಟ್ಟೆಗಳಿರುವ ಬುಟ್ಟಿಗೆ ಮುಸ್ಲಿಂ ಮೊಟ್ಟೆಯನ್ನು ರಾಹುಲ್‌ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಂದಿರಿಸಿದ್ದಾರೆ. ಮರಿಯಾದ ಬಳಿಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮರಿಗಳಿಗೆ ಸೇರಬೇಕಾದ ಅನುದಾನವನ್ನು ಮುಸ್ಲಿಂ ಮರಿಗಳಿಗೆ ಮಾತ್ರ ನೀಡುತ್ತಾರೆ...’ ಎಂಬ ಹೇಳಿಕೆಯಳ್ಳ ವಿಡಿಯೊ ತುಣುಕನ್ನು ಬಿಜೆಪಿಯ ಕರ್ನಾಟಕ ರಾಜ್ಯ ಘಟಕದ ‘ಎಕ್ಸ್‌’ ಖಾತೆಯಲ್ಲಿ ಶನಿವಾರ ಹಂಚಿಕೊಂಡಿತ್ತು.

ಈ ಸಂಬಂಧ ಕಾಂಗ್ರೆಸ್ ದೂರು ನೀಡಿದ್ದು, ‌ಬಿಜೆಪಿ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಅಮಿತ್‌ ಮಾಳವೀಯ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ವಿಡಿಯೊ ಮೂಲಕ ಬಿಜೆಪಿ ಮುಸ್ಲಿಮರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಡುವೆ ದ್ವೇಷ ಹಾಗೂ ವೈರತ್ವ ಹರಡುತ್ತಿದೆ ಎಂದು ಕಾಂಗ್ರೆಸ್‌ ದೂರು ನೀಡಿತ್ತು.

ವಿಡಿಯೊದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಂಗ್ಯ ಚಿತ್ರಗಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT