ಬನಸ್ಕಾಂತಾ (ಗುಜರಾತ್): ‘ಕಾಂಗ್ರೆಸ್ ಪಕ್ಷವು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಬಯಸಿದ್ದು, ಇದು ಸುಳ್ಳಾದರೆ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟಗಳ ನಾಯಕರು ಲಿಖಿತ ರೂಪದಲ್ಲಿ ಹೇಳಿಕೆ ನೀಡಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಸವಾಲೆಸೆದಿದ್ದಾರೆ.

ಬನಸ್ಕಾಂತಾ ಜಿಲ್ಲೆಯ ದೀಸಾ ಪಟ್ಟಣದಲ್ಲಿ ಬುಧವಾರ ನಡೆದ ಬಿಜೆಪಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿ ಇರುವವರೆಗೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ನೀಡಲಾಗುತ್ತಿರುವ ಮೀಸಲಾತಿ ಸುರಕ್ಷಿತವಾಗಿರಲಿದೆ’ ಎಂದು ಭರವಸೆ ನೀಡಿದ್ದಾರೆ.
.ಮೀಸಲಾತಿ ಮಿತಿ ಹೆಚ್ಚಳ ವಿಚಾರದಲ್ಲಿ ಮೋದಿ ನಿಲುವೇನು?: ಕಾಂಗ್ರೆಸ್.ಪ್ರಜ್ವಲ್ ಪ್ರಕರಣ | ಅಪರಾಧಿಗಳಿಗೆ ರಕ್ಷಣೆ ನೀಡುವುದು ಮೋದಿ ಗ್ಯಾರಂಟಿಯೇ: ರಾಹುಲ್.
‘ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂಬುದನ್ನು ‘ರಾಜಕುಮಾರ’ (ರಾಹುಲ್ ಗಾಂಧಿ) ಹಾಗೂ ಅವರ ಪಕ್ಷದ ಮುಖಂಡರು ಘೋಷಣೆ ಮಾಡಬೇಕು. ಸಂವಿಧಾನದೊಂದಿಗೆ ಆಟವಾಡುವುದಿಲ್ಲ ಮತ್ತು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.

‘ನಾನು ಎಲ್ಲಿಯವರೆಗೆ ಅಧಿಕಾರದಲ್ಲಿರುತ್ತೇನೋ ಅಲ್ಲಿಯವರೆಗೂ ಮೀಸಲಾತಿಯಲ್ಲಿ ಆಟವಾಡಲು ಯಾರಿಗೂ ಬಿಡುವುದಿಲ್ಲ. ಕಾಂಗ್ರೆಸ್ ಮತ್ತು ಅವರ ಜನರು ಕೇಳಿಸಿಕೊಳ್ಳಬೇಕು, ‘ಇದು ಮೋದಿ’. ಸಂವಿಧಾನದ ಹೆಸರಿನಲ್ಲಿ ಮೀಸಲಾತಿಯಲ್ಲಿ ಕೈ ಆಡಿಸಲು ಎಂದಿಗೂ ಬಿಡುವುದಿಲ್ಲ’ ಎಂದು ಪ್ರಧಾನಿ ಗುಡುಗಿದ್ದಾರೆ.

ನರೇಂದ್ರ ಮೋದಿ ಅವರ ತವರು ನೆಲವಾದ ಗುಜರಾತ್‌ನಲ್ಲಿ ಲೋಕಸಭಾ ಚುನಾವಣೆಯ 3ನೇ ಹಂತದ ಮತದಾನ ಮೇ 7ರಂದು ನಡೆಯಲಿದೆ.
.LS Polls | ಮೀಸಲಾತಿ ರದ್ದು ಮಾಡುವುದಿಲ್ಲ; ಕಾಂಗ್ರೆಸ್ ಅನ್ನು ಬಿಡೆವು: ಅಮಿತ್ ಶಾ.LS Polls | ಗುರಿ ಇಲ್ಲದಂತಾಗಿದ್ದ ಕಾಂಗ್ರೆಸ್, ಈಗ ನಾಯಕನಿಲ್ಲದಂತಾಗಿದೆ: ಯೋಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.