ದಿನ ಭವಿಷ್ಯ: 5 ಜನವರಿ 2026 ಸೋಮವಾರ– ಜೀವನ ಶೈಲಿಯಲ್ಲಿ ಬದಲಾವಣೆಯ ಗಾಳಿ
Published 4 ಜನವರಿ 2026, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯಾರ ನೆರವೂ ಇಲ್ಲದೆ ಎಲ್ಲಾ ಕಾರ್ಯಗಳನ್ನು ಸ್ವಯಂ ನೀವೇ ನಿರ್ವಹಿಸುವಿರಿ. ತಾಯಿಯವರ ಆರೋಗ್ಯ ಸುಧಾರಿಸಿ ಆಸ್ಪತ್ರೆಯಿಂದ ಮನೆಗೆ ಬರುವಂತಾಗಲಿದೆ.
ವೃಷಭ
ವಿದ್ಯಾರ್ಥಿಗಳು ಹೆಚ್ಚಿನ ಶ್ರಮದಿಂದ ಉತ್ತಮ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ. ವೃತ್ತಿಯಲ್ಲಿ ಸಾಕಷ್ಟು ಸುಸಂದರ್ಭಗಳು ಎದುರಾಗಲಿವೆ. ಅಧಿಕಾರಿಗಳ ವಿಶ್ವಾಸಗಳಿಸಲು ಪ್ರಯತ್ನಿಸಿ.
ಮಿಥುನ
ಹಿರಿಯರು ಮೊದಲಿನಿಂದ ಕುಟುಂಬದಲ್ಲಿ ನಡೆಸಿಕೊಂಡು ಬಂದ ಧಾರ್ಮಿಕ ವಿಧಿವಿಧಾನವನ್ನು ಆಚರಿಸುವ ಬಗ್ಗೆ ತೀರ್ಮಾನಿಸಿ. ಜೀವನದ ಶೈಲಿಯಲ್ಲಿ ಬದಲಾವಣೆಯ ಗಾಳಿ ಬೀಸಲು ಆರಂಭಿಸುತ್ತದೆ.
ಕರ್ಕಾಟಕ
ವಾಹನ ಮಾರಾಟಗಾರರಿಗೆ ಹಾಗೂ ರಿಪೇರಿ ಮಾಡುವವರಿಗೆ ಉದ್ಯೋಗದಲ್ಲಿ ಬಿಡುವಿಲ್ಲದ ಕಾರ್ಯ. ಆಯುರ್ವೇದದ ಪ್ರಭಾವದಿಂದ ಆರೋಗ್ಯದಲ್ಲಿ ಸುಧಾರಣೆ. ಕೆಲಸಗಳಲ್ಲಿ ಆಸಕ್ತಿ ವೃದ್ಧಿ.
ಸಿಂಹ
ವಾಣಿಜ್ಯೋದ್ಯಮ ಮಂದಿಗೆ ಬಂಡವಾಳ ತೊಡಗಿಸಲು ಉತ್ತಮ ದಿನ. ಕೃಷಿ ಕಾರ್ಯವು ವಿಳಂಬವಾಗದಂತೆ ಕೃಷಿಕರು ಗಮನವಹಿಸಿ. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ತೋರದಿರಿ. ಮುಖ್ಯ ಕೆಲಸಗಳಿಗೆ ಆಪ್ತರ ಸಲಹೆ ಅಗತ್ಯ.
ಕನ್ಯಾ
ಹಾದಿಯಲ್ಲಿ ಹೋಗುವ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಳ್ಳುವಂಥ ಘಟನೆಯೊಂದು ನಡೆಯುವುದು. ಕ್ರಿಯಾತ್ಮಕ ಬರವಣಿಗೆಯಿಂದ ಏಳಿಗೆ ದೊರಕುವುದು. ಅಪರೂಪದ ಸಮಾರಂಭಕ್ಕೆ ಆಹ್ವಾನ ಬರುವುದು.
ತುಲಾ
ದೈನಂದಿನ ಖರ್ಚು-ವೆಚ್ಚಗಳಿಗೆ ಹಾಗೂ ಜೀವನೋಪಾಯಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವಿರಿ. ಯೋಜನೆಗಳು ಸರಿಯಾದ ಹಾದಿಯಲ್ಲಿ ಸಾಗುತ್ತಿರುವುದರಿಂದ ಸಮಾಧಾನ ಇರಲಿದೆ.
ವೃಶ್ಚಿಕ
ಸತ್ಕಾರ ಸಮಾರಂಭಗಳಲ್ಲಿ ಭಾಗವಹಿಸುವಿರಿ ಅಥವಾ ಬಂಧುಮಿತ್ರರು ಮನೆಗೆ ಬರಲಿದ್ದಾರೆ. ಗೃಹ ನಿರ್ಮಾಣ ಕಾರ್ಯಕ್ಕೆ ಆರ್ಥಿಕತೆಯ ಅಭಾವ ಸ್ಥಿತಿ ಎದುರಾಗಬಹುದು. ಪರಿಣಾಮವಾಗಿ ಮನಸ್ಸಿನಲ್ಲಿ ಹೆದರಿಕೆ ಮೂಡಲಿದೆ.
ಧನು
ಪದವೀಧರರಿಗೆ ಉದ್ಯೋಗದ ಅನ್ವೇಷಣೆಯಲ್ಲಿ ಹೊಸ ರೀತಿಯ ಬೆಳವಣಿಗೆ ಕಂಡುಬರಲಿದೆ. ರಫ್ತು ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದುವಿರಿ. ಬೇರೆ ಯಾರಿಗೂ ಯೋಜನೆಯ ಸುಳಿವು ಸಿಗದಂತೆ ಗೌಪ್ಯತೆ ಕಾಪಾಡಿ.
ಮಕರ
ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದು ಮಾರ್ಗದರ್ಶಿ ಮಾತಿನಂತೆ ಧಾರ್ಮಿಕ ಚುಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಕೃಷಿ ಹಾಗೂ ಹೈನು ವ್ಯಾಪಾರಗಳಿಂದ ಅಧಿಕ ಲಾಭ .
ಕುಂಭ
ಹಲವು ಅವಕಾಶಗಳಿಂದ ಗೊಂದಲಕ್ಕೆ ಈಡಾಗುವಿರಿ.ವ್ಯವಹಾರ ಚಾಣಾಕ್ಷತನಕ್ಕೆ, ಕ್ರಿಯಾಶೀಲತೆಗೆ ಸರಿಯಾಗಿ ಲಾಭವಾಗುವುದು. ಚಿನ್ನ ಮಾರಾಟಗಾರರಿಗೆ ಶುಭ ದಿನ.
ಮೀನ
ವ್ಯಾಪಾರ ವಿಷಯಗಳ ಸಂಬಂಧದಲ್ಲಿ ಕ್ಲಿಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಂತರಂಗದ ಭಾವನೆಗಳಿಗೆ ಆದ್ಯತೆ ನೀಡಿ. ದೇಹಕ್ಕೆ ಅತಿ ಶ್ರಮವಾದರೂ ಇಷ್ಟ ಪ್ರಾಪ್ತಿಗಾಗಿ ಕಾರ್ಯ ಸಾಧಿಸಿದ ಸಂತೋಷ ಇರುವುದು.