ಬೆನೋನಿ (ದಕ್ಷಿಣ ಆಫ್ರಿಕಾ): ನಾಯಕ ವೈಭವ್ ಸೂರ್ಯವಂಶಿ ಅವರ ಮಿಂಚಿನ ಅರ್ಧಶತಕದ (68, 24ಎಸೆತಮ 4x1, 6x10) ನೆರವಿನಿಂದ ಭಾರತ ತಂಡ ಸೋಮವಾರ ನಡೆದ 19 ವರ್ಷದೊಳಗಿವರ ಏಕದಿನ ಕ್ರಿಕೆಟ್ ಸರಣಿಯ ಎರಡನೆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಡಿಎಲ್ಎಸ್ ಆಧಾರದಲ್ಲಿ 8 ವಿಕೆಟ್ಗಳಿಂದ ಸೋಲಿಸಿತು. ಇನ್ನೊಂದು ಪಂದ್ಯ ಉಳಿದಿರುವಂತೆ ಭಾರತ ಸರಣಿಯಲ್ಲಿ 2–0 ಗೆಲುವಿನ ಮುನ್ನಡೆ ಪಡೆಯಿತು.

ವಿಲ್ಲೊಮೂರ್ ಪಾರ್ಕ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಯುವ ತಂಡ 49.3 ಓವರುಗಳಲ್ಲಿ 245 ರನ್ಗಳಿಗೆ ಆಲೌಟಾಯಿತು. ಜೇಸನ್ ರೌಲ್ಸ್ (114, 113ಎ, 4x7, 6x3) ಶತಕ ಬಾರಿಸಿದರು. ಮಳೆಯ ಕಾರಣ ಭಾರತ ಯುವ ತಂಡದ ಗುರಿಯನ್ನು 27 ಓವರುಗಳಲ್ಲಿ 174 ರನ್ಗಳಿಗೆ ಪರಿಷ್ಕರಿಸಲಾಯಿತು. ಭಾರತ ತಂಡ 23.3 ಓವರುಗಳಲ್ಲಿ 2 ವಿಕೆಟ್ಗೆ 176 ರನ್ ಹೊಡೆದು ಗೆಲುವು ಆಚರಿಸಿತು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ ಯುವ ತಂಡ: 49.3 ಓವರುಗಳಲ್ಲಿ 245 (ಜೇಸನ್ ರೌಲ್ಸ್ 114, ಡೇನಿಯಲ್ ಬಾಸ್ಮನ್ 31; ಕಿಶನ್ ಸಿಂಗ್ 46ಕ್ಕೆ4, ಆರ್.ಎಸ್.ಅಂಬರೀಶ್ 47ಕ್ಕೆ2): ಭಾರತ ಯುವ ತಂಡ: 23.3 ಓವರುಗಳಲ್ಲಿ 2ಕ್ಕೆ 176 (ವೈಭವ್ ಸೂರ್ಯವಂಶಿ 68, ವೇದಾಂತ್ ತ್ರಿವೇದಿ ಔಟಾಗದೇ 31, ಅಭಿಜ್ಞಾನ್ ಕುಂದು ಔಟಾಗದೇ 48; ಮೈಕೆಲ್ ಕ್ರುಯಿಸ್ಕಾಂಪ್ 23ಕ್ಕೆ2).
.ವೈಭವ್ ಸೂರ್ಯವಂಶಿ ಅಲ್ಲ: ಶರವೇಗದ ಶತಕ ಸಿಡಿಸಿ ದಾಖಲೆ ಬರೆದ ಬಿಹಾರ ತಂಡದ ನಾಯಕ.ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಪಿಎಂ ಬಾಲ ಪುರಸ್ಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.