ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಹೆಚ್ಚು ಅಂತರರಾಷ್ಟ್ರೀಯ ಟೂರ್ನಿ: ಎಐಸಿಎಫ್‌ ಯೋಜನೆ

Published 5 ಮೇ 2024, 15:26 IST
Last Updated 5 ಮೇ 2024, 15:26 IST
ಅಕ್ಷರ ಗಾತ್ರ

ಚೆನ್ನೈ: ದೇಶದ ಪ್ರಮುಖ ಆಟಗಾರರಿಗೆ, ಇತರ ದೇಶಗಳ ಉನ್ನತ ದರ್ಜೆಯ ಆಟಗಾರರ ಜೊತೆ ಆಡಲು ಅವಕಾಶವಾಗುವಂತೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂತರರಾಷ್ಟ್ರೀಯ ಟೂರ್ನಿಗಳನ್ನು ಹಮ್ಮಿಕೊಳ್ಳಲು ಅಖಿಲ ಭಾರತ ಚೆಸ್ ಫೆಡರೇಷನ್‌ (ಎಐಸಿಎಫ್‌) ಯೋಜನೆ ಹಾಕಿಕೊಂಡಿದೆ ಎಂದು ಫೆಡರೇಷನ್‌ ಅಧ್ಯಕ್ಷ ನಿತಿನ್ ನಾರಂಗ್ ಭಾನುವಾರ ಇಲ್ಲಿ ತಿಳಿಸಿದರು.

ದೇಶದ ಪ್ರಮುಖ ಆಟಗಾರರಿಗೆ ಪ್ರತಿ ವರ್ಷ ದೊಡ್ಡ ಮಟ್ಟದ ಟೂರ್ನಿಗಳಲ್ಲಿ ಆಡಲು ಸಾಧ್ಯವಾಗದಿರುವ ಕಾರಣ ಎಐಸಿಎಫ್‌ ಅಂತರರಾಷ್ಟ್ರೀಯ ‘ಸೂಪರ್‌’ ಟೂರ್ನಿಗಳನ್ನು ಶೀಘ್ರವೇ ಆರಂಭಿಸಲಿದೆ ಎಂದು ನಾರಂಗ್ ಹೇಳಿದರು. ಆದರೆ ಟೂರ್ನಿ ಯಾವ ಸ್ವರೂಪದ್ದು ಎಂಬ ವಿವರಗಳನ್ನು ನೀಡಲಿಲ್ಲ.

‘ಈ ಟೂರ್ನಿ (ಸೂಪರ್‌ ಟೂರ್ನಿ)ಗಳಲ್ಲಿ ಭಾರತದ ಆಟಗಾರರಿಗೆ ನಿರ್ದಿಷ್ಟ ಸಂಖ್ಯೆಯ ಮೀಸಲಾ ಇರುತ್ತದೆ. ಜೊತೆಗೆ ವಿದೇಶಿ ಆಟಗಾರರನ್ನು ಆಹ್ವಾನಿಸುತ್ತೇವೆ. ಹೀಗಾಗಿ ದೇಶದ ಆಟಗಾರರಿಗೆ ಅಂತರರಾಷ್ಟ್ರೀಯ ಅನುಭವವೂ ದೊರೆಯುತ್ತದೆ. ಅವರಿಗೆ ವಿದೇಶಿ ಟೂರ್ನಿಗಳಿಗೆ ಹೋಗಿಬರುವ ಖರ್ಚೂ ಉಳಿಯುತ್ತದೆ’ ಎಂದರು.

‘ಇದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಫಿಡೆ ರೇಟೆಡ್‌ ಟೂರ್ನಿಗಳನ್ನು ಹಮ್ಮಿಕೊಳ್ಳಲೂ ಫೆಡರೇಷನ್  ಮುಂದಾಗಿದೆ’ ಎಂದು ಅವರು ತಿಳಿಸಿದರು.

‘ದೇಶದ ಪ್ರಮುಖ ಆಟಗಾರರನ್ನು ಒಳಗೊಂಡ ಎಐಸಿಎಫ್‌ ರೌಂಡ್‌ ರಾಬಿನ್ ಟೂರ್ನಿಯನ್ನೂ ನಡೆಸುವತ್ತ ಗಮನಹರಿಸಲಿದ್ದೇವೆ. ಇಲ್ಲಿ ಎಲ್ಲ ಆಟಗಾರರೂ ಪರಸ್ಪರ ಒಬ್ಬರನ್ನೊಬ್ಬರು ಎದುರಿಸಲಿದ್ದಾರೆ’ ಎಂದರು.

‘ಈ ವರ್ಷ ದೇಶದಲ್ಲಿ ಚೆಸ್‌ಗಾಗಿ ₹65 ಕೋಟಿ ತೊಡಗಿಸಲಿದ್ದೇವೆ. ಇದು ಫೆಡರೇಷನ್‌ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್‌’ ಎಂದರು.

ಇಷ್ಟೊಂದು ಬಜೆಟ್‌ ಹಣ ಹೇಗೆ ಹೊಂದಿಸುವಿರಿ ಎಂಬ ಪ್ರಶ್ನೆಗೆ ಪ್ರಾಯೋಜಕರು ಆರಂಭಿಕ ಹಂತವಾಗಿ ₹25 ಕೋಟಿ ತೊಡಗಿಸಲು ಬದ್ಧತೆ ತೋರಿದ್ದಾರೆ. ಇದು ಆರಂಭಿಕ ಹಂತ. ಈಗಾಗಲೇ ಸಹಕರಿಸುತ್ತಿರುವ ಕಾರ್ಪೊರೇಟ್‌ ಸಂಸ್ಥೆಗಳ ಮೂಲಕವೂ ಹಣ ಹೊಂದಿಸಲಾಗುವುದು’ ಎಂದರು.

‘ಬಹುಮಾನ ಹಣದಲ್ಲಿ ಯಾವುದೇ ಭೇದ ಇರುವುದಿಲ್ಲ. ಪುರುಷರ ಆಟಗಾರಿಗೂ, ಆಟಗಾರ್ತಿಯರಿಗೂ ಸಮಾನ ಬಹುಮಾನ ಮೊತ್ತ ಇರಲಿದೆ’ ಎಂದು ನಾರಂಗ್ ಹೇಳಿದರು.

ಆನ್‌ಲೈನ್ ಅಕಾಡೆಮಿ:

ಖ್ಯಾತನಾಮ ಕೋಚ್‌ಗಳು ಮತ್ತು ಗ್ರ್ಯಾಂಡ್‌ಮಾಸ್ಟರ್‌ಗಳ ಸಹಯೋಗದಲ್ಲಿ 20 ಆನ್‌ಲೈನ್‌ ಆಕಾಡೆಮಿಗಳನ್ನು ಎಐಸಿಎಫ್‌ ಆರಂಭಿಸಲಿದೆ. ಈಗಾಗಲೇ ಅರ್ಜಿ ಆಹ್ವಾನಿಸುವುದರೊಡನೆ ಇದರ ಪ್ರಕ್ರಿಯೆ ಆರಂಭವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT