ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಒಂದು ವಿಶೇಷ ಕ್ಷಣಕ್ಕಾಗಿ ಕಾಯುವ ಚಡಪಡಿಕೆ ಈ ರಾಶಿಯವರದ್ದಾಗಿರುತ್ತದೆ
Published 3 ಮೇ 2024, 23:43 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಶೂರತ್ವ ಪ್ರದರ್ಶನ ಬರಿಯ ಕನ್ನಡಿಯ ಮುಂದಾಗದೆ ಅಧಿಕಾರಿಗಳ ಮುಂದೆ ತೋರಿಸಿದಲ್ಲಿ ಕೆಲಸಗಳು ಮುಂದುವರಿಯಬಹುದು. ನಿತ್ಯ ತೆಗೆದುಕೊಳ್ಳುವ ಔಷಧಿಯು ಅಡ್ಡಪರಿಣಾಮ ಬೀರಬಹುದು.
ವೃಷಭ
ಯೋಗದಲ್ಲಿ ಸಾಧನೆ ಮಾಡುತ್ತಿರುವವರಿಗೆ ಅತ್ಯಾನಂದ ಹೊಂದುವ ಸ್ಥಿತಿ ತಲುಪಲಿದ್ದೀರಿ. ಮಗಳ ಉತ್ತಮ ನಡವಳಿಕೆ ಹೆಮ್ಮೆ ತರುತ್ತದೆ. ಮಧುರವಾದ ನಿಮ್ಮ ಕಂಠಸಿರಿಗೆ ಮನ್ನಣೆ ದೊರೆಯಲಿದೆ.
ಮಿಥುನ
ಹಾಸ್ಯ ವ್ಯಕ್ತಿತ್ವವನ್ನು ಅನುಭವಿಸಿ ಸಾಥ್ ಕೊಡುವ ಯೋಗ್ಯವಾದ ವ್ಯಕ್ತಿಯೊಂದಿಗೆ ಆನಂದದದಿನವನ್ನು ಕಳೆಯುವಿರಿ. ಅದ್ಧೂರಿಯಾದ ಕಾರ್ಯಕ್ರಮ ನಿರ್ವಹಿಸುವ ಜವಾಬ್ದಾರಿಯು ನಿಮ್ಮದಾಗಬಹುದು.
ಕರ್ಕಾಟಕ
ಅಪರೂಪಕ್ಕೆ ಖುಷಿಯಿಂದ ಆಡಿದ ಕ್ರೀಡೆಯು ಕೈಕಾಲು ನೋವಿಗೆ ಕಾರಣವಾಗಬಹುದು ಶೃಗಾಲ ಬುದ್ಧಿಯನ್ನು ತೋರಿಸುವವರನ್ನು ಕಂಡು ನಿಮ್ಮ ಮನಸ್ಸು ಕೊರಗುವುದು. ಹಳ್ಳಿಯ ಭೇಟಿ ಖುಷಿ ತರುವುದು.
ಸಿಂಹ
ಒಂದು ವಿಶೇಷ ಕ್ಷಣಕ್ಕಾಗಿ ಕಾಯುವ ಚಡಪಡಿಕೆ ನಿಮ್ಮದಾಗಿರುತ್ತದೆ. ಆಗಿ ಹೋಗಿರುವ ಘಟನೆಗಳನ್ನು ನೆನೆದು ಶೋಕಿಸುವುದನ್ನು ಆದಷ್ಟು ಬೇಗ ಬಿಡುವುದು ಶುಭಕಾರಕ. ಶಿಷ್ಯಂದಿರ ಅಭಿನಂದನೆ ಮಾಡುವಿರಿ.
ಕನ್ಯಾ
ಗೃಹಿಣಿಯರ ಚತುರತೆಯಿಂದಾಗಿ ಪುರುಷರಿಗೆ ಇಂದು ಅನಾಯಾಸವಾಗಿ ಆರ್ಥಿಕತೆಯಲ್ಲಿ ಅನುಕೂಲವಾಗುತ್ತದೆ. ಎಷ್ಟೇ ಗಳಿಸಿದ್ದರೂ ಇನ್ನೂ ಗಳಿಸಬೇಕೆಂಬ ಅತಿ ಆಸೆಯಿಂದ ವೇದನೆಯಾಗುವಂತೆ ಮಾಡದಿರಿ.
ತುಲಾ
ಸೂತ್ರಧಾರನ ಸ್ಥಾನದಲ್ಲಿ ನಿಂತು ನೀವಾಡಿಸುತ್ತಿರುವ ಕೆಲವು ಕೆಲಸ ಉತ್ತಮವಾದದ್ದು. ಗುಪ್ತ ಕಾರ್ಯಗಳ ಅನುಭವ ಹೊಂದಿದವರು ಕಾಣದ ನಿಮ್ಮ ಕೈಯನ್ನು ಸ್ಮರಿಸಲಿದ್ದಾರೆ. ಅಯೋಗ್ಯರಿಗೆ ಜವಾಬ್ದಾರಿ ಕೊಡಬೇಡಿ.
ವೃಶ್ಚಿಕ
ಯಾರದ್ದೋ ಮಾತು ಕೇಳಿ ನಿಮ್ಮ ಸಣ್ಣ ಪುಟ್ಟ ಅನಾರೋಗ್ಯವನ್ನು ನಿವಾರಿಸಿಕೊಳ್ಳಲು ಸ್ವ ಔಷಧಗಳನ್ನು ಮಾಡಿಕೊಳ್ಳಬೇಡಿ. ಸದ್ಗುರುವಿನ ಮಾತುಗಳನ್ನು ಪಾಲಿಸಿ ಉತ್ತಮರಾದ ನೀವು ಆ ದಿನವನ್ನು ಮತ್ತೆ ನೆನೆಯುವಿರಿ.
ಧನು
ಗೋಮಾಳ ಅಥವಾ ಇತರೆ ಸರ್ಕಾರಿ ಜಾಗಗಳ ಸಂಬಂಧಿ ಭೂವ್ಯಾಜ್ಯಗಳು ಹೆಗಲೇರುವ ಸಾಧ್ಯತೆ ಇದೆ. ತೀಕ್ಷ್ಮವಾದ ವೇದನೆಗಳು ಹಾಗೂ ಕಾಯಿಲೆಗಳಿಂದ ಬಳಲುವವರಿಗೆ ಆಶಾಕಿರಣ ಗೋಚರಿಸುತ್ತದೆ.
ಮಕರ
ಚಾರಣಿಗರಿಗೆ ರೋಮಾಂಚನಕಾರಿ ಸ್ಥಳಗಳ ಬಗ್ಗೆ ಸ್ನೇಹಿತರಿಂದ ತಿಳಿದು ಅಲ್ಲಿಗೆ ಭೇಟಿ ನೀಡುವ ಯೋಚನೆಯನ್ನು ಮಾಡುವಿರಿ. ನೀವು ನಿರ್ಲಕ್ಷಿಸುತ್ತಿದ್ದ ನಿಮ್ಮ ಒಡಹುಟ್ಟಿದವರ ಸಲಹೆಗಳೇ ನಿಮ್ಮ ಸಹಾಯಕ್ಕೆ ಬರಲಿದೆ.
ಕುಂಭ
ನಿಮ್ಮ ಸಮಯವನ್ನು ಯಾಚಿಸುತ್ತಿರುವುದರಿಂದ ನಿಮ್ಮ ಸ್ವಂತ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಜಗತ್ತೆ ಶೂನ್ಯ ಎಂದು ಕಾಣುತ್ತಿರುವವರಿಗೆ ನಿಮ್ಮ ಜೀವನವನ್ನು ಬೆಳಗಿಸುವ ವ್ಯಕ್ತಿಯ ಪರಿಚಯವಾಗುವುದು.
ಮೀನ
ವೃತ್ತಿಯಲ್ಲಿ ಜವಾಬ್ದಾರಿ ಹೆಚ್ಚಿ ಉತ್ತಮ ಆದಾಯ ತೋರಿಬಂದು ಅಭಿವೃದ್ಧಿಗೆ ಕಾರಣವಾಗುವುದು. ಕಬ್ಬಿಣದ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದೇಹದಲ್ಲಿ ಉಷ್ಣದಂತಹ ಸಮಸ್ಯೆಗಳು ಕಾಡಬಹುದು.