ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲಿ ಬದನೆ

Last Updated 20 ಜುಲೈ 2011, 19:30 IST
ಅಕ್ಷರ ಗಾತ್ರ

ಬದನೆಕಾಯಿಯಲ್ಲಿ ಹಲವು ತಳಿಗಳಿವೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ತಳಿಯ ಬದನೆ ಜನಪ್ರಿಯವಾಗಿವೆ. ಚಿತ್ರದಲ್ಲಿ ಕಾಣುವುದು ಬದನೆ ಗಿಡ. ಇದರ ಕಾಯಿಗಳು ಗೋಲಿ ಗಾತ್ರದಲ್ಲಿವೆ. ಇವುಗಳನ್ನು ಪುಟ್ಟ ಬದನೆ ಎಂಬ ಹೆಸರಿನಿಂದ ಕರೆಯುತ್ತಾರೆ. ಇದಕ್ಕೆ `ಕುದನೇ ಕಾಯಿ~ ಎಂಬ ಹೆಸರೂ ಇದೆ.
 
ರುಚಿಯಲ್ಲಿ ಸಾಮಾನ್ಯ ಬದನೆಕಾಯಿಯನ್ನು ಹೋಲುತ್ತದೆ. ಕಾಯಿಗಳಲ್ಲಿ ಬೀಜಗಳೇ ಹೆಚ್ಚಾಗಿವೆ. ಈ ಬದನೆ ಕಾಯಿಗಳನ್ನು ಎಳೆಯದಿದ್ದಾಗಲೇ ಕಿತ್ತು ಬಳಸಬೇಕು. ಮಲೆನಾಡು ಹಾಗೂ ಕರಾವಳಿ ಪ್ರದೇಶದ ರೈತರ ಹಿತ್ತಲುಗಳಲ್ಲಿ ಈ ತಳಿಯ ಬದನೆ ಗಿಡಗಳು ಹೆಚ್ಚಾಗಿ ಕಾಣಸಿಗುತ್ತವೆ.
 
ಈ ಪುಟ್ಟ ಬದನೆಕಾಯಿಗಳಿಂದ ತಯಾರಿಸುವ ಗೊಜ್ಜು, ಸಾರು, ಉಪ್ಪಿನ ಕಾಯಿ ಬಲು ರುಚಿಯಾಗಿರುತ್ತವೆ. ಆದರೆ ಈ ತಳಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಪ್ರಯತ್ನ ನಡೆದಿಲ್ಲ.

ಈ ಬದನೆಗೆ ಹೆಚ್ಚಿನ ಪೋಷಣೆಯ ಅಗತ್ಯವಿಲ್ಲ. ಬೀಜಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಬೆಳೆಸಬಹುದು. ಕುಂಡಗಳಲ್ಲೂ ಬೆಳೆಸಬಹುದು. ಗಿಡ ವರ್ಷದಲ್ಲಿ ನಾಲ್ಕರಿಂದ ಐದು ಸಲ ಕಾಯಿ ಬಿಡುತ್ತವೆ. 
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT