ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್’ ಅಡುಗೆ ಒಲೆ

ಯಂತ್ರ ಲೋಕ
Last Updated 23 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಇದು ‘ಸ್ಮಾರ್ಟ್‌’ ಯುಗ. ಹೆಚ್ಚಿನ ಶ್ರಮ ಪಡದೇ ಸುಲಭದಲ್ಲಿ ಕೆಲಸ ನಿರ್ವಹಿಸಲು ಅನುಕೂಲ ಆಗುವ ರೀತಿಯಲ್ಲಿ ‘ಸ್ಮಾರ್ಟ್‌’ ಯಂತ್ರೋಪಕರಣಗಳು ಎಲ್ಲೆಡೆ ಲಗ್ಗೆ ಇಟ್ಟಿವೆ. ಈ ‘ಸ್ಮಾರ್ಟ್‌’ ಪಟ್ಟಿಗೆ ಹೊಸದಾಗಿ ಒಲೆ ಸೇರ್ಪಡೆಗೊಂಡಿದೆ. ಸಾಂಪ್ರ ದಾಯಿಕ ಒಲೆಯ ಬದಲು ಗ್ಯಾಸ್‌ ಬಂದು ಹಲವು ದಶಕಗಳೇ ಕಳೆದಿದ್ದರೂ ಗ್ರಾಮೀಣ ಪ್ರದೇಶಗಳ ಹಲವೆಡೆ ಇನ್ನೂ ಮಣ್ಣಿನ ಒಲೆಯನ್ನೇ ಬಳಸಲಾಗುತ್ತಿದೆ. ಒಲೆಯ ಮುಂದೆ ಕೂತು ಹೊಗೆಯನ್ನು ನುಂಗುತ್ತಾ ತೊಂದರೆ ಪಡುವ ಕಾರ್ಯ ಅಲ್ಲಿ ಈಗಲೂ ಮುಂದುವರೆದಿದೆ. ಅಂಥವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ‘ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಸ್ಥೆ’ ಸ್ಮಾರ್ಟ್‌ ಒಲೆಯನ್ನು ಪರಿಚಯಿಸಿದೆ.

ಕಡಿಮೆ ಇಂಧನ ಬಳಕೆ ಮತ್ತು ಕಡಿಮೆ ಹೊಗೆ ಬಿಡುವ ಈ ಒಲೆ ಉತ್ತಮ ಕಾರ್ಯಕ್ಷಮತೆ ಹೊಂದಿದ್ದು ದಿನನಿತ್ಯದ ವಿವಿಧ ಅಡುಗೆ ಕೆಲಸಗಳಿಗೆ ಬಳಸಬಹುದಾ ಗಿದೆ. ಇದಕ್ಕೆ ಬೇಕಾಗುವ ಘನರೂಪದ ಇಂಧನ ಗಳೆಂದರೆ ಸೌದೆ, ಭರಣಿ ಮತ್ತು ಕೃಷಿ ತ್ಯಾಜ್ಯ. ಪ್ಲಾಸ್ಟಿಕ್‌ ಬಳಕೆ ಮಾಡುವಂತಿಲ್ಲ.

ಇದರ ಗಾಳಿ ಸಂವಹನ ವ್ಯವಸ್ಥೆಯು ಜ್ವಾಲೆಯ ಗುಣ ಮಟ್ಟವನ್ನು ಉತ್ತಮಪಡಿಸು ತ್ತದೆ. ಇದರಿಂದ ಪದೇ ಪದೇ ಊದುವ ಅಗತ್ಯ ವಿಲ್ಲ. ಸುರಕ್ಷಿತವೂ ಇದೆ. 25 ಕೆ.ಜಿ ತೂಕದ ಭಾರ ವನ್ನು ಹೊರಬಲ್ಲ ಈ ಒಲೆಯ ಮೇಲೆ ಯಾವುದೇ ಗಾತ್ರದ ಪಾತ್ರೆಯನ್ನಾದರೂ ಇಡಬಹುದು. ನಾಲ್ಕು ಕೆ.ಜಿ. ತೂಕ ಇರುವ ಈ ಒಲೆಯನ್ನು ಬೇರೆಡೆ ಸಾಗಿಸಲು ಕೂಡ ಸುಲಭ.

ಸ್ಟೇನ್‌ಲೆಸ್ ಸ್ಟೀಲ್ ಒಲೆ ಇದಾಗಿದ್ದು, ಶೇ 65ರವರೆಗೆ ಇಂಧನ ಉಳಿತಾಯ ಮಾಡಬಹುದು. ನೀರಿನಿಂದ ಒಲೆ ಯನ್ನು ತೊಳೆಯದೇ ಹೊರಭಾಗವನ್ನು ಒದ್ದೆ ಬಟ್ಟೆಯಿಂದ ಒರೆಸುವ ಮೂಲಕ ಸದಾ ಶುಚಿಯಾಗಿ ಇಟ್ಟುಕೊಳ್ಳಬಹುದು. ಇದರ ಬೆಲೆ ₨1300. ಸಂಪರ್ಕಕ್ಕೆ: 9844511082.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT