ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ‘ಪಿಸುಮಾತು’

Last Updated 22 ಜುಲೈ 2018, 19:30 IST
ಅಕ್ಷರ ಗಾತ್ರ

ಇ ದೊಂದು ಸರ್ಕಾರಿ ಪ್ರೌಢಶಾಲೆ. ಇಲ್ಲಿರುವವರು ಕ್ರಿಯಾಶೀಲರು, ಸೂಕ್ಷ್ಮಮತಿಗಳು. ಸಾಧನೆಯ ಮೆಟ್ಟಿಲೇರಿ ನಿಂತವರು. ಇವರ ನೋಟದಲ್ಲಿ ಏನೋ ಸಾಧಿಸಿದ ಸಂತೋಷವಿದೆ. ಇವರಕಾರ್ಯ ನೋಡಿ ಅಭಿನಂದಿಸದ ಮನಸ್ಸುಗಳಿಲ್ಲ. ಆ ದಾರಿಯಲ್ಲಿ ಸಾಗುತ್ತಿದ್ದರೆ ಎಲ್ಲರ ಗಮನ ಒಂದು ಕ್ಷಣ ಆ ಕಡೆಗೆ ಹೋಗದೆ ಇರುವುದಿಲ್ಲ.

ಇದಕ್ಕೆಲ್ಲಾ ಕಾರಣ ಈ ಮಕ್ಕಳ ಕಲಾ ಕೌಶಲದಲ್ಲಿ ಅರಳಿದ ಕಲಾ ಕೃತಿಗಳೆಲ್ಲ ಕಲಾ ಗ್ಯಾಲರಿಯಲ್ಲಿ ಸ್ಥಾನಪಡೆದಿರುವುದು. ಬಹುತೇಕ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಮಕ್ಕಳು ಕೆಲವೊಂದು ವಿಷಯದಲ್ಲಿ ಸೌಲಭ್ಯ ವಂಚಿತರು. ಆದರೆ ಇವರು ಇದನ್ನು ಹುಸಿಯಾಗಿಸಿದ್ದಾರೆ. ಸಾಧನೆ ಗುರಿ, ಮಾರ್ಗದರ್ಶನವೊಂದಿದ್ದರೆ ಏನನ್ನಾದರೂ ಮಾಡಬಹುದು ಎಂಬುದಕ್ಕೆ ಈ ಸರ್ಕಾರಿ ಶಾಲೆ ವಿದ್ಯಾರ್ಥಿಗಳೇ ಸಾಕ್ಷಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ದೊಡ್ಡಹುಲ್ಲೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಲ್ಲರಿಗಿಂತಲೂ ವಿಭಿನ್ನ. ಇವರ ಶಾಲೆಗೆ ಹೋದರೆ ಒಂದು ಕ್ಷಣ ಅಚ್ಚರಿಪಡಲೇಬೇಕು. ಇದಕ್ಕೆಲ್ಲಾ ಕಾರಣ ಶಾಲೆಯಲ್ಲಿ ಆರಂಭವಾದ ‘ಪಿಸುಮಾತು ಕಲಾಗ್ಯಾಲರಿ’. ಇದರ ರೂವಾರಿ ಅಲ್ಲಿಯ ಕಲಾ ಶಿಕ್ಷಕ ಸುನೀಲ್ ಮಿಶ್ರ.

‘ಪಿಸುಮಾತು ಕಲಾ’ ಗ್ಯಾಲರಿ ಹುಟ್ಟಲು ಕಾರಣ :
ಇಲ್ಲಿನ ಮಕ್ಕಳಲ್ಲಿನ ಕಲಾ ಪ್ರತಿಭೆಯನ್ನು ಗುರುತಿಸಿದ ಮಿಶ್ರ ಅವರು ಇವರಲ್ಲಿ ಅಡಗಿರುವ ಕಲೆಯನ್ನು ಹೊರಸೂಸುವ ನಿಟ್ಟಿನಲ್ಲಿ ಕಲಾ ತರಬೇತಿಯ ಜೊತೆಗೆ ಪ್ರೋತ್ಸಾಹ ನೀಡಿದರೆ ಕಾರಣವಾಗಬಹುದೆಂದು ‘ಪಿಸುಮಾತು’ ಎಂಬ ಕಲಾ ಗ್ಯಾಲರಿ ಸ್ಥಾಪಿಸಿದ್ದರು.

ಪಿಸುಮಾತು ಕಲ್ಪನೆ ಏನೆಂದರೆ, ಮಕ್ಕಳು ಮಾತನಾಡುವಾಗ ಪಿಸುಮಾತಿನ ಮೂಲಕವೇ ತಮ್ಮ ಭಾವನೆಯನ್ನುಹಂಚಿಕೊಳ್ಳುವುದು ವಿಶೇಷ. ಅದಕ್ಕಾಗಿ ಈ ಹೆಸರನ್ನೇ ಈ ಕಲಾಗ್ಯಾಲರಿಗೆ ಇಡಲಾಗಿದೆ.

ಈ ಗ್ಯಾಲರಿಯಲ್ಲಿ ಏನೇನಿದೇ ?: ಶಾಲೆಯ ಒಂದು ಕೊಠಡಿಯನ್ನು ಕಲಾ ಗ್ಯಾಲರಿಯನ್ನಾಗಿ ರೂಪಿಸಲಾಗಿದೆ. ಕಲೆಗೆ ಸಂಬಂಧಿಸಿದ ಪುಸ್ತಕಗಳನ್ನು ಇಲ್ಲಿಡಲಾಗಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಬೇರೆ ಕಡೆ ಹೋಗಿ ಕಲೆಯನ್ನು
ಕಲಿಯಲು ಆರ್ಥಿಕವಾಗಿ ಸಬಲರಲ್ಲ. ಅವರಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಹೊರಸೂಸುವ ನಿಟ್ಟಿನಲ್ಲಿ ಅವರ ತಂದೆ, ತಾಯಿ ಮತ್ತು ಮನೆಯವರ ಭಾವಚಿತ್ರಗಳನ್ನು ಇಟ್ಟುಕೊಂಡು ಚಿತ್ರಬಿಡಿಸುವಂತೆ ಮೊದಲು ಹೇಳಿಕೊಡಲಾಗಿತ್ತು. ಮಕ್ಕಳು ಅವರವರ ತಂದೆ,ತಾಯಿಯ ಚಿತ್ರದ ಜೊತೆಗೆ ಬೇರೆ ರೀತಿಯ ಕಲಾ ಕೃತಿಗಳನ್ನು ರಚಿಸಿದರು. ಈ ರೀತಿಯ ವಿಭಿನ್ನ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ಚಟುವಟಿಕೆಗಳು: ಮಕ್ಕಳಲ್ಲಿನ ಕಲಾ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ವಿವಿಧ ಜಾನಪದ ಕಲಾ ಕೃತಿಗಳ ಪರಿಚಯವನ್ನು ಇಲ್ಲಿ ಮಾಡಿಕೊಡಲಾಗುತ್ತಿದೆ. ಉದಾಹರಣೆಗೆ ನಾಗಮಂಡಲ, ಹಸೆಚಿತ್ರ, ಕಿನ್ನಾಳಕಲೆ, ಮದುಬನಿ, ಸುರಪುರ ಶೈಲಿಯಚಿತ್ರಗಳು, ಕಲ್ಲಿನ ವಿಗ್ರಹದ ಕೆತ್ತನೆ ಹೀಗೆ ವಿಭಿನ್ನ ರೀತಿಯ ಕಲಾ ಪ್ರಕಾರಗಳನ್ನು ಮಾಡುವ ನಿಟ್ಟಿನಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಈ ಎಲ್ಲಾ ಮಾದರಿಯ ವಿಷಯಗಳನ್ನು ಇಲ್ಲಿ ಕಲಿಸುವುದು ವಿಶೇಷ.

ಇಲ್ಲಿ ಕಲಿತಿರುವ ಹಲವು ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದಿರುವುದು ವಿಶೇಷ. ಐದು ವರ್ಷಗಳಿಂದ ಪಿಸುಮಾತು, ಕಲಾಗ್ಯಾಲರಿ ಹಲವಾರು ಕಲಾತ್ಮಕವಾದ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಿಗೆ ತರಬೇತಿ ನೀಡುತ್ತಿದೆ.

ಇತ್ತೀಚೆಗೆ ‘ಭಾವಬಿಂಬ ಚಿತ್ರಬಾನ್’ ಎಂಬ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಚಲನಚಿತ್ರ ನಿರ್ದೇಶಕ ಟಿ.ಎಸ್ ನಾಗಾಭರಣಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾಮಹಾವಿದ್ಯಾಲಯದ ಕಲಾ ಇತಿಹಾಸ ವಿಭಾಗದ ಉಪನ್ಯಾಸಕ ಡಾ.ಆರ್.‌ಎಚ್.ಕುಲಕರ್ಣಿ ಅವರು ಭಾಗವಹಿಸಿ ಮಕ್ಕಳು ರಚಿಸಿದ ಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಿ, ಮಕ್ಕಳ ಕಲಾ ಪ್ರತಿಭೆ ಕಂಡು ಬೆರಗಾದರು.

ಸುನೀಲ್ ಮಿಶ್ರ ಅವರ ಮೊಬೈಲ್ ಸಂಖ್ಯೆ – 9731888099

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT