ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಜೀವನದ ನೋವು, ತಲ್ಲಣಗಳ ರಂಗ ಚಿತ್ರಣ..!

Last Updated 18 ಜುಲೈ 2018, 19:30 IST
ಅಕ್ಷರ ಗಾತ್ರ

ಬೆಂಗಳೂರಿನಂತಹ ಬೃಹತ್‌ ನಗರದಲ್ಲಿ ಬಗೆಹರಿಸಲಾಗದ ಹಲವಾರು ಸಮಸ್ಯೆಗಳಿವೆ. ಬೀದಿ ನಾಟಕಗಳ ಮೂಲಕ ಪ್ರಸ್ತುತಪಡಿಸುತ್ತ ನಾಗರಿಕರಿಗೆ ಅವುಗಳ ಬಗ್ಗೆ ಅರಿವು ಮೂಡಿಸುತ್ತ ಬಂದಿರುವ ರಂಗ ಭೂಮಿ ತಂಡವೊಂದು ಬೆಂಗಳೂರಿನಲ್ಲಿದೆ.ಅದುವೆ ‘ಬೀದಿ ರಂಗಭೂಮಿ ಮತ್ತು ಗ್ರೀನ್ ಸ್ಟೇಜ್’.

ಈ ರಂಗ ತಂಡ ಕಳೆದ 9 ವರ್ಷಗಳಿಂದ ಕಾರ್ಯ ನಿರ್ವಹಸಿಕೊಂಡು ಬಂದಿದೆ. ಈ ತಂಡದ ಮುಖ್ಯಸ್ಥ ವಿಜಯ ಎ. (ವಿಜಯ ಗ್ರೀನ್‌ ಸ್ಟೇಜ್‌). ಮೆಕ್ಯಾನಿಕಲ್‌ ಎಂಜಿನಿಯರ್‌ ಓದಿರುವ ಇವರು ರಂಗ ಭೂಮಿ ಡಿಪ್ಲೊಮಾ ಕೂಡ ಮುಗಿಸಿದ್ದಾರೆ. ಒಳ್ಳೆಯ ಕಂಪನಿಯಲ್ಲಿ ಕೈ ತುಂಬಾ ಸಂಬಳ ಸಿಗುತ್ತಿದ್ದರೂ ರಂಗ ಭೂಮಿಯನ್ನೇ ವೃತ್ತಿ ಮತ್ತು ಪ್ರವೃತ್ತಿನ್ನಾಗಿ ಮಾಡಿಕೊಂಡು ಅದರಲ್ಲಿ ಸತತವಾಗಿ ನಿರತರಾಗಿದ್ದಾರೆ.

ರಂಗಭೂಮಿ ಮತ್ತು ಗ್ರೀನ್ ಸ್ಟೇಜ್‌ ತಂಡದಲ್ಲಿ ಮೂವತ್ತು ಮಂದಿ ಕಲಾವಿದರು ಇದ್ದಾರೆ.ಇವರೆಲ್ಲ ಹವ್ಯಾಸಿ ಕಲಾವಿದರು.ಎಂಜಿನಿಯರ್‌, ವೈದ್ಯರು, ಹಾಗೂ ಬೇರೆ ಬೇರೆ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವವರು.ಇವರೆಲ್ಲಾ ಭಾನುವಾರ ಹಾಗೂ ಇನ್ನಿತರ ರಜಾ ದಿನಗಳಲ್ಲಿ ಬೀದಿ ನಾಟಕಗಳಲ್ಲಿ ಭಾಗವಹಿಸುತ್ತಾರೆ. ಇಂತಹ ಹವ್ಯಾಸಿ ಕಲಾವಿದರೆ ನಮ್ಮ ತಂಡದ ಜೀವಾಳ ಎನ್ನುತ್ತಾರೆ ವಿಜಯ್‌.

ಭಾನುವಾರ ಅಥವಾ ರಜಾ ದಿನಗಳು ಬಂತೆಂದರೆ ಸಾಕು ಅದು ಕಬ್ಬನ್ ಪಾರ್ಕ್‌‌, ಲಾಲ್‌ಬಾಗ್ ಅಥವಾ ಬೆಂಗಳೂರಿನ ಯಾವುದೊ ಒಂದು ಬಡಾವಣೆಯ ಪಾರ್ಕಿನ ಕೊನೆಯಲ್ಲಿ ಅದು ಕೂಡಾ ಮುಂಜಾನೆ ಹೊತ್ತಲ್ಲಿ ನಾಟಕದ ಸಂಭಾಷಣೆಯೋ, ಹಾಡೋ ನಿಮ್ಮ ಕಿವಿಗೆ ಕೇಳಿಸದೆ ಇರದು. ಅಲ್ಲಿ ಯಾವುದಾದರೂ ಒಂದು ಜನ ಸಾಮಾನ್ಯನ ಸಮಸ್ಯೆಯ ಕುರಿತ ಬೀದಿ ನಾಟಕ ಮಾಡುತ್ತಾರೆ.

ಜನರ ಮನಸ್ಸನ್ನು ಬದಲಾಯಿಸಿ ಕಾಡು ಉಳಿಯುವಂತೆ ಮಾಡುವುದು ಹಾಗೇಯೇ ‘ಕೆರೆಗಳು ಸಾಯುತ್ತವೆ ಕಂಡಿರಾ..!’ ಬೆಂಗಳೂರಿನ ಇಂದಿನ ಕೆರೆಗಳ ಪರಿಸ್ಥಿತಿ, ಕೆರೆಯ ನೀರನ್ನು ಆಶ್ರಯಿಸಿರುವ ಜೀವ ಜಂತುಗಳ ಹಾಹಾಕಾರ, ಕೆರೆಯ ಒಡನಾಟದ ನೋವು ತಲ್ಲಣ, ಕಣ್ಮರೆಯಾಗಿರುವ ಕೆರೆಗಳು ಎದ್ದು ಬಂದು ತನ್ನ ಅಳಲು ತೋಡಿ ಕೊಳ್ಳುವ ಪರಿಕಲ್ಪನೆಯನ್ನು ಪ್ರತಿಬಿಂಬಿಸುವ ಹೂರಣ. ಪೋಷಕರೇ ಎಚ್ಚರ..! ವ್ಯಾಪಾರೀಕರಣವಾಗಿರುವ ಶಿಕ್ಷಣ ಕುರಿತು ಹೆತ್ತವರ ಗೋಳು, ‘ಅಮ್ಮ ಹೀಗ್ಯಾಕೆ ಮಾಡಿದ್ದು’ ಮಕ್ಕಳನ್ನು ಪ್ರೀತಿಯಿಂದ ಬೆಳೆಸುವ ತಂದೆ ತಾಯಿಂದಿರಿಗೂ ಪೋಷಣೆ ಬೇಡವೇ?

ವಿಜಯ್‌
ವಿಜಯ್‌

ಹತ್ಯೆಯೋ, ಆತ್ಮಹತ್ಯೆಯೋ’ ಮಹಿಳೆಯರ ದೌರ್ಜನ್ಯ ಪರಾಕಾಷ್ಠೆಗೆ ಹಿಡಿದ ಕನ್ನಡಿ, ‘ಕಸನೋವಾ’ ಜನಸಂಖ್ಯೆಗಿಂತಲೂ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಕಸದ ಸಮಸ್ಯೆ.‘ಇದು ನಮ್ಮ ಊರು ಬೆಂಗಳೂರು’ ಟ್ರಾಫಿಕ್‌ ಸಮಸ್ಯೆ ಕುರಿತು,ಉಸಿರು ಬಿಡಲಾಗದ ವಾತಾವಾರಣದಲ್ಲಿ ಸತ್ತು ಬದುಕುವ ದಿನಚರಿ ‘ಸಂಸ್ಕೃತಿ ಮಾಲಿನ್ಯ ವಿಪರೀತ ಪಾಶ್ಚಾತ ಸಂಸ್ಕೃತಿಯ ಅನುಕರಣೆ, ಬಹುರಾಷ್ಟ್ರೀಯ ಕಂಪನಿಗಳ ಹಾವಳಿ, ವಿದೇಶೀ ವ್ಯಾಮೋಹ, ನಮ್ಮ ಯುವಜನತೆಯ ಮನಸ್ಸಿನಲ್ಲಿ ಬೇರೂರುತ್ತಾ ನಮ್ಮ ಭವ್ಯ ಸಂಸ್ಕೃತಿಯನ್ನು ಮಲೀನಗೋಳಿಸುವತ್ತ ಹೀಗೆ ಬೆಂಗಳೂರಿನಲ್ಲಿ ದಿನ ನಿತ್ಯ ನಡೆಯುವ ಜೀವಂತ ಸಮಸ್ಯೆಗಳ ಕುರಿತು ಮನ ಮಿಡಿಯುವ ಬೀದಿ ನಾಟಕಗಳನ್ನು ಪ್ರದರ್ಶನ ಮಾಡುತ್ತ ಬಂದಿರುವ ಗ್ರೀನ್ ಸ್ಟೇಜ್ ತಂಡ ಜನರ ಪ್ರಶಂಸೆಗೆ ಪಾತ್ರವಾಗಿದೆ.

ವಿಜಯ ಅವರ ಕೆಲವು ನಾಟಕಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ ,ಹಲವಾರು ಬಹುಮಾನಗಳು ಬಂದಿವೆ. ಮೆರವಣಿಗೆ ಮತ್ತು ಗ್ರೀನ್‌ಸ್ಟೇಜ್‌: ಪರಿಸರ ರಕ್ಷಣೆಯನ್ನು ವಿವಿಧ ಸಂಘ ಸಂಸ್ಥೆಗಳು ಒಂದೊಂದು ರೀತಿಯಲ್ಲಿ ಆಚರಣೆ ಮಾಡುತ್ತವೆ ನಮ್ಮ ಬೀದಿ ನಾಟಕ ತಂಡ ಪರಿಸರಸ್ನೇಹಿ ಗಣಪನ ಬಳಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮೊದಲ ಬಾರಿ ರಾಜ್ಯದಲ್ಲಿಯೇ ಬೀದಿ ನಾಟಕವನ್ನು ಮೆರವಣಿಗೆಯ ಮೂಲಕ ಬೆಂಗಳೂರಿನಿಂದ ಮೈಸೂರು, ತುಮಕೂರಿನ ಕಡೆ ಹೊರಟು ಹಳ್ಳಿಗಳ ವಿವಿಧ ಕಡೆಗಳಲ್ಲಿ ಒಂದೇ ದಿನದಲ್ಲಿ ಹಲವಾರು ಬೀದಿ ನಾಟಕಗಳನ್ನು ಪ್ರದರ್ಶನ ಮಾಡಿ ಸೈ ಎನಿಸಿಕೊಂಡು ಜನರ ಪ್ರಶಂಸೆ ಹಾಗೂ ಪರಿಸರ ಇಲಾಖೆ ಮೆಚ್ಚುಗೆಗೆ ಪಾತ್ರರರಾಗಿದ್ದೇವೆ ಎನ್ನುತ್ತಾರೆ ವಿಜಯ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT