ಈ ಗಾಳಿ ಬಯಲ ಲೋಕದಲ್ಲಿ ಎರೆಹುಳದ ಹೃದಯದೊಳಗೆ ಪ್ರೇಮದಂತೆ ತುಂಬಿ ಬಂದೆ ಇರುವೆಯ ಬಾಯೊಳಗೆ ಆಹಾರದ ತುಂಡಿನಂತೆ ಜೀವ ಪೋಷಕ ಮಿಡತೆ, ಕೀಟ ಕುಕ್ಕುಟಗಳ ರೆಕ್ಕೆಯೊಳಗೆ ಹಾರುವಂತ ಬಲವಾಗಿ ನೀ ಇರುವೆ ಮಾಲೀಕ ಇರುವೆಯ ಮಾಲೀಕ
ಮೋಡದಾಚೆ, ಹಿಮದ ಮಧ್ಯೆ ಪಾತಾಳದ ಪದರಗಳಲಿ ಕಾಣಲಾಗದಂತ ನಿನ್ನ ಮೊಗವ ಶಿಶು ಕಂದನ ಮರುಳುನಗೆಯಲಿ ಜೇನಿನ ಸವಿಯ ಸ್ವಾದದಲಿ ಸಂಗೀತದ ಇಂಪಿನಲ್ಲಿ ಬೇಲಿಹೂವ ಸ್ಥೈರ್ಯದಲಿ ನಿನ್ನ ಕುರಿತು ಬರೆಯುವ ಈ ಪದಗಳಲ್ಲಿ ನೀ ಇರುವೆ ಮಾಲೀಕ ಇರುವೆಯ ಮಾಲೀಕ