ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ: ಗೌರವಧನ

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಜ್ಯದಲ್ಲಿ  ಅಂಗನ­ವಾಡಿ ಕಾರ್ಯಕರ್ತೆಯರ ಒಟ್ಟು 21 ತರಬೇತಿ ಕೇಂದ್ರಗಳು ನಡೆಯುತ್ತಿದ್ದು, ಇದರ ಮಾಹಿತಿಯು ಇಲಾಖೆಯ ಸಚಿವರ ಗಮನಕ್ಕೆ ಬಂದಿಲ್ಲವೆನಿಸುತ್ತದೆ.

ಈ ತರಬೇತಿ ಕೇಂದ್ರಗಳಲ್ಲಿ ಒಟ್ಟು 189 ಸಿಬ್ಬಂದಿ ಮಾತ್ರ ಗೌರವಧನದ ಅಧಾರದ ಮೇಲೆ  ಕಾರ್ಯ ನಿರ್ವಹಿಸುತ್ತಿದ್ದು, ಇವರೆಲ್ಲ ವರ್ಷ­ದಲ್ಲಿ ಎರಡು ಬಾರಿ ಮಾತ್ರ ಗೌರವ ಧನವನ್ನು ಪಡೆಯುತ್ತಿದ್ದಾರೆ. ಇವರಿಗೆ ಪ್ರತೀ ತಿಂಗಳು ಗೌರವಧನ ನೀಡುವಂತೆ  ಸಂಬಂಧಪಟ್ಟ ಅಧಿಕಾರಿ ವರ್ಗದವರಿಗೆ ಹಾಗೂ ಸಚಿವೆಗೆ ಹಲವಾರು ಬಾರಿ, ಮನವಿ ಮಾಡಿದರೂ ಯಾರೂ ಸ್ಪಂದಿಸುತ್ತಿಲ್ಲ. 

ಈಗಿನ ದಿನಗಳಲ್ಲಿ ಪ್ರತೀ ತಿಂಗಳು ಸಂಬಳ ಪಡೆದರೂ ಜೀವನ ಮಾಡು­ವುದು ಕಷ್ಟ. ಅಂತಹುದರಲ್ಲಿ ಆರು ತಿಂಗಳಿಗೆ ಗೌರವಧನ ಪಡೆದು ಬದು­ಕನ್ನು ಸಾಗಿಸುವುದಾದರೂ ಹೇಗೆ? ಅಧಿಕಾರಿಗಳು ಮತ್ತು ಸಚಿವರು   ಗಮನಹರಿಸಬೇಕು.

–ಟಿ.ಎಸ್‌. ಚಿಟ್ನೀಸ್‌,  ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT