ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಪೋತ್ಸಾಹ ನೀಡಲು ಮನವಿ

Last Updated 22 ಡಿಸೆಂಬರ್ 2014, 7:09 IST
ಅಕ್ಷರ ಗಾತ್ರ

ರಾಮನಗರ: ಅಂಗವಿಕಲರು ಸಾಮಾ­ನ್ಯರಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರು­ತ್ತಾರೆ.  ಅವರಿಗೆ ಸಾಧ್ಯವಾದಷ್ಟು ಅವ­ಕಾ­ಶಗಳನ್ನು ನೀಡುವ ಮೂಲಕ ಮತ್ತಷ್ಟು ಸಾಧನೆಗೆ ಪ್ರೋತ್ಸಾಹಿಸುವಂತೆ  ಜಿಲ್ಲಾಧಿಕಾರಿ ಎಫ್.ಆರ್. ಜಮಾ­ದಾರ್ ಕರೆ ನೀಡಿದರು.

ನಗರದ ಗುರುಭವನದಲ್ಲಿ ಜಿಲ್ಲಾ­ಡಳಿತ, ಜಿಪಂ,  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಅಂಗವಿ­ಕಲರ ಹಾಗೂ ಹಿರಿಯ ನಾಗರಿಕರ ಸಬಲೀ­ಕರಣ ಇಲಾಖೆ, ವಿವಿಧ ಸಂಘಟ­ನೆಗಳಿಂದ ನಡೆದ  ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೃಷ್ಟಿಕರ್ತನು ಅಂಗವಿಕಲರಿಂದ ಒಂದನ್ನು ಕಸಿದುಕೊಂಡು, ಮತ್ತೊಂದು ವಿಶೇಷ ಸಾಮಥ್ರ್ಯವನ್ನು ದಯಪಾಲಿಸಿದ್ದಾನೆ. ಅಂಗವಿಕಲರಿಗೆ ಅನುಕಂಪ ತೋರುವುದಕ್ಕಿಂತ ಅವ­ರಲ್ಲಿರುವ ಅಭಿರುಚಿ, ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಷ್ಟದ ಜೀವನವನ್ನು ಸರಳೀಕರಣ­ಗೊಳಿಸಿಕೊಂಡು ಉಲ್ಲಾಸದಿಂದ ಬದುಕು­ವುದಕ್ಕೆ ಅಂಗವಿ­ಕಲರು ನಮ್ಮೆಲ್ಲರಿಗೂ ಪ್ರೇರಣೆ­ಯಾಗಿದ್ದಾರೆ. ಅವರಿಂದ ಸಾಮಾನ್ಯ ನಾಗರಿಕರು ಕಲಿಯುವುದು ಬಹಳಷ್ಟಿದೆ ಎಂದು ಅವರು ಹೇಳಿದರು.

ಅಂಗವಿಕಲರು ಪ್ರೋತ್ಸಾಹಿಸಿ, ಸಮಾ­ಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜ­ನೆಗಳನ್ನು ರೂಪಿಸಿದೆ. ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗುರುತಿಸಿ, ಯೋಜನೆಯ ಸೌಲಭ್ಯಗಳನ್ನು ಕಲ್ಪಿಸ­ಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಯೋಜನೆ ಪಲಾನುಭವಿಗಳಿಗೆ ಸವಲತ್ತು, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನ ಸೌಲಭ್ಯದ ಚೆಕ್, ಕ್ರೀಡಾಕೂಟದಲ್ಲಿ ವಿಜೇತರಾದ ಅಂಗವಿಕಲರಿಗೆ ಬಹುಮಾನ  ವಿತರಿಸಲಾಯಿತು.  ಅಂಗವಿಕಲರ ಹಕ್ಕುಗಳು, ಸಮಸ್ಯೆ­ಗಳು, ಪರಿಹಾರೋಪಾಯಗಳ ಬಗ್ಗೆ ಸಮರ್ಥನಂ ಸಂಸ್ಥೆಯ ಪ್ರಧಾನ ಸಲಹೆಗಾರರಾದ ಕೆ.ವಿ.ರಾಜಣ್ಣ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಅಧಿಕಾರಿಗಳಾದ  ಶಿವಮೂರ್ತಿ, ಚಂದ್ರು, ಶಿವಶಂಕರೇಗೌಡ, ಪುಟ್ಟಸ್ವಾಮಿ, ತಾಜ್ ಉದ್ದೀನ್ ಖಾನ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT