ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲ ನೌಕರರಿಗೆ ವಸತಿಯಲ್ಲಿ ಆದ್ಯತೆ

ಕೇಂದ್ರ ಸರ್ಕಾರದ 15ಸಾವಿರ ಸಿಬ್ಬಂದಿಗೆ ಆದ್ಯತೆ
Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕೇಂದ್ರ ಸರ್ಕಾರದ 15,000 ಕ್ಕೂ ಹೆಚ್ಚು ಅಂಗವಿಕಲ ನೌಕರರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.
ಅಂಗವಿಕಲ ನೌಕರರ ವರ್ಗಾವಣೆ,  ಸ್ಥಳ ನಿಯುಕ್ತಿ ಮತ್ತು ಅವರ ಅಗತ್ಯಕ್ಕೆ ತಕ್ಕಂತೆ ವಸತಿ ಹೊಂದಾಣಿಕೆ ಮಾಡಿ­ಕೊಳ್ಳು­ವಲ್ಲಿ ಆದ್ಯತೆ ನೀಡಬೇಕು ಎಂದು   ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆ ಮತ್ತು ಉಳಿದು ಕೊಳ್ಳುವ ಸ್ಥಳಗಳನ್ನು ತೀರ್ಮಾ­ನಿಸುವಲ್ಲಿ ವಿಶೇಷ ಅಗತ್ಯವನ್ನು ಪರಿಗಣಿಸು­ತ್ತಿ­ರ­ಲಿಲ್ಲ ಎಂದು ಕೇಂದ್ರ ನೌಕರರು ಹಲವು ದಶಕ­ಗಳಿಂದ ದೂರುತ್ತಿದ್ದರು. ಆದರೆ ಇದೀಗ ಸರ್ಕಾರದ ಆದೇಶ­ದಿಂದ ಸ್ವಲ್ಪಮಟ್ಟಿಗೆ ನಿಟ್ಟಿಸಿರು ಬಿಡುವಂತಾಗಿದೆ.

ಕೇಂದ್ರ ಸರ್ಕಾರದ ಸಚಿವಾಲಯ, ಇಲಾಖೆಗಳಲ್ಲಿ ದೈಹಿಕ ಅಂಗವೈಕಲ್ಯ, ಕಿವುಡು ಮತ್ತು ಕುರುಡು ತೊಂದರೆ ಇರುವ  ಸುಮಾರು 15,747 ನೌಕರರರು ಕೆಲಸ ಮಾಡುತ್ತಿದ್ದಾರೆ ಎಂದು ಸಿಬ್ಬಂದಿ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ ಅಂಶ ತಿಳಿಸಿದೆ.ಹುದ್ದೆ ಗುರುತಿಸುವಿಕೆ,  ನೇಮಕ ಮತ್ತು ಪದೋ­­ನ್ನತಿ ಮುನ್ನ ತರಬೇತಿ, ನೆರವು ಉಪಕರಣ ಒದ­ಗಿ­ಸು­ವಿಕೆ, ವರ್ಗಾವಣೆ ಹಾಗೂ ನೇಮಕದಲ್ಲಿ ಆದ್ಯತೆ, ವಿಶೇಷ ರಜಾ ಸೌಲಭ್ಯ ಮತ್ತಿತರರ ಸೌಲಭ್ಯ ಒದಗಿಸು ವಲ್ಲಿ ಗಮನ ನೀಡಲಾಗುವುದು ಎಂದು ಸಿಬ್ಬಂದಿ ಸಚಿವಾ­ಲಯ ಸೋಮವಾರ ಹೊರಡಿಸಿದ ಆದೇಶ ತಿಳಿಸಿದೆ.

ಅಂಗವಿಕಲರಿಗೆ ಕೆಲಸ ಮಾಡುವ ಸ್ಥಳದ ಸಮೀಪದಲ್ಲಿಯೇ ವಸತಿ ಸೌಲಭ್ಯ  ಒದಗಿಸುವುದು ಹಾಗೂ ನೆಲ ಮಹ ಡಿಯ ಮನೆಗಳನ್ನೇ ನೀಡುವಲ್ಲಿಯೂ ಇಲಾಖೆ ಕ್ರಮ ಕೈಗೊಳ್ಳಲಿದೆ. ಅತಿ ಹೆಚ್ಚು ಉದ್ಯೋಗಾವಕಾಶ ಇರುವ ಬಿ, ಸಿ ಮತ್ತು ಡಿ ಗ್ರೂಪ್‌ಗಳಲ್ಲಿ  ಸುಲಭವಾಗಿ ಮಾಡಬಹುದಾದ ಕೆಲಸಗಳು ಯಾವು ಎಂಬುದನ್ನು ಗುರುತಿಸುವಂತೆ ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯ ಮತ್ತು ಇಲಾಖೆಗಳಿಗೆ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT