ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಃಕರಣದ ಮಾಸ್ತಿ

ಚಿತ್ರಪಟ ಕಥನ
Last Updated 4 ಜೂನ್ 2016, 19:30 IST
ಅಕ್ಷರ ಗಾತ್ರ

‘ಇವರು ನನ್ನೆದುರು ಹಾದು ಹೋದಾಗಲೆಲ್ಲ / ಹಳ್ಳಿಗಾಡಿನ ಕಡೆಯ ಸುಪ್ರನ್ನತೆಯೊಂದು ನಗರಕ್ಕೆ ಸಂದಂತೆ / ಬೆಳಗಾಗ ಚಳಿಯಲ್ಲಿ ಬಿಸಿನೀರಿನಲಿ ಮಿಂದಂತೆ / ಎದೆ ಸ್ವಚ್ಛಗೊಳ್ಳುತ್ತದೆ, ಹಗುರಕ್ಕೆ ಸಲ್ಲುತ್ತದೆ’– ಮಾಸ್ತಿ ವೆಂಕಟೇಶ ಅಯ್ಯಂಗಾರರನ್ನು ಪ್ರೊ. ಕೆ.ಎಸ್‌. ನಿಸಾರ್‌ ಅಹಮದ್‌ ಚಿತ್ರಿಸಿರುವ ರೀತಿ ಇದು. ಹೌದು, ಮಾಸ್ತಿ ಪ್ರಸನ್ನತೆಗೆ – ಮನುಷ್ಯಪ್ರೀತಿಗೆ ಇನ್ನೊಂದು ಹೆಸರು.

ಬದುಕು ಹಾಗೂ ಬರಹ ಎರಡರಲ್ಲೂ ಮಾನವೀಯತೆಯನ್ನು ಕಾಣಿಸಿದ ‘ಅಪ್ಪಟ ಮನುಷ್ಯ’ ಅವರು. ಸಹಲೇಖಕರ ಸಂಕಷ್ಟಗಳಿಗೆ ಒದಗಿದ್ದು, ಕಿರಿಯ ಲೇಖಕರನ್ನು ಮಮತೆಯಿಂದ ಕಂಡಿದ್ದು– ಮಾಸ್ತಿ ಅವರ ಅಂತಃಕರಣಕ್ಕೆ ಅವರೇ ಸಾಟಿ.

ಜೀವನಪ್ರೀತಿಯ ಕಾರಣದಿಂದಲೂ ಅವರು ಮುಖ್ಯರು. ಕೋಟು ತೊಟ್ಟು, ಕೊಡೆ ಹಿಡಿದು, ಪ್ರತಿ ಸಂಜೆ ಬೆಂಗಳೂರಿನ ಗಾಂಧಿಬಜಾರ್‌ನ ಕ್ಲಬ್‌ಗೆ ಹೋಗುತ್ತಿದ್ದ ಜೀವನಪ್ರೀತಿ ಅವರದು.

ಈ ಜೀವನೋತ್ಸಾಹವನ್ನೇ– ‘ಕ್ಲಬ್ಬಿನಲಿ ನಿಶ್ಚಿಂತೆಯಾಗಿ ಎಲೆ ಕಲಸುವುದು / ಇಪ್ಪತ್ತೆಂಟನಾಡುವುದು – ನಡುವೆ ಅದೂ ಇದೂ /  ಇಪ್ಪತ್ತೆಂಟನಾಡುವುದು’ ಎಂದು ನಿಸಾರರು ಚಿತ್ರಿಸಿದ್ದಾರೆ.

ಅಂದಹಾಗೆ, ನಾಳೆ ಮಾಸ್ತಿ ಅವರ ಹುಟ್ಟುಹಬ್ಬ (1891–1968). ಜೂನ್ 6 ಅವರು ಹುಟ್ಟಿದ ದಿನವೂ ನಿಧನರಾದ ದಿನವೂ ಹೌದು. ಪ್ರಸ್ತುತ ಕನ್ನಡ ಸಾರಸ್ವತಲೋಕ ‘ಮಾಸ್ತಿಯವರ 125ನೇ ಜಯಂತಿ’ ಆಚರಿಸುತ್ತಿರುವ ಸಂದರ್ಭದಲ್ಲಿ ಇಲ್ಲಿನ ಚಿತ್ರಗಳು ಮಾಸ್ತಿಯವರ ವ್ಯಕ್ತಿತ್ವದ ಚೆಲುವನ್ನು ಸೂಚಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT