ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ನಿಗದಿಗೆ ‘ಸುಪ್ರೀಂ’ ನಕಾರ

ನ್ಯಾಯಮೂರ್ತಿಗಳಿಗೆ ನಿವೃತ್ತಿ ನಂತರ ಸರ್ಕಾರಿ ಹುದ್ದೆ
Last Updated 8 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಿವೃತ್ತಿಯ ನಂತರ ನ್ಯಾಯಮೂರ್ತಿಗಳು ಸರ್ಕಾರಿ ಹುದ್ದೆ­ಗಳನ್ನು ವಹಿಸಿಕೊಳ್ಳುವುದರ ನಡುವೆ ನಿರ್ದಿಷ್ಟ ಅವಧಿಯನ್ನು ನಿಗದಿ­ಪಡಿಸಲು ಸುಪ್ರೀಂ ಕೋರ್ಟ್‌ ನಿರಾ­ಕರಿಸಿದೆ. ಸುಪ್ರೀಂ ಕೋರ್ಟ್‌ನ ನ್ಯಾಯ­ಮೂರ್ತಿ­ಯಾಗಿದ್ದ ಪಿ. ಸದಾಶಿವಂ ಅವರು ನಿವೃತ್ತಿಯಾದ ನಂತರ ರಾಜ್ಯ­ಪಾಲರ ಹುದ್ದೆಯನ್ನು ವಹಿಸಿಕೊಂಡ ನಂತರ ಈ ಬಗ್ಗೆ ವ್ಯಾಪಕವಾಗಿ ಚರ್ಚೆ ಆರಂಭವಾಗಿತ್ತು.

ನಿವೃತ್ತ ನ್ಯಾಯಮೂರ್ತಿಗಳು ಸರ್ಕಾ­ರದ ಹುದ್ದೆಯನ್ನು ವಹಿಸಿ­ಕೊಳ್ಳಲು ನಿರ್ದಿಷ್ಟ ಸಮಯ ನಿಗದಿ ಮಾಡ­ಬೇಕು ಎಂದು ಆಗ್ರಹಿಸಿ ಸಲ್ಲಿಸ­ಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಮುಖ್ಯ ನ್ಯಾಯ­ಮೂರ್ತಿ ಎಚ್‌.ಎಲ್‌ ದತ್ತು ನೇತೃ­ತ್ವದ ಪೀಠ ವಿಚಾರಣೆ ನಡೆಸಿತು.

ನಿವೃತ್ತ­ರಾದ ತಕ್ಷಣವೇ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನ ನ್ಯಾಯ­­ಮೂರ್ತಿಗಳನ್ನು ಬೇರೆ ಹುದ್ದೆಗಳಿಗೆ ಸರ್ಕಾರ ನೇಮಕ ಮಾಡ­ದಂತೆ ನಿರ್ದೇಶನ ನೀಡಬೇಕು ಎಂದೂ ಅರ್ಜಿಯಲ್ಲಿ ವಿನಂತಿಸ­ಲಾಗಿತ್ತು. ದತ್ತು ಅವರಿಗೆ ಮೊದಲು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ­ಯಾ­ಗಿದ್ದ ಆರ್‌. ಎಂ. ಲೋಧಾ ಅವರು, ನ್ಯಾಯಮೂರ್ತಿ­ಗಳು ನಿವೃತ್ತಿ­ಯಾದ ನಂತರ ಎರಡು ವರ್ಷ ಬೇರೆ ಯಾವುದೇ ಸರ್ಕಾರಿ ಹುದ್ದೆ ವಹಿಸಿ­ಕೊಳ್ಳುವುದಕ್ಕೆ ಅವಕಾಶ ಇರಬಾರದು ಎಂದು ತಮ್ಮ ಕೊನೆಯ ಕೆಲಸ ದಿನದಂದು ಹೇಳಿದ್ದರು. ಎರಡು ವರ್ಷ ಸರ್ಕಾ­ರದ ಯಾವುದೇ ಹುದ್ದೆ­ವಹಿಸಿ­ಕೊಳ್ಳು­ವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದರು.

ನ್ಯಾಯಾಂಗದ ಬದ್ಧತೆಯನ್ನು ರಕ್ಷಿ­ಸು­­ವುದಕ್ಕಾಗಿ ನ್ಯಾಯಮೂರ್ತಿ­ಗಳು ನಿವೃತ್ತರಾದ ನಂತರ ಸರ್ಕಾರಿ ಹುದ್ದೆ ವಹಿಸಿಕೊಳ್ಳುವುದಕ್ಕೆ ನಿರ್ದಿಷ್ಟ ಅವ­ಧಿ ಅಂತರ ಅಗತ್ಯ ಎಂದು ಅರ್ಜಿ­ದಾರ ಮೊಹಮ್ಮದ್‌ ಆಲಿ ಆಗ್ರಹಿಸಿ­ದ್ದರು.

ಸಂವಿಧಾನದಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಯಾಕೆಂ­ದರೆ ಭಾರತದ ಮುಖ್ಯ ನ್ಯಾಯ­ಮೂರ್ತಿಗಳು ನಿವೃತ್ತಿಯಾದಕೂಡಲೇ ಸರ್ಕಾರ ನೀಡುವ ಹುದ್ದೆ­ಯನ್ನು ಸ್ವೀಕರಿಸಬಹುದು ಎಂದು ಸಂವಿ­ಧಾನ ರಚನೆಕಾರರು ನಿರೀಕ್ಷಿಸಿರಲಿಲ್ಲ ಎಂದು ಅವರು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT