ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿ ಕಾರ್ಯವಿಧಾನ ವಿಕೇಂದ್ರೀಕರಣ ಅಗತ್ಯ

ಸಾಹಿತ್ಯ ಅಕಾಡೆಮಿ ‘ಸುವರ್ಣ ಸಂಭ್ರಮ’ದಲ್ಲಿ ಕೆ.ವಿ.ನಾರಾಯಣ ಅಭಿಮತ
Last Updated 3 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಅಕಾಡೆಮಿಗಳ ಕಾರ್ಯ­ಕ್ರಮ­ಗಳು ಇಂದಿನ ಅಗತ್ಯಗಳ ಹಾಗೂ ಹೊಸ ತಲೆಮಾರಿನ ತುಡಿತಗಳಿಗೆ ಅನು­ಗುಣ­ವಾಗಿ ವಿಕೇಂದ್ರೀಕರ­ಣಗೊಳ್ಳ­ಬೇಕು’ ಎಂದು ಕುವೆಂಪು ಭಾಷಾ­ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ವಿ­. ನಾರಾಯಣ ಅಭಿಪ್ರಾಯ­ಪಟ್ಟರು.

ನಗರದ ಕುವೆಂಪು ರಂಗಮಂದಿರ­ದಲ್ಲಿ ಭಾನುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ
ಅಕಾಡೆ­­­ಮಿಯ ‘ಸುವರ್ಣ ಸಂಭ್ರಮ’ ಕಾರ್ಯ­ಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಹಣಕಾಸಿನ ಹೊಣೆಗಾರಿಕೆ ಜತೆಗೆ ಸಾಮಾಜಿಕ–ಸಾಂಸ್ಕೃತಿಕ ಹೊಣೆಗಾರಿಕೆ ಕೂಡ ಅಕಾಡೆಮಿಗಳಿಗೆ ಇರಬೇಕು. ಸಮಾಜದಲ್ಲಿ ಅಕಾಡೆಮಿಗಳ ಬಗ್ಗೆ ಹಗುರ ಭಾವನೆ ಇದೆ; ‘ಬಿಳಿ ಆನೆ’, ‘ಗಂಜಿ ಕೇಂದ್ರ’ ಎಂಬ ಟೀಕಾಸ್ತ್ರಗಳ ನಡುವೆಯೂ ಅಕಾಡೆಮಿಗಳು ಸಾಂಸ್ಕೃ­ತಿಕ ಹೊಣೆಗಾರಿಕೆ ನಿರ್ವಹಿಸುವುದರ ಕುರಿತು ಸುದೀರ್ಘ ಚರ್ಚೆಗಳಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯ ಅಕಾಡೆಮಿ ಗೌರವ ಸ್ವೀಕರಿಸಿದ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಮಾತನಾಡಿ, ಅಕಾಡೆ­ಮಿಗಳ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು. ಸಾಂಸ್ಕೃ­ತಿಕ ಲೋಕದ ಸಾಹಿತಿ, ಕಲಾವಿದರಿಂದ ಕೂಡಿದ ಒಂದು ಸಂಸ್ಥೆಯಾಗಿ ಅಕಾಡೆ­ಮಿ­ಗಳು ರೂಪುಗೊಳ್ಳಬೇಕು ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT