ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ದೂರಿ ಸ್ವಾಗತದ ಅಬ್ಬರ

Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಒದಗಿಸಿರುವ ಭಾರಿ ಭದ್ರತೆ ನೋಡಿದರೆ, ಶಾಂತಿಗೆ ಹೆಸರಾದ ಭಾರತದಲ್ಲಿ ಇದ್ದೇವೆಯೇ ಎಂಬ ಅನುಮಾನ ಮೂಡುತ್ತದೆ.

ಒಬಾಮ ಅವರು ಸಂಚರಿಸುವ ಕಾರು, ತಿನ್ನುವ ಆಹಾರ ಮುಂತಾದವುಗಳ ಬಗ್ಗೆ ಅತಿಯಾದ ಕಾಳಜಿ ವಹಿಸಲಾಗುತ್ತಿದೆ. ಆದರೆ ಅಮೆರಿಕಕ್ಕೆ ಭೇಟಿ ನೀಡುವ ಭಾರತದ ರಾಷ್ಟ್ರಪತಿ, ಪ್ರಧಾನಿ ಅವರಂತಹ ಉನ್ನತ ವ್ಯಕ್ತಿಗಳಿಗೆ ಅವರು ಹೆಚ್ಚೇನೂ ಪ್ರಾಮುಖ್ಯ ನೀಡುವುದಿಲ್ಲ. ಭಾರತೀಯರು ಮಾತ್ರ ಹಿಂದಿನ ಕಾಲದ  ರಾಜರನ್ನು ಬರಮಾಡಿಕೊಳ್ಳುತ್ತಿದ್ದಂತೆ ಅಮೆರಿಕನ್ನರಿಗೆ ಅತಿಥಿ ಸತ್ಕಾರ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ.

ನರೇಂದ್ರ ಮೋದಿಯವರಿಗೆ ಹಿಂದೆ ವೀಸಾ ನೀಡಲು ಅಮೆರಿಕ ಹಿಂದೆಮುಂದೆ ನೋಡಿತ್ತು. ಈಗ ಅವರೇ ಪ್ರಧಾನಿಯಾಗಿರುವಾಗ ಅಮೆರಿಕದ ಅಧ್ಯಕ್ಷರನ್ನು ಅತಿ ಅದ್ದೂರಿಯಾಗಿ ಸ್ವಾಗತಿಸಿರುವುದು ಎಷ್ಟು ಸರಿ? ಹೀಗೆ ವಿದೇಶಿ ಗಣ್ಯರಿಗೆ ಖರ್ಚು ಮಾಡುವ ಹಣವನ್ನು ಬಡವರ ಶ್ರೇಯೋಭಿವೃದ್ಧಿಗೆ ಖರ್ಚು  ಮಾಡಿದರೆ ಎಷ್ಟೋ ಮಂದಿ ನೆಮ್ಮದಿಯ ಬದುಕು ಸಾಗಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT