ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕೃತ ಹೆಸರನ್ನು ಬದಲಿಸಬಹುದೆ?

Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಯಾರೇ ಆಗಲಿ ತಮ್ಮ ಪೂರ್ವಗ್ರಹಕ್ಕೆ ತಕ್ಕಂತೆ ಯಾವುದೇ ಐತಿಹಾಸಿಕ ಸ್ಥಳದ ಅಧಿಕೃತ ಹೆಸರು ಬದಲಾಯಿಸಬಹುದೇ?  ಮಂಗಳೂರಿನಲ್ಲಿ ಭಾನುವಾರ ಜರುಗಿದ ಹಿಂದೂ ಸಮಾಜೋತ್ಸವದ ಪ್ರಚಾರ ಪತ್ರ ಹಾಗೂ ಬ್ಯಾನರ್‌ಗಳಲ್ಲಿ ಮಂಗಳೂರಿನ ಪ್ರಮುಖ ಸಾರ್ವಜನಿಕ ಮೈದಾನವಾದ ನೆಹರೂ ಮೈದಾನದ ಹೆಸರನ್ನು ಉದ್ದೇಶಪೂರ್ವಕವಾಗಿ  ಕೇಂದ್ರ ಮೈದಾನ ಎಂದು ಪ್ರಿಂಟ್ ಮಾಡಿಸಿದ್ದರು. ಏಕೆ ಹೀಗೆ?

ನೆಹರೂ ಮೈದಾನವೆಂಬುದು ಹೊಸ ಹೆಸರಲ್ಲ, ಇದು ಅರವತ್ತು ವರ್ಷಗಳ ಹಳೆಯ ಹೆಸರು!  ಸ್ವಾತಂತ್ರ್ಯಪೂರ್ವ­ದಲ್ಲಿ ಈ ಮೈದಾನಕ್ಕೆ ಬ್ರಿಟಿಷರು ‘ಸೆಂಟ್ರಲ್ ಮೈದಾನ್’ ಎಂದು ಕರೆಯುತ್ತಿದ್ದರಂತೆ.  ಆದರೆ ಸ್ವಾತಂತ್ರ್ಯ ಸಿಕ್ಕ ಸ್ವಲ್ಪ ಸಮಯಕ್ಕೇ ಅದಕ್ಕೆ ‘ನೆಹರೂ ಮೈದಾನ’ ಎಂದು ಹೆಸರಿಸಲಾಯಿತು.

ಹಾಗಾಗಿ ಅದು ನೆಹರೂ ಮೈದಾನವೆಂದೇ ಎಲ್ಲೆಡೆ ಜನಜನಿತವಾಗಿದೆ.  ಆದರೆ ನಮ್ಮ ದೇಶದ ಎಲ್ಲಾ ಕೆಡುಕಿಗೂ ಬ್ರಿಟಿಷರು ಹಾಗೂ ಅವರ ಮೆಕಾಲೆ ಶಿಕ್ಷಣವೇ ಕಾರಣವೆಂದು  ಅಡಿಗಡಿಗೆ ದೂಷಿಸುವ ಹಿಂದೂ ಸಂಘಟನೆಯವರು ಈಗ ಮಾತ್ರ ಬ್ರಿಟಿಷರು ಇಟ್ಟ ಹಳೆಯ ಹೆಸರನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಿರುವುದು ವಿಪರ್ಯಾಸ. 
–ವೀರಪ್ಪ  ಡಿ.ಎನ್.
ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT