ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಕುಮಾರ್‌ ವಿರುದ್ಧ ಆರೋಪ

ಮಾರ್ಗಸೂಚಿ ಉಲ್ಲಂಘನೆ
Last Updated 17 ಏಪ್ರಿಲ್ 2014, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಮತಗಟ್ಟೆಗಳ ಬಳಿಯ ಬಿಜೆಪಿ ಏಜೆಂಟ್‌ಗಳ ಟೆಂಟ್‌ನಲ್ಲಿ ಬಿಜೆಪಿ ನಾಯಕರ ಭಾವಚಿತ್ರ ಇರುವ ಬ್ಯಾನರ್‌ ಹಾಕುವ ಮೂಲಕ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್‌ ಅವರು ಚುನಾವಣಾ ಆಯೋಗದ ಮಾರ್ಗ­ಸೂಚಿಗಳನ್ನು ಉಲ್ಲಂ­ಘಿ­ಸಿ­ದ್ದಾರೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ನಂದನ್‌ ನಿಲೇಕಣಿ ಆರೋಪಿಸಿದ್ದಾರೆ.

‘ಮತಗಟ್ಟೆಗಳ ಬಳಿಯಲ್ಲಿ ಅಭ್ಯರ್ಥಿಯ ಹೆಸರು, ಪಕ್ಷ ಹಾಗೂ ಚಿಹ್ನೆ ಇರುವ ಒಂದೇ ಬ್ಯಾನರ್‌­ಗಳನ್ನು ಹಾಕಬಹುದು. ಬ್ಯಾನರ್‌­ನಲ್ಲಿ ಭಾವಚಿತ್ರ ಹಾಕ­ಬಹುದು’ ಎಂದು ಚುನಾವಣಾ ಆಯೋಗ ಮಾರ್ಗಸೂಚಿ ಹೊರಡಿಸಿದೆ.

ಆದರೆ, ಅನಂತಕುಮಾರ್‌ ಈ ಮಾರ್ಗಸೂಚಿ ಉಲ್ಲಂಘಿಸಿ ತನ್ನ ಭಾವಚಿತ್ರದ ಜೊತೆಗೆ ನರೇಂದ್ರ ಮೋದಿ, ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌­ಕೃಷ್ಣ ಅಡ್ವಾಣಿ ಅವರ ಭಾವಚಿತ್ರಗಳನ್ನು ಹಾಕಿ­ದ್ದಾರೆ. ಈ ವಿಷಯವನ್ನು ಚುನಾ­ವಣಾ ಆಯೋಗದ ಗಮನಕ್ಕೆ ತರಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT