ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ: 10 ಜನರ ಸಜೀವ ದಹನ

Last Updated 14 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಇಲ್ಲಿನ ರಾಷ್ಟ್ರೀಯ ಹೆದ್ದಾರಿ­ಯಲ್ಲಿ ಮೋಟಾರ್‌ ಸೈಕ­ಲ್‌­ಗಳನ್ನು ಸಾಗಿಸು­ತ್ತಿದ್ದ ಲಾರಿಗೆ ರಾಸಾ­ಯ­ನಿಕ ಅನಿಲ ತುಂಬಿದ್ದ ಟ್ಯಾಂಕರ್‌ ಡಿಕ್ಕಿಯಾಗಿ ಕೆಳಗೆ ಬಿದ್ದು ಸ್ಫೋಟಿ­ಸಿದ ಪರಿಣಾಮ ಕನಿಷ್ಠ 10 ಜನರು ಸಜೀವ ದಹನವಾಗಿದ್ದು, ಇತರ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಸ್ಫೋಟದಿಂದ ಭಾರಿ ಬೆಂಕಿ ಹತ್ತಿ­­ಕೊಂಡ ಕಾರಣ ಅದೇ ಸಂದರ್ಭದಲ್ಲಿ ಇಲ್ಲಿಗೆ ಸಮೀಪದ ದೆಹಲಿ-ಜೈಪುರ ಹೆದ್ದಾರಿ­ಯಲ್ಲಿ ಚಲಿಸುತ್ತಿದ್ದ ಇತರ ಒಂಬತ್ತಕ್ಕೂ ಹೆಚ್ಚು ವಾಹನಗಳು ಅಗ್ನಿ­ಗಾಹುತಿ­ಯಾಗಿವೆ. ಶನಿವಾರ ರಾತ್ರಿ ಸಂಭವಿಸಿದ ಈ ಅಪ­ಘಾತದಿಂದ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆವರೆಗೂ ವಾಹನ  ಸಂಚಾರ ಸ್ಥಗಿತವಾಗಿತ್ತು. ಬೆಂಕಿ ನಂದಿ­ಸಲು ಹಲವು ಅಗ್ನಿಶಾಮಕ ವಾಹ­ನ­ಗಳು ಮಧ್ಯಾಹ್ನದವರೆಗೂ ಶ್ರಮಿಸಿವೆ.

ಈ ಟ್ಯಾಂಕರ್‌ನಲ್ಲಿ ಕೃತಕ ರಬ್ಬರಿನ ತಯಾ­ರಿಕೆಗೆ ಬಳ­ಸುವ ಬ್ಯೂಟಡಿ­ಯೀನ್‌ ಹೆಸರಿನ ರಾಸಾಯ­ನಿಕ ಅನಿಲ­ವನ್ನು ತುಂಬಿ ಸಾಗಿಸಲಾಗು­ತ್ತಿತ್ತು.  ಈ ಟ್ಯಾಂಕರ್‌ ಮತ್ತು ಬೈಕ್‌ ತುಂಬಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿ ಕೆಳಗೆ ಬಿದ್ದ ಪರಿಣಾಮ ಅನಿಲ ಸೋರಿಕೆ ಉಂಟಾಗಿ ಬೆಂಕಿ ಹತ್ತಿಕೊಂಡಿದೆ. ಇದರಿಂದ ಚೂರು­ಗಳು ಹಾರಿ, ಒಂದು ಮಾರುತಿ ಕಾರು, ಪ್ರತ್ಯೇಕ ಅನಿಲ ಮತ್ತು ಸಾಸಿವೆ ಎಣ್ಣೆ ತುಂಬಿದ್ದ ಎರಡು ಟ್ಯಾಂಕರ್‌ಗಳು ಹಾಗೂ ಇತರ ಆರು ಲಾರಿಗಳು ಸಹ ಬೆಂಕಿಗಾಹುತಿಯಾಗಿವೆ. ಜತೆಗೆ ಹೆದ್ದಾರಿ ಪಕ್ಕದ ದೇವಾಲಯ ಮತ್ತು ಅಂಗ­ಡಿಗೂ ಹಾನಿಯಾಗಿದೆ ಎಂದು ಜಿಲ್ಲಾ­ಧಿ­ಕಾರಿ ಕೃಷ್ಣ ಕುನಾಲ್‌ ತಿಳಿಸಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಇಲ್ಲಿನ ನಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರ ಸ್ಥಿತಿ ಚಿಂತಾ­ಜನಕ­ವಾಗಿದೆ.  ಮೃತ­­ರಲ್ಲಿ ಕೆಲವರನ್ನು ಗುರುತಿಸಲಾಗ­ದಷ್ಟು ಕರಕಲಾಗಿದ್ದು ಆರು ಶವಗಳನ್ನು ಮಾತ್ರ ಗುರುತಿಸಲಾಗಿದೆ. ಅಪಘಾತ­ಕ್ಕೀ­ಡಾದ ಟ್ಯಾಂಕರ್‌ ಮಾಲೀ­ಕತ್ವ ಸಂಸ್ಥೆ, ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಎಫ್‌ಐಆರ್‌ ದಾಖಲಿಸ­ಲಾಗಿದೆ ಎಂದು ಗ್ರಾಮಾಂತರ ಪೊಲೀಸ್‌ ವರಿಷ್ಠಾ­ಧಿ­ಕಾರಿ ನಿತಿನ್‌ ದಾಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT