ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧವೇನೂ ಅಲ್ಲ: ಪೊಲೀಸ್‌ ವರದಿ

ವೈವಾಹಿಕ ಸ್ಥಿತಿ ದಾಖಲಿಸದ ಮೋದಿ
Last Updated 22 ಮೇ 2014, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ನಿಯೋ­ಜಿತ ಪ್ರಧಾನಿ ನರೇಂದ್ರ ಮೋದಿ ಅವರು 2012ರ ವಿಧಾನಸಭೆ ಚುನಾ­ವ­ಣೆಯ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ವೈವಾ­ಹಿಕ ಸ್ಥಿತಿ ಬಗ್ಗೆ ದಾಖಲಿ­ಸದೇ ಇದ್ದುದು ಮೇಲ್ನೋಟಕ್ಕೆ ಅಪ­ರಾ­ಧ­­ವೆಂದೇನೂ ತೋರುವುದಿಲ್ಲ ಎಂದು ಗುಜ­ರಾತ್‌ ಪೊಲೀಸರು ವರದಿ ಸಲ್ಲಿಸಿದ್ದಾರೆ.

ಪೊಲೀಸರು ಗುರುವಾರ ಈ ವರದಿ­ಯನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನಾಮಪತ್ರದ ಜತೆ ಲಗತ್ತಿಸುವ ಪ್ರಮಾಣ ಪತ್ರದಲ್ಲಿ ವೈವಾಹಿಕ ಸ್ಥಿತಿ ತಿಳಿಸದ ಮೋದಿ ಅವರ ಮೇಲೆ ಎಫ್‌ಐಆರ್‌ ದಾಖಲಿಸಲು ಪೊಲೀ­ಸ­ರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತ ನಿಶಾಂತ್‌ ವರ್ಮಾ ಎಂಬುವವರು ಕೋರ್ಟ್‌ಗೆ ಅರ್ಜಿ ಹಾಕಿದ್ದರು.

ಮೋದಿ ಅವರು ಈ ಮುಂಚಿನ ಯಾವ ಚುನಾವಣೆಯಲ್ಲೂ ವೈವಾಹಿಕ ಸ್ಥಿತಿಯ ಕಾಲಂನ್ನು ತುಂಬದೇ ಹಾಗೆಯೇ ಬಿಟ್ಟಿದ್ದರು. ಇದೇ ಮೊದಲ ಸಲ ಲೋಕಸಭಾ ಚುನಾವಣೆಯ ವೇಳೆ,  ತಮ್ಮ ಪತ್ನಿಯ ಹೆಸರು ಜಶೋದಾ ಬೆನ್‌ ಎಂದು ಬಹಿರಂಗಗೊಳಿಸಿದ್ದರು.
ವರ್ಮಾ ಪರ ವಕೀಲ ಶಮ್‌ಶದ್‌ ಪಠಾಣ್‌, ಪೊಲೀಸರು ವರದಿಯ ಪ್ರತಿಯನ್ನು ತಮ್ಮ ಕಕ್ಷಿದಾರನಿಗೆ ನೀಡಿಲ್ಲ ಎಂದರು.

ಆಗ ಮ್ಯಾಜಿಸ್ಟ್ರೇಟ್‌ ಎಂ.ಎಂ.ಶೇಖ್‌ ಅವರು ಪೊಲೀಸರಿಗೆ ವರದಿಯ ಪ್ರತಿಯನ್ನು ನೀಡಲು ಸೂಚಿಸಿ, ಮುಂದಿನ ವಿಚಾರಣೆಯನ್ನು ಜೂನ್‌ 7ಕ್ಕೆ ನಿಗದಿ ಮಾಡಿದರು. ವರ್ಮಾ ಈ ಮುನ್ನ, ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರನ್ನು ಕೋರಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರಿಂದ ನ್ಯಾಯಾಲಯದ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT