ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪಕ್ಕೆ ದರ್ಶನ ನೀಡಲು ನರೇಂದ್ರ ಮೋದಿ ದೇವರೇ..?

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಅಪರೂಪಕ್ಕೆ ದರ್ಶನ ನೀಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ದೇವರೇ ?’ ಕಾಂಗ್ರೆಸ್‌  ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಲೋಕ­ಸಭೆಯಲ್ಲಿ ಈ ಪ್ರಶ್ನೆ ಕೇಳಿದಾಗ ಸದಸ್ಯರೆಲ್ಲ ನಗೆಗಡಲಿನಲ್ಲಿ ತೇಲಿದರು.

ಮೋದಿ ವಾರಕ್ಕೊಮ್ಮೆಯಾದರೂ ಸಂಸತ್‌ಗೆ ಮುಖ ತೋರಿಸಬೇಕು ಎಂದು ಖರ್ಗೆ ಲೋಕಸಭೆಯಲ್ಲಿ ಮಂಗಳವಾರ ಹೇಳಿದ್ದರು.
ಮೋದಿ ಬುಧವಾರ ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸದನದಲ್ಲಿ ಕಾಣಿಸಿಕೊಂಡರು.

ತಕ್ಷಣವೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ‘ ಖರ್ಗೆ ಅವರೇ ಈ ದಿನ ನಿಮಗೆ ಪ್ರಧಾನಿ ದರ್ಶನ ಕೊಟ್ಟರು’ ಎಂದು ತಿರುಗೇಟು ನೀಡಿದರು. ಆಗ ಖರ್ಗೆ ‘ದರ್ಶನ ನೀಡುವುದಕ್ಕೆ ಅವರೇನು ದೇವರೇ’ ಎಂದು ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT