ನವದೆಹಲಿ (ಪಿಟಿಐ): ಇರಾಕ್ನ ಮೊಸುಲ್ ಪಟ್ಟಣದಲ್ಲಿ ಅಪಹೃತಗೊಂಡಿರುವ 40 ಭಾರತೀಯ ಕಾರ್ಮಿಕರು ಇರುವ ನೆಲೆಯನ್ನು ಇರಾಕ್ನ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದಿರುವ ಕೇಂದ್ರ ಸರ್ಕಾರ, ಅಪಹೃತರ ಸುರಕ್ಷಿತ ಬಿಡುಗಡೆಗೆ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಗುರುವಾರ ಭರವಸೆ ನೀಡಿದೆ.

ಅಲ್ಲದೇ, ಅಪಹೃತರು ಸೇರಿದಂತೆ ಇರಾಕ್ನ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ 120 ಭಾರತೀಯ ಪ್ರಜೆಗಳಿದ್ದು, ಅವರು ಪಂಜಾಬ್, ಕೇರಳ ಹಾಗೂ ಇತರೆ ರಾಜ್ಯಗಳಿಗೆ ಸೇರಿದವರು ಎಂದೂ ಸರ್ಕಾರ ಹೇಳಿದೆ.

ಅಪಹೃತರ ಹಾಗೂ ಹಿಂಸಾ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚುತ್ತಿರುವ ಬೆನ್ನಿಗೆ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಪರಿಸ್ಥಿತಿ ನಿರ್ವಹಣಾ ತಂಡದೊಂದಿಗೆ ಎರಡು ಬಾರಿ ಸಭೆ ನಡೆಸಿದರು.

‘ಇತರೆ ರಾಷ್ಟ್ರಗಳ ಪ್ರಜೆಗಳೂ ಸೇರಿದಂತೆ ಅಪಹೃತಗೊಂಡ ಭಾರತೀಯ ಪ್ರಜೆಗಳನ್ನು ಬಂಧಿಸಿಟ್ಟಿರುವ ತಾಣವನ್ನು ಪತ್ತೆ ಮಾಡಿರುವುದಾಗಿ ಇರಾಕ್ನ ವಿದೇಶಾಂಗ ಸಚಿವಾಲಯ ನಮಗೆ ಮಾಹಿತಿ ನೀಡಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.

ಅಲ್ಲದೇ, ಅಪಹರಣಕಾರರಿಂದ ಹಣಕ್ಕಾಗಿ ಯಾವುದೇ ಬೇಡಿಕೆ ಬಂದಿಲ್ಲ. ಈ ಅಪಹರಣದ ಹಿಂದೆ ಇರಾಕಿನ ಮೊಸುಲ್ ಪಟ್ಟಣವನ್ನು ವಶಕ್ಕೆ ಪಡೆದಿರುವ ಸುನ್ನಿ ಉಗ್ರರ ಗುಂಪು ಐಎಸ್ಐಎಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ) ಕೈವಾಡ ಇದೆಯೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ ಎಂದೂ ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.