ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳಲ್ಲಿ ವಿರಾಟ್‌ ಕೊಹ್ಲಿ ಧ್ಯಾನ

ಗುಜರಾತ್‌ ಲಯನ್ಸ್‌ ವಿರುದ್ಧ ಕ್ವಾಲಿಫೈಯರ್ ಪಂದ್ಯ, ಇಂದು ಗೆದ್ದವರು ಫೈನಲ್‌ಗೆ
Last Updated 23 ಮೇ 2016, 19:34 IST
ಅಕ್ಷರ ಗಾತ್ರ

ಬೆಂಗಳೂರು: ವಿರಾಟ್‌ ಕೊಹ್ಲಿ....
ಕೆಲವೇ ವರ್ಷಗಳಲ್ಲಿ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳ ಮನಸ್ಸು ಗೆದ್ದಿ ರುವ ಅತ್ಯದ್ಭುತ ಶಕ್ತಿ ಈ ಹೆಸರಿನಲ್ಲಿದೆ. ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಎಂದಾಕ್ಷಣ ವಿರಾಟ್‌ ಕೊಹ್ಲಿ ಎನ್ನುವಷ್ಟರ ಮಟ್ಟಿಗೆ ಅವರು ಈ ಬಾರಿಯ ಐಪಿಎಲ್‌ನಲ್ಲಿ ಹೆಸರು ಮಾಡಿ ದ್ದಾರೆ. ಅಷ್ಟೇ ಏಕೆ ತಂಡದ ಆಟಗಾರ ರೆಲ್ಲರೂ ಕೊಹ್ಲಿ ಅವರ ಅಭಿಮಾನಿಗಳಾಗಿದ್ದಾರೆ.

ಅಪೂರ್ವ ಫಾರ್ಮ್‌ ಮತ್ತು ಉತ್ತಮ ನಾಯಕತ್ವದಿಂದ ಏನೆಲ್ಲಾ ಯಶಸ್ಸು ಸಾಧ್ಯ ಎನ್ನುವುದನ್ನು ಕೊಹ್ಲಿ ತೋರಿಸಿಕೊಟ್ಟಿದ್ದಾರೆ. ಇವರ ಮುಂದಾ ಳತ್ವದ ಬೆಂಗಳೂರು ತಂಡ ಐಪಿಎಲ್‌ ಟೂರ್ನಿಯಲ್ಲಿ ಮೂರನೇ ಬಾರಿ ಫೈನಲ್‌ ಪ್ರವೇಶಿಸುವ ಆಸೆ ಹೊಂದಿದ್ದು ಮಂಗಳ ವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್‌ ಲಯನ್ಸ್ ಎದುರು ಪೈಪೋಟಿ ನಡೆಸಲಿದೆ.

ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಎಂಟರಲ್ಲಿ ಜಯ ಪಡೆದು ಪಾಯಿಂಟ್ಸ್ ಪಟ್ಟಿಯಲ್ಲಿ ಎರ ಡನೇ ಸ್ಥಾನ ಗಳಿಸಿದೆ. ಬೆಂಗಳೂರಿನ ತಂಡ ಟೂರ್ನಿಯ ಆರಂಭದ ಪಂದ್ಯಗ ಳಲ್ಲಿ ಉತ್ತಮ ಪ್ರದರ್ಶನ ನೀಡಿ ನಂತರ ನೀರಸ ಆಟವಾಡಿತ್ತು. ಆದರೆ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಸತತ ಗೆಲುವು ಪಡೆದು   ಕ್ವಾಲಿಫೈಯರ್‌ಗೆ ಅರ್ಹತೆ ಗಳಿಸಿದೆ.

ಆರ್‌ಸಿಬಿ ಪಡೆದ ಎಲ್ಲಾ ಪಂದ್ಯಗಳ ಗೆಲುವುಗಳ ಹಿಂದೆ ಕೊಹ್ಲಿ ಅವರ ಬ್ಯಾಟಿಂಗ್ ಶಕ್ತಿ ಮತ್ತು ದಿಟ್ಟ ನಾಯಕ ತ್ವವಿದೆ. ಲೀಗ್ ಹಂತದಲ್ಲಿ  ಅವರು ಒಟ್ಟು 919 ರನ್‌ ಕಲೆ ಹಾಕಿ ಐಪಿಎಲ್‌ನ ಕೆಲವು ದಾಖಲೆಗಳನ್ನು ಚೂರು ಚೂರು ಮಾಡಿದ್ದಾರೆ. 152.40ರ ಸರಾಸರಿಯಲ್ಲಿ ನಾಲ್ಕು ಶತಕ ಮತ್ತು ಆರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಲೀಗ್ ಹಂತ ದಲ್ಲಿ ಲಯನ್ಸ್ ವಿರುದ್ಧ ಆರ್‌ಸಿಬಿ ಎರಡು ಪಂದ್ಯಗಳನ್ನಾಡಿದ್ದು, ಒಂದರಲ್ಲಿ ಸೋತು ಮತ್ತೊಂದರಲ್ಲಿ ಗೆಲುವು ಪಡೆದಿದೆ. ಈ ಎರಡೂ ಪಂದ್ಯಗಳಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಕೊಹ್ಲಿ ಶತಕ ಬಾರಿಸಿದ್ದು ವಿಶೇಷ.

ರಾಯಪುರದಲ್ಲಿ ಭಾನುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ಎದುರು ಆರ್‌ಸಿಬಿ ತಂಡಕ್ಕೆ ಗೆಲುವು ಅನಿವಾರ್ಯವಾಗಿತ್ತು. ಒಂದು ವೇಳೆ ಆ ಪಂದ್ಯದಲ್ಲಿ ಸೋತಿದ್ದರೆ ಲೀಗ್ ಹಂತದಿಂದಲೇ ಹೊರಬೀಳ ಬೇಕಾಗುತ್ತಿತ್ತು. ಇಂಥ ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಬಾರಿಸಿ ದ್ದರು. ಇವರ ಆಟಕ್ಕೆ   ಕರ್ನಾಟಕದ ಕೆ.ಎಲ್‌. ರಾಹುಲ್‌ ಕೂಡ ಬೆಂಬಲ ಕೊಡುತ್ತಿದ್ದಾರೆ.

ರಾಹುಲ್‌ ಒಂಬತ್ತನೇ ಆವೃತ್ತಿಯಲ್ಲಿ 12 ಪಂದ್ಯಗಳನ್ನಾಡಿದ್ದು ಒಟ್ಟು 386 ರನ್‌ ಗಳಿಸಿದ್ದಾರೆ. ನಾಲ್ಕು ಅರ್ಧಶತಕ ಗಳನ್ನೂ ಬಾರಿಸಿದ್ದಾರೆ. ಸ್ಫೋಟಕ ಆಟಕ್ಕೆ ಹೆಸರಾಗಿರುವ ಎ.ಬಿ ಡಿವಿಲಿಯರ್ಸ್, ಶೇನ್ ವ್ಯಾಟ್ಸನ್‌ ಮತ್ತು  ಕ್ರಿಸ್‌ ಗೇಲ್‌ ಕೂಡ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದಾರೆ.

ಎಲ್ಲಾ ಪಂದ್ಯಗಳಲ್ಲಿ ಕೊಹ್ಲಿಯೇ ಜವಾಬ್ದಾರಿಯುತವಾಗಿ ಆಡುತ್ತಿರುವ ಕಾರಣ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ಗಳಿಗೆ ಬ್ಯಾಟ್‌ ಮಾಡಲು ಹೆಚ್ಚು ಅವಕಾಶವೇ ಸಿಗುತ್ತಿಲ್ಲ.

ಕೊಹ್ಲಿ, ಡಿವಿಲಿಯರ್ಸ್, ವ್ಯಾಟ್ಸನ್‌ ಮತ್ತು ರಾಹುಲ್‌ ಉತ್ತಮ ಫಾರ್ಮ್‌ನಲ್ಲಿ  ಇದ್ದಾರೆ. ಆದರೆ ಅಭಿಮಾನಿಗಳು ಕಾತರ ದಿಂದ ಕಾಯುತ್ತಿರುವುದು ಗೇಲ್‌ ಅಬ್ಬ ರಕ್ಕೆ. ಎಡಗೈ ಬ್ಯಾಟ್ಸ್‌ಮನ್‌ ಗೇಲ್‌ ನೈಟ್‌ ರೈಡರ್ಸ್‌ ಮತ್ತು ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧದ ಪಂದ್ಯಗಳಲ್ಲಿ ಕ್ರಮ ವಾಗಿ 49 ಹಾಗೂ 73 ರನ್ ಬಾರಿಸಿ ದ್ದರು. ಈ ಎರಡು ಇನಿಂಗ್ಸ್‌ ಹೊರತುಪ ಡಿಸಿದರೆ ಉಳಿದ ಪಂದ್ಯಗಳಲ್ಲಿ  ಎರಡಂಕಿಯ ಮೊತ್ತ ಕೂಡ ದಾಟಿಲ್ಲ. ಹಾಗಂದ ಮಾತ್ರಕ್ಕೆ ಗೇಲ್‌ ಅವರನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ ಅವರು ಯಾವ ಹಂತದಲ್ಲಿಯಾದರೂ ಸಿಡಿಯಬಲ್ಲ ಸುನಾಮಿ.

ವಿಶ್ವಾಸ ಹೆಚ್ಚಿಸಿದ ಬೌಲಿಂಗ್‌ ಶಕ್ತಿ: ಈ ಬಾರಿಯ ಲೀಗ್‌ ಹಂತದಲ್ಲಿ ಒಟ್ಟು 115 ಪಂದ್ಯಗಳು ನಡೆದಿವೆ. ಬಹುತೇಕ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ ಅಬ್ಬರ ದಿಂದಲೇ ತಂಡಗಳು ಗೆಲುವು ಪಡೆದಿವೆ.

ಅದರಲ್ಲೂ ಆರ್‌ಸಿಬಿ ತಂಡದ ಸೋಲು ಗೆಲುವುಗಳು ನಿರ್ಧರಿತ ವಾಗಿದ್ದೇ ಬ್ಯಾಟ್ಸ್‌ಮನ್‌ಗಳ ಮೂಲಕ. ಆದರೆ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬೌಲಿಂಗ್ ಮೂಲಕ ಮಿಂಚಿತ್ತು.

ಯಜುವೇಂದ್ರ ಚಾಹಲ್‌, ಸಾಂದ ರ್ಭಿಕ ಬೌಲರ್‌ ಕ್ರಿಸ್‌ ಗೇಲ್ ಅವರ ಚುರುಕಿನ ಬೌಲಿಂಗ್‌ನಿಂದ ಡೆಲ್ಲಿ ತಂಡ ವನ್ನು 138 ರನ್‌ಗೆ ಕಟ್ಟಿ ಹಾಕಿತ್ತು. ಇಕ್ಬಾಲ್‌ ಅಬ್ದುಲ್ಲಾ ಮತ್ತು ಕ್ರಿಸ್‌ ಜೋರ್ಡಾನ್‌ ತಲಾ ಎರಡು ಓವರ್ ಬೌಲ್‌ ಮಾಡಿ  ಕ್ರಮವಾಗಿ ತಲಾ 14 ಮತ್ತು 10 ರನ್ ಮಾತ್ರ ಕೊಟ್ಟಿದ್ದರು. ಇದರಿಂದ ಬೆಂಗಳೂರು ತಂಡದ ಗೆಲುವು ಸುಲಭವಾಗಿತ್ತು. ಈ ಅಂಶ ಚೊಚ್ಚಲ ಟ್ರೋಫಿ ಜಯಿಸುವ ಆಸೆ ಹೊತ್ತಿರುವ ಬೆಂಗಳೂರು   ತಂಡದ ವಿಶ್ವಾಸವನ್ನು ಇಮ್ಮಡಿಸಿದೆ.

ಹೊಸ ತಂಡದ ಹುಮ್ಮಸ್ಸು: ಸುರೇಶ್‌ ರೈನಾ ನಾಯಕತ್ವದ ಲಯನ್ಸ್ ತಂಡ ತನ್ನ ಚೊಚ್ಚಲ ಟೂರ್ನಿಯಲ್ಲಿಯೇ ನಾಕೌಟ್‌ ಹಂತ ಪ್ರವೇಶಿಸಿ ಭಾರಿ ಹುಮ್ಮಸ್ಸಿನಲ್ಲಿದೆ.

ಲೀಗ್ ಹಂತದಲ್ಲಿ ಒಂಬತ್ತು ಪಂದ್ಯಗಳಲ್ಲಿ ಜಯ ಪಡೆದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಆ್ಯರನ್‌ ಫಿಂಚ್‌ , ಬ್ರೆಂಡನ್ ಮೆಕ್ಲಮ್‌, ಡ್ವೇನ್‌ ಸ್ಮಿತ್‌  ಮತ್ತು ರೈನಾ ಅವರ  ಮೇಲೆ ಲಯನ್ಸ್ ತಂಡದ ಬ್ಯಾಟಿಂಗ್‌ ಅವಲಂಬಿತವಾಗಿದೆ.

ಫಿಂಚ್‌ ಮತ್ತು ದಿನೇಶ್ ಕಾರ್ತಿಕ್ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿ ಯನ್ಸ್ ಎದುರು ಎರಡಂಕಿಯ ಮೊತ್ತ ಕೂಡ ಗಳಿಸಿರಲಿಲ್ಲ.   ಬಲಿಷ್ಠ ಎದು ರಾಳಿನ ವಿರುದ್ಧದ ಪಂದ್ಯವಾದ ಕಾರಣ ಇವರು ಫಾರ್ಮ್‌ ಕಂಡುಕೊಳ್ಳಬೇಕಾದ ಅನಿವಾರ್ಯತೆಯಿದೆ.

ಸೋಮವಾರ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಲಯನ್ಸ್ ಆಟಗಾ ರರು ಬೌಲಿಂಗ್‌ ವಿಭಾಗಕ್ಕೆ ಒತ್ತು ಕೊಟ್ಟು  ಅಭ್ಯಾಸ ನಡೆಸಿದರು. ಈ ತಂಡದ ಬ್ಯಾಟಿಂಗ್ ಉತ್ತಮವಾಗಿದೆ.

ಸೋತರೆ ಮತ್ತೊಂದು ಅವಕಾಶ
ಕ್ವಾಲಿಫೈಯರ್‌ ಪ್ರವೇಶಿಸಿರುವ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾ ಬಾದ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್‌ ತಂಡಗಳು ತಲಾ 16 ಪಾಯಿಂಟ್ಸ್‌ ಹೊಂದಿವೆ. ಉತ್ತಮ ರನ್‌ರೇಟ್‌ ಹೊಂದಿ ರುವ ಕಾರಣ ಆರ್‌ಸಿಬಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಸಿಕ್ಕಿದೆ. ಮಂಗಳವಾರ ಗೆಲುವು ಪಡೆಯುವ ತಂಡ ಫೈನಲ್‌ ಪ್ರವೇಶಿಸಲಿದೆ. ಸೋತ ತಂಡ  ಮೇ 27ರಂದು ನವದೆಹಲಿಯಲ್ಲಿ ನಡೆಯುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಲಿದೆ. ಬುಧವಾರ ಸನ್‌ರೈಸರ್ಸ್‌ ಹಾಗೂ ನೈಟ್‌ ರೈಡರ್ಸ್‌ ನಡುವೆ ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮತ್ತು ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡಗಳು ಎರಡನೇ ಕ್ವಾಲಿಫೈಯರ್‌ನಲ್ಲಿ ಪ್ರಶಸ್ತಿ ಸುತ್ತಿಗಾಗಿ ಪೈಪೋಟಿ ನಡೆಸಲಿವೆ.

ಪಂದ್ಯ ಆರಂಭ: ರಾತ್ರಿ 8ಕ್ಕೆ      ನೇರ ಪ್ರಸಾರ: ಸೋನಿ ಸಿಕ್ಸ್‌

ತಂಡಗಳ ಶಕ್ತಿ

ಆರ್‌ಸಿಬಿ
*ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ.
* ವಿರಾಟ್‌ ಕೊಹ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ.
* ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ಪಡೆದ ವಿಶ್ವಾಸ.

ಲಯನ್ಸ್‌
* ಚುಟುಕು ಮಾದರಿಯ ಬ್ಯಾಟ್ಸ್‌ಮನ್‌ಗಳು ಹೆಚ್ಚಿದ್ದಾರೆ.
* ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.
* ಚೊಚ್ಚಲ ಟೂರ್ನಿಯಲ್ಲಿಯೇ ಪ್ಲೇ ಆಫ್‌ ಪ್ರವೇಶ.

ತಂಡಗಳ ದೌರ್ಬಲ್ಯ

ಆರ್‌ಸಿಬಿ
* ಚುರುಕಿನ ಬೌಲಿಂಗ್ ಮಾಡುವಲ್ಲಿ ಸ್ಥಿರತೆ ಇಲ್ಲ.
* ಕ್ರಿಸ್‌ ಗೇಲ್‌ ವೈಫಲ್ಯ.
* ಬೇಗನೆ ವಿಕೆಟ್‌ ಪಡೆಯುವಲ್ಲಿ ಆರಂಭಿಕ ಬೌಲರ್‌ಗಳು ವಿಫಲ.

ಲಯನ್ಸ್‌
* ಬ್ಯಾಟಿಂಗ್‌ನಲ್ಲಿ ಸ್ಥಿರತೆ ಇಲ್ಲ
* ದುರ್ಬಲ ಬೌಲಿಂಗ್‌
* ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT