ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ತಕ್ಕಂತೆ ಸೌಕರ್ಯಗಳೂ ಸಿಗಲಿ

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು ನಗರ ಎಲ್ಲಾ ದಿಕ್ಕುಗಳಲ್ಲಿ ಯದ್ವಾತದ್ವಾ ಬೆಳೆಯುತ್ತಿದೆ. ಇದೇ ವೇಗದಲ್ಲಿ ಬೆಳೆದರೆ ಜನರ ಪರಿಸ್ಥಿತಿ ಏನಾಗಬಹುದೆಂದು ಊಹಿಸಲಾಗುತ್ತಿಲ್ಲ. ಕೆಂಪೇಗೌಡರು ಬೆಂಗಳೂರನ್ನು  ಪ್ರತಿಷ್ಠಾಪಿಸಿ ಎಲ್ಲಾ ದಿಕ್ಕುಗಳಲ್ಲಿ ಗುರುತಿನ ಗೋಪುರಗಳನ್ನು ಕಟ್ಟಿಸಿದ್ದಾರೆ. ಅವರ ಉದ್ದೇಶ ಬೆಂಗಳೂರು ಈ ಗೋಪುರಗಳ ಆಚೆಗೆ ಬೆಳೆಯಬಾರದೆಂದೋ, ಗೋಪುರ­ಗಳವರೆಗೆ ಪಟ್ಟಣ ಬೆಳೆದರೆ ಸಾಕೆಂಬ ಉದ್ದೇಶವಿತ್ತೋ ಅರ್ಥವಾಗುತ್ತಿಲ್ಲ.

ಇಂದಿನ ಬೆಂಗಳೂರಿನ ಜನಸಂಖ್ಯೆ  ಮಿತಿ ಮೀರಿ ಬೆಳೆಯು­ತ್ತಿದೆ. ಪರಿಣಾಮ ಕುಡಿಯುವ ನೀರಿಗೆ ತೊಂದರೆ­ಯಾಗು­ತ್ತಿದೆ. ಮನೆಗಳಲ್ಲಿ ಉತ್ಪತ್ತಿಯಾದ ಕಸವನ್ನು ಸಾಗಿಸಲು ತೊಂದರೆ­ಯಾಗುತ್ತಿದೆ.  ಹೊಲ ಗದ್ದೆಗಳು ಮಾಯವಾ­ಗು­ತ್ತಿವೆ. ಜಮೀನು ಮಾರಿದ ರೈತರು ಅದರಿಂದ ಬಂದ ಹಣ­ವನ್ನು ಬೇಕಾಬಿಟ್ಟಿ ವಿನಿಯೋಗಿಸಿ ಭಿಕಾರಿ­ಯಾಗುತ್ತಿ­ದ್ದಾರೆ. ಸುತ್ತಮುತ್ತ ಇರುವ ಜಿಲ್ಲೆಗಳ ರೈತರು ವ್ಯವಸಾ­ಯವನ್ನು ಬಿಟ್ಟು ಪಟ್ಟಣದಲ್ಲಿ ಕೆಲಸಕ್ಕೆ ಸೇರಿ ಸರಿ­ಯಾದ ಮನೆಮಠ­ವಿಲ್ಲದೆ ಪರದಾಡುತ್ತಿದ್ದಾರೆ. ನಗರದಲ್ಲಿ ಬಸ್ಸುಗಳ ಸಂಚಾರಕ್ಕೆ ತಕ್ಕ­ ರಸ್ತೆಗಳಿಲ್ಲದೆ ಸಂಚಾರ ವ್ಯವಸ್ಥೆ ಅಧೋಗತಿ­ಗಿಳಿಯುತ್ತಿದೆ.

ಲ್ಯಾಂಡ್‌ ಡೆವೆಲಪರ್‌ಗಳ ಕೈಗೆ ಸಿಕ್ಕ ರೈತರು ತಮ್ಮ ಭೂಮಿ, ಮನೆ ಮಠಗಳನ್ನು ಕಳೆದುಕೊಳ್ಳುತ್ತಿದ್ದಾರೆ.  ಕೆರೆ­ಗಳು ನಾಶವಾಗುತ್ತಿವೆ, ಸಾವಿರಕ್ಕೂ ಅಧಿಕ ಹಳ್ಳಿಗಳನ್ನು ಬೆಂಗಳೂರು ನುಂಗಿದೆ ಎಂದು ಹೇಳಲಾಗುತ್ತದೆ. 

ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಬೇರೆ ಜಿಲ್ಲಾ ಮತ್ತು ತಾಲ್ಲೂಕು ಸ್ಥಳಗಳನ್ನು ಅಭಿವೃದ್ಧಿಪಡಿಸಿ ಕೈಗಾರಿಕೆ, ವಿದ್ಯಾ­ಭ್ಯಾಸಕ್ಕೆ ಅನುಕೂಲ ಮಾಡಿಕೊಡಲಿ. ಎಲ್ಲಾ ಜಿಲ್ಲಾ ಸ್ಥಳಗಳಲ್ಲಿ ಅಲ್ಲಿಯ ಅನುಕೂಲಕ್ಕೆ ತಕ್ಕಂತೆ ಅಲ್ಲಿಯ ಜನರಿಗೆ ಅಲ್ಲೇ ಉದ್ಯೋಗ ಸಿಗುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT