ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾಯಕ ಬಲಿಪಶು ಇನ್‌ಸ್ಪೆಕ್ಟರ್ ಅಮಾನತು

Last Updated 26 ಮೇ 2015, 19:55 IST
ಅಕ್ಷರ ಗಾತ್ರ

ಬೆಂಗಳೂರು: ಅಪಘಾತ ಮಾಡಿದ ಕಾರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವ ಬದಲಾಗಿ, ಪ್ರಕರಣಕ್ಕೆ ಸಂಬಂಧಪಡದ ವ್ಯಕ್ತಿಯನ್ನು ಬಂಧಿಸಲು ಮುಂದಾಗಿದ್ದ ಆರೋಪದ ಮೇಲೆ ಚಿಕ್ಕಜಾಲ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಟಿ.ಎಸ್.ಜಗದೀಶ್ ಅವರನ್ನು ಅಮಾನತು ಮಾಡಿ ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಸೋಮವಾರ ಆದೇಶಿಸಿದ್ದಾರೆ.

ಮೇ.20ರ ರಾತ್ರಿ 7.15ರ ಸುಮಾರಿಗೆ ಭವೇಶ್ ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿ, ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಕಾರು ಚಾಲನೆ ಮಾಡಿಕೊಂಡು ಹೋಗು ತ್ತಿದ್ದ. ಮೀನುಕುಂಟೆ ಕ್ರಾಸ್ ಬಳಿ ನಿಯಂತ್ರಣ ಕಳೆದುಕೊಂಡ ಆತ, ಬೈಕ್‌ಗೆ ಕಾರು ಗುದ್ದಿಸಿದ್ದ. ಘಟನೆಯಲ್ಲಿ ರಾಮಚಂದ್ರ ಎಂಬ ಖಾಸಗಿ ಕಂಪೆನಿ ಉದ್ಯೋಗಿ ಮೃತಪಟ್ಟು, ಅವರ ಸ್ನೇಹಿತ ಮನೋಜ್ ಗಾಯಗೊಂಡಿದ್ದರು.

ಘಟನೆ ನಂತರ ಭವೇಶ್, ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದ. ನಂತರ ಚಿಕ್ಕಜಾಲ ಪೊಲೀಸರು ನೋಂದಣಿ ಸಂಖ್ಯೆ ಆಧಾರದ ಮೇಲೆ ಕಾರು ಮಾಲೀಕ ದಿನೇಶ್ (ಭವೇಶ್ ತಂದೆ) ಅವರನ್ನು ಪತ್ತೆ ಮಾಡಿದ್ದರು. ಚಿಕ್ಕ ಪೇಟೆಯಲ್ಲಿ ಬಟ್ಟೆ ವ್ಯಾಪಾರಿಯಾಗಿರುವ ದಿನೇಶ್, ‘ನನ್ನ ಕಾರಿನಿಂದಲೇ ಅಪಘಾತವಾಗಿದೆ. ಆದರೆ, ಘಟನೆ ನಂತರ ನನ್ನ ಕಾರು ಚಾಲಕ ನಾಪತ್ತೆ ಯಾಗಿದ್ದಾನೆ. ಆತನ ಸುಳಿವು ಸಿಕ್ಕ ಕೂಡಲೇ ಠಾಣೆಗೆ ಕರೆದುಕೊಂಡು ಬರು ತ್ತೇನೆ’ ಎಂದು ಸುಳ್ಳು ಹೇಳಿ ಕಳುಹಿ ಸಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ದಿನೇಶ್ ಅವರು ತೇಜ ಎಂಬ ಯುವಕನನ್ನು ತಮ್ಮ ಕಾರು ಚಾಲಕನೆಂದು ಭಾನುವಾರ (ಮೇ.24) ಠಾಣೆಗೆ ಕರೆದುಕೊಂಡು ಬಂದಿದ್ದರು. ಅವರ ಮಾತನ್ನು ನಂಬಿದ್ದ ಇನ್‌ಸ್ಪೆಕ್ಟರ್‌ ಜಗದೀಶ್, ತೇಜನ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಇದೇ ವೇಳೆಗೆ ಠಾಣೆಗೆ ಬಂದ ಪಶ್ಚಿಮ (ಸಂಚಾರ) ವಿಭಾಗದ ಡಿಸಿಪಿ ಎಸ್. ಗಿರೀಶ್, ಪ್ರಕರಣ ಬಗ್ಗೆ ವಿಚಾರಣೆ ನಡೆಸಿ ದಾಗ ವಾಸ್ತವ ಸಂಗತಿ ಬೆಳಕಿಗೆ ಬಂದಿದೆ.

ಮೂರು ದಿನಗಳಿಂದ ನಾಪತ್ತೆ ಯಾಗಿದ್ದ ಕಾರಣಕ್ಕೆ ಡಿಸಿಪಿ ಗಿರೀಶ್, ಸಿಟ್ಟಿನಿಂದಲೇ ತೇಜನ ವಿಚಾರಣೆ ಪ್ರಾರಂಭಿಸಿದರು. ಇದರಿಂದ ಬೆದರಿದ ಆತ, ‘ನನಗೂ ಈ ಅಪಘಾತಕ್ಕೂ ಸಂಬಂ ಧವಿಲ್ಲ. ನಾನೇ ಅಪಘಾತ ಮಾಡಿದ್ದಾಗಿ ಒಪ್ಪಿಕೊಂಡರೆ ₹  20 ಸಾವಿರ ಕೊಡುವುದಾಗಿ ಹೇಳಿದ್ದರು. ಹಣದಾಸೆಗೆ ಒಪ್ಪಿಕೊಂಡಿದ್ದೆ’ ಎಂದು ಬಾಯ್ಬಿಟ್ಟಿದ್ದಾನೆ.

‘ಪ್ರಕರಣದ ಬಗ್ಗೆ ಸರಿಯಾಗಿ ವಿಚಾ ರಣೆ ಮಾಡದ ಕಾರಣಕ್ಕೆ ಇನ್‌ಸ್ಪೆಕ್ಟರ್‌ ಜಗದೀಶ್ ವಿರುದ್ಧ ಕಮಿಷನರ್‌ ಎಂ.ಎನ್.ರೆಡ್ಡಿ ಅವರಿಗೆ ವರದಿ ಸಲ್ಲಿಸ ಲಾಗಿತ್ತು. ಆ ವರದಿ ಅನ್ವಯ ಜಗದೀಶ್ ಅಮಾನತಾಗಿದ್ದಾರೆ’ ಎಂದು ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಚಾಲಕ ಬಂಧನ
‘ಅಪಘಾತಕ್ಕೆ ಕಾರಣನಾದ ಭವೇಶ್‌ನನ್ನು ಬಂಧಿಸಲಾಗಿದೆ. ಜತೆಗೆ ಸುಳ್ಳು ದೂರು ಕೊಡಲು ಬಂದಿದ್ದ ದಿನೇಶ್ ಮತ್ತು ತೇಜ ಅವರಿಗೆ ಕರೆದಾಗ ವಿಚಾರಣೆಗೆ ಹಾಜರಾಗು ವಂತೆ ಸೂಚಿಸಿ ಕಳುಹಿಸಲಾಗಿದೆ’ ಎಂದು ಚಿಕ್ಕಜಾಲ ಸಂಚಾರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT