ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಮುಂದುವರಿದ ಹಿಂಸಾಚಾರ

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಫರ್ಗ್ಯುಸನ್‌ (ಅಮೆರಿಕ) (ಎಎಫ್‌ಪಿ): ‘ಫರ್ಗ್ಯುಸನ್ ಪ್ರಕರಣ’ದಲ್ಲಿ ಕೋರ್ಟ್ ತೀರ್ಪಿನ ವಿರುದ್ಧ ನಡೆಯುತ್ತಿರುವ ಪ್ರತಿ­ಭಟನೆ ಅಮೆರಿಕದಾದ್ಯಂತ ಮುಂದು­ವರಿದಿದೆ. ಪ್ರತಿಭಟನಾಕಾರರು ಹಿಂಸಾ­ಚಾ­ರಕ್ಕೆ ಇಳಿದಿದ್ದು, 12 ಕಟ್ಟಡಗಳು, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಫರ್ಗ್ಯುಸನ್‌ನಲ್ಲಿ ಜನಾಂಗೀಯ ಗಲಭೆ ಉಂಟಾಗಿರುವುದ­ರಿಂದ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಮಿಸ್ಸೋರಿಯ ಸೇಂಟ್‌ ಲೂಯಿಸ್‌­ನಲ್ಲೂ ಪ್ರತಿಭಟನಾಕಾರರು ಪುರಭವ­ನದ ಕಿಟಕಿ ಗಾಜುಗಳಿಗೆ ಒಡೆದು ಹಾಕಿ­ದ್ದಾರೆ. ಪೊಲೀಸರ ಕಾರಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದಾರೆ. ಬಾಟಲ್‌ ಒಳಗೆ ಮೂತ್ರ ವಿಸರ್ಜಿಸಿ ಅದನ್ನು ಪೊಲೀಸರತ್ತ ತೂರಿದ್ದಾರೆ ಎನ್ನಲಾಗಿದೆ.

ನ್ಯೂಯಾರ್ಕ್‌ನಲ್ಲಿ ಸಾವಿ­ರಾರು ಪ್ರತಿಭಟನಾಕಾರರು ರಸ್ತೆ, ರೈಲು ತಡೆ ನಡೆಸಿದ್ದಾರೆ. ಹಲವರನ್ನು ಬಂಧಿಸಲಾ­ಗಿದೆ. ಲಾಸ್‌ ಏಂಜಲಿಸ್‌ ನಗರದಲ್ಲೂ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ವಾಷಿಂಗ್ಟನ್‌ನಲ್ಲಿ ಶ್ವೇತಭವನದ ಮುಂದೆ ಶಾಂತಿಯುತ ಪ್ರತಿಭಟನೆ ನಡೆ­ದಿದೆ.

ಪಶ್ಚಿಮ ಕರಾವಳಿಯ ಆಕ್ಲೆಂಡ್‌­ನಿಂದ ಪೂರ್ವದ ಅಟ್ಲಾಂಟ, ಫಿಲಿಡೆ­ಲ್ಫಿಯಾ, ಬಾಲ್ಟಿ­ಮೋರ್‌ ವರೆಗೂ ಪ್ರತಿಭಟನೆ ನಡೆದಿದೆ.ಹಿಂಸಾಚಾರಕ್ಕೆ ಇಳಿದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವು­ದಾಗಿ ಅಧ್ಯಕ್ಷ ಒಬಾಮ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT